ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಉದ್ಘಾಟನಾ ಸೀಸನ್ 2008 ರಲ್ಲಿ ನಡೆಯಿತು. ಇಲ್ಲಿಯವರೆಗೆ ಆಡಿದ ಲಾಭದಾಯಕ ಟಿ20 ಲೀಗ್ನ 16 ಆವೃತ್ತಿಗಳಲ್ಲಿ, ಅನೇಕ ಅಗ್ರ ಬ್ಯಾಟರ್ಗಳು ಮಿಂಚಿದ್ದಾರೆ. ಬೌಂಡರಿ ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಅಭಿಮಾನಿಗಳ ಮನ ರಂಜಿಸಿದ್ದಾರೆ. ಅದರಲ್ಲೂ ಐಪಿಎಲ್ ಪಂದ್ಯವೆಂದೆ ಸಿಕ್ಸರ್ಗಳ ಹಬ್ಬ. ದೈತ್ಯ ಬ್ಯಾಟರ್ಗಳು ಮೀಟರ್ಗಟ್ಟಲೆ ದೂರದ ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಈ ರೀತಿಯಾಗಿ ಇನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಐವರು ಬ್ಯಾಟರ್ಗಳ ವಿವರ ಇಲ್ಲಿ ನೀಡಲಾಗಿದೆ.
ಕ್ರಿಸ್ ಗೇಲ್ – 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 17 ಸಿಕ್ಸರ್
ಐಪಿಎಲ್ ಆರನೇ ಆವೃತ್ತಿಯ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪುಣೆ ವಾರಿಯರ್ಸ್ ಇಂಡಿಯಾ ಮುಖಾಮುಖಿಗಿತ್ತು. ಈ ಪಂದ್ಯ ಐಪಿಎಲ್ ಟೂರ್ನಿಯ ಸ್ಮರಣೀಯ ಇನಿಂಗ್ಸ್. ಆರಂಭಿಕರಾಗಿ ಬ್ಯಾಟ್ ಮಾಡಿದ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಅಕ್ಷರಶಃ ಅಬ್ಬರಿಸಿದ್ದಾರೆ. ಬೌಲರ್ಗಳು ದಿಕ್ಕೆಡುವಂತೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಜಮೈಕಾ ಮೂಲದ ಆಟಗಾರ 66 ಎಸೆತಗಳಲ್ಲಿ 175* ರನ್ ಗಳಿಸಿದ್ದರು. ಅವರ ಇನ್ನಿಂಗ್ಸ್ 13 ಬೌಂಡರಿಗಳು ಮತ್ತು 17 ಸಿಕ್ಸರ್ಗಳು ಸೇರಿಕೊಂಡಿವೆ. ಇವರು ಇನಿಂಗ್ಸ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
Gayle's 350th sixer in IPL pic.twitter.com/6uGRmpCQEE
— Chris (@Indiancric100) April 12, 2021
ಬ್ರೆಂಡನ್ ಮೆಕಲಮ್ – 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 13 ಸಿಕ್ಸರ್
ಇಂಡಿಯನ್ ಪ್ರೀಮಿಯರ್ ಲೀಗ್ 2008ರಲ್ಲಿ ಆರಂಭಗೊಂಡಿತು. ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗಳು ಮುಖಾಮುಖಿಯಾಗಿದ್ದವು. ಬ್ರೆಂಡನ್ ಮೆಕಲಮ್ ಅವರು ಈ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳ ಮೇಲೆ ಸವಾರಿ ಮಾಡಿದ್ದರು. ಅವರು 73 ಎಸೆತಗಳಲ್ಲಿ 158 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಹತ್ತು ಬೌಂಡರಿಗಳು ಮತ್ತು 13 ಸಿಕ್ಸರ್ಗಳು ಸೇರಿಕೊಂಡಿವೆ. ಈ 13 ಸಿಕ್ಸರ್ ಐಪಿಎಲ್ ಇನಿಂಗ್ಸ್ ಒಂದರ ವೈಯಕ್ತಿಕ ಗರಿಷ್ಠ ಸಿಕ್ಸರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಕ್ರಿಸ್ ಗೇಲ್ – 2012ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 13 ಸಿಕ್ಸರ್
ಐಪಿಎಲ್ 2012 ರ 67ನೇ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿಯ ಕ್ರಿಸ್ ಗೇಲ್ ಅಬ್ಬರಿಸಿದ್ದರು. ಗೇಲ್ ತಮ್ಮ ಪವರ್ ಹಿಟ್ಟಿಂಗ್ ಶಕ್ತಿಯನ್ನು ಈ ಪಂದ್ಯದಲ್ಲಿ ಪ್ರದರ್ಶಿಸಿದ್ದರು. ಕೇವಲ 62 ಎಸೆತಗಳಲ್ಲಿ 128* ರನ್ ಗಳಿಸಿ ಮಿಂಚಿದ್ದರು. ಲೆಜೆಂಡರಿ ಕ್ರಿಕೆಟಿಗ ತಮ್ಮ ಸ್ಫೋಟಕ ಇನ್ನಿಂಗ್ಸ್ನಲ್ಲಿ ಏಳು ಬೌಂಡರಿಗಳು ಮತ್ತು 13 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿ ಡಿವಿಲಿಯರ್ಸ್ 12 ಸಿಕ್ಸರ್
2016ರ ಆವೃತ್ತಿಯ ಐಪಿಎಲ್ನ 44ನೇ ಪಂದ್ಯದಲ್ಲಿ ಆರ್ಸಿಬಿ ತಂಡದ ಮಿಸ್ಟರ್ 360 ಅಬ್ಬರಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಲಯನ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಸ್ಟೈಲಿಸ್ ಬ್ಯಾಟರ್ ಡಿವಿಲಿಯರ್ಸ್ 52 ಎಸೆತಗಳಲ್ಲಿ 129* ರನ್ ಬಾರಿಸಿದ್ದರು. ಅವರ ಅದ್ಭುತ ಇನ್ನಿಂಗ್ಸ್ 10 ಬೌಂಡರಿಗಳು ಮತ್ತು 12 ಸಿಕ್ಸರ್ ಗಳನ್ನು ಒಳಗೊಂಡಿತ್ತು. ಅವರು ವೈಯಕ್ತಿಕ ಗರಿಷ್ಠ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : IPL 2023 : ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರು ಇವರು
ಕ್ರಿಸ್ ಗೇಲ್ – 2015ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 12 ಸಿಕ್ಸರ್
ಐಪಿಎಲ್ 2015 ರ 40 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವೂ ಆರ್ಸಿಬಿಗೆ ಸ್ಮರಣಿಯವಾಗಿತ್ತು. ಕ್ರಿಸ್ಗೇಲ್ ಈ ಪಂದ್ಯದಲ್ಲಿ 57 ಎಸೆತಗಳಲ್ಲಿ 117* ರನ್ ಸಿಡಿಸಿ ಔಟಾಗಿದ್ದರು. ಅದಕ್ಕಿಂತ ಮೊದಲು ಅವರು ಏಳು ಬೌಂಡರಿಗಳು ಮತ್ತು 12 ಸಿಕ್ಸರ್ ಗಳನ್ನು ಸಿಡಿಸಿದ್ದರು. ಒಟ್ಟಾರೆಯಾಗಿ ಐವರ ಪಟ್ಟಿಯಲ್ಲಿ ಮೂರು ಬಾರಿ ಸ್ಥಾನ ಪಡೆದುಕೊಂಡಿದ್ದಾರೆ.
ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದವರ ಸಂಕ್ಷಿಪ್ತ ವಿವರ ಈ ರೀತಿ ಇದೆ
- 2013 (ವರ್ಷ), ಕ್ರಿಸ್ ಗೇಲ್ (ಆರ್ಸಿಬಿ), 175* (ಒಟ್ಟು ರನ್), 66 (ಎಸೆತ), ಪುಣೆ ವಾರಿಯರ್ಸ್ (ವಿರುದ್ಧ), 17 (ಸಿಕ್ಸರ್)
- 2008 (ವರ್ಷ) ಬ್ರೆಂಡನ್ ಮೆಕಲಮ್ (ಕೆಕೆಆರ್) 158* (ಒಟ್ಟು ರನ್), 73 (ಎಸೆತ), ಆರ್ಸಿಬಿ (ವಿರುದ್ಧ), 13 (ಸಿಕ್ಸರ್)
- 2012 (ವರ್ಷ0 ಕ್ರಿಸ್ ಗೇಲ್ (ಆರ್ಸಿಬಿ), 128* (ಒಟ್ಟು ರನ್), 62 (ಎಸೆತ), ಡಿಸಿ (ವಿರುದ್ಧ), 13 (ಸಿಕ್ಸರ್)
- 2016 (ವರ್ಷ) ಎಬಿ ಡಿವಿಲಿಯರ್ಸ್ (ಆರ್ಸಿಬಿ), 129* (ಒಟ್ಟು ರನ್), 52 (ಎಸೆತ), ಜಿಎಲ್ (ವಿರುದ್ಧ), 12 (ಸಿಕ್ಸರ್)
- 2015 (ವರ್ಷ) ಕ್ರಿಸ್ ಗೇಲ್ (ಆರ್ಸಿಬಿ), 117 (ಒಟ್ಟು ರನ್), 57(ಎಸೆತ), ಪಿಬಿಕೆಎಸ್(ವಿರುದ್ಧ), 12 (ಸಿಕ್ಸರ್)