ಬೆಂಗಳೂರು: ಮತ್ತೊಂದು ರೈಲು ದುರ್ಘಟನೆಯಲ್ಲಿ ರಾಣಿ ಕಮಲಾಪತಿ-ಸಹರ್ಸಾ ವಿಶೇಷ ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಮಧ್ಯಪ್ರದೇಶದಲ್ಲಿ ಸೋಮವಾರ ಸಂಜೆ ಹಳಿ ತಪ್ಪಿವೆ (Train Accident ). ಸಂಜೆ 6:10 ಕ್ಕೆ ರೈಲು ಇಟಾರ್ಸಿ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಾಗ ಈ ಘಟನೆ ನಡೆದಿದೆ/ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರೈಲು ಪ್ಲಾಟ್ ಫಾರ್ಮ್ ಸಂಖ್ಯೆ 2 ಅನ್ನು ಪ್ರವೇಶಿಸುತ್ತಿದ್ದಾಗ ಅದರ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿ ತಪ್ಪಿದಾಗ ರೈಲು 5 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರಿಂದ ಸಂಭವನೀಯ ದುರಂತ ತಪ್ಪಿದೆ. ಅಪಘಾತ ಸಂಭವಿಸಿದ ಎರಡೂವರೆ ಗಂಟೆಗಳ ನಂತರವೂ ರೈಲು ಹೋಶಂಗಾಬಾದ್ ಜಿಲ್ಲೆಯ ಇಟಾರ್ಸಿ ಜಂಕ್ಷನ್ನಲ್ಲಿ ನಿಂತಿತ್ತು.
🚨Another train derails from track in MP.
— Manu🇮🇳🇮🇳 (@mshahi0024) August 12, 2024
Two words for @AshwiniVaishnaw🙏#MadhyaPradesh | Narmadapuram | Train Accident pic.twitter.com/zjSpODIZN7
ಭಾನುವಾರ, ಉತ್ತರ ಪ್ರದೇಶದ ಸೋನ್ಭದ್ರದ ಶಕ್ತಿನಗರ ಪ್ರದೇಶದಲ್ಲಿ ಗೂಡ್ಸ್ ರೈಲಿನ ಎರಡು ವ್ಯಾಗನ್ಗಳು ಮತ್ತು ಅದರ ಎಂಜಿನ್ ಹಳಿ ತಪ್ಪಿತ್ತು . ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ರೈಲು ಖಾಡಿಯಾದಲ್ಲಿನ ನಾರ್ದರ್ನ್ ಕೋಲ್ಫೀಲ್ಡ್ ಲಿಮಿಟೆಡ್ (ಎನ್ಸಿಎಲ್) ನಿಂದ ಅನ್ಪಾರಾ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲನ್ನು ಸಾಗಿಸುತ್ತಿತ್ತು.
ಆಗಸ್ಟ್ 9 ರಂದು ಉತ್ತರ ಪ್ರದೇಶದ ಅಲಿಗಢದ ಬಳಿ ಕಲ್ಲಿದ್ದಲು ಸೈಡಿಂಗ್ನಲ್ಲಿ ಸರಕು ರೈಲಿನ ಎರಡು ಖಾಲಿ ವ್ಯಾಗನ್ಗಳು ಹಳಿ ತಪ್ಪಿದ್ದವು. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕುಮೇದ್ಪುರ ನಿಲ್ದಾಣದ ಬಳಿ ಸರಕು ರೈಲಿನ ಐದು ವ್ಯಾಗನ್ಗಳು ಹಳಿ ತಪ್ಪಿವೆ. ಬಿಹಾರದ ಕಟಿಹಾರ್ ಜಿಲ್ಲೆಯ ಕುಮೇದ್ಪುರ ಸೇತುವೆ ಬಳಿ ಸರಕು ರೈಲಿನ ಐದು ಟ್ಯಾಂಕ್ ವ್ಯಾಗನ್ಗಳು ಹಳಿ ತಪ್ಪಿವೆ. ಹಳಿ ತಪ್ಪಿದ ಕಾರಣ ಹಳಿಗೆ ಅಡ್ಡಿಯುಂಟಾಗಿದ್ದು, ಸುಗಮ ರೈಲು ಕಾರ್ಯಾಚರಣೆಗಾಗಿ ಮಾರ್ಗಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಆಗಸ್ಟ್ 4 ರಂದು ಸಹರಾನ್ಪುರ ರೈಲ್ವೆ ನಿಲ್ದಾಣದಿಂದ ವಾಷಿಂಗ್ ಶೆಡ್ಗೆ ಕರೆದೊಯ್ಯುವಾಗ ಖಾಲಿ ಸ್ಥಳೀಯ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ್ದವು. ಜುಲೈ 30 ರಂದು ಜಾರ್ಖಂಡ್ನ ಚಕ್ರಧರ್ಪುರ ಬಳಿ ಹೌರಾ-ಸಿಎಸ್ಎಂಟಿ ಎಕ್ಸ್ಪ್ರೆಸ್ ಹಲವಾರು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು. ಆರು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಐವರಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೇ ದಿನ ಒಡಿಶಾದ ಸಂಬಲ್ಪುರ ವಿಭಾಗದ ಯಾರ್ಡ್ನಲ್ಲಿ ಖಾಲಿ ಗೂಡ್ಸ್ ರೈಲಿನ ಒಂದು ಟ್ರಾಲಿ ಹಳಿ ತಪ್ಪಿತ್ತು.