Site icon Vistara News

Sandeshkhali Violence : ಬಂಧಿಸುವವರೆಗೂ ಅತ್ಯಾಚಾರಿ ಮುಖಂಡನನ್ನು ಸಸ್ಪೆಂಡ್ ಮಾಡದೆ ಸುಮ್ಮನಿದ್ದ ಮಮತಾ ಬ್ಯಾನರ್ಜಿ!

Shahjahan Sheikh

Hand Over Shahjahan Sheikh To CBI Today: High Court To Bengal Government

ಕೋಲ್ಕೊತಾ: ತೃಣಮೂಲ ಕಾಂಗ್ರೆಸ್​ನ ಪ್ರಭಾವಿ ನಾಯಕ ಶಹಜಹಾನ್ ಶೇಖ್ ಕೊನೆಗೂ ಅಮಾನತುಗೊಂಡಿದ್ದಾರೆ . ಅವರನ್ನು ಗುರುವಾರ ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳ ನಂತರ ಅವರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಿರುವುದಾಗಿ ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯಾನ್ ಪ್ರಕಟಿಸಿದ್ದಾರೆ. ಸಂದೇಶ್​ಖಾಲಿಯಲ್ಲಿ (Sandeshkhali Violence) ಸ್ಥಳೀಯ ಮಹಿಳೆಯರ ನೇತೃತ್ವದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಶೇಖ್ ಸುದ್ದಿಗೆ ಗ್ರಾಸವಾಗಿದ್ದರು. ಘಟನೆ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.

ಕೋಲ್ಕತಾದಲ್ಲಿ ಟಿಎಂಸಿ ನಾಯಕ ಡೆರೆಕ್ ಒ’ಬ್ರಿಯಾನ್ ಪ್ರಕಟಣೆ ಹೊರಡಿಸಿ, “ಶೇಖ್ ಶಹಜಹಾನ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

ಸಂದೇಶ್​​ಖಾಲಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಆರೋಪ ಬಂದ ಬಳಿಕ ಶೇಖ್​ 55 ದಿನಗಳ ಕಾಲ ತಲೆಮರೆಸಿಕೊಂಡಿದ್ದ. ಗುರುವಾರ ಮುಂಜಾನೆ ಬಂಧಿಸಲಾಗಿದೆ. ಬಂಧನದ ನಂತರ ಅವರನ್ನು ಬಸಿರ್ಹತ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅದು ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿತು.

ಇದನ್ನೂ ಓದಿ : Air India: ವ್ಹೀಲ್‌ಚೇರ್‌ ಸಿಗದೆ ಮೃತಪಟ್ಟ ವೃದ್ಧ; ಏರ್ ಇಂಡಿಯಾಕ್ಕೆ ಬಿತ್ತು ಭಾರೀ ದಂಡ

ಪಡಿತರ ಹಗರಣ ಪ್ರಕರಣದಲ್ಲಿ ಜನವರಿ 5 ರಂದು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಜತ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣಗಳಲ್ಲಿ ಶೇಖ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 147 (ಗಲಭೆಯಲ್ಲಿ ತಪ್ಪಿತಸ್ಥ), 148 (ಮಾರಕಾಸ್ತ್ರಗಳೊಂದಿಗೆ ಗಲಭೆಯಲ್ಲಿ ತಪ್ಪಿತಸ್ಥ), 149 (ಕಾನೂನುಬಾಹಿರ ಸಭೆ), 307 (ಕೊಲೆ ಯತ್ನ), 333 (ಸಾರ್ವಜನಿಕ ಸೇವಕರಾಗಿರುವ ಯಾವುದೇ ವ್ಯಕ್ತಿಗೆ ಸ್ವಯಂಪ್ರೇರಿತವಾಗಿ ತೀವ್ರ ಗಾಯಗೊಳಿಸುವವರು) ಮತ್ತು 392 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪಿ, ಟಿಎಂಸಿ ನಾಯಕ ಷಹಜಹಾನ್‌ ಶೇಖ್‌ ಬಂಧನ

ಕೋಲ್ಕತ್ತಾ: ಪಶ್ಚಿಮ ಬಂಗಾಲದ (West Bengal) ಸಂದೇಶ್‌ಖಾಲಿ (Sandeshkhali Violence) ದೌರ್ಜನ್ಯದ (physical abuse) ಆರೋಪಿ, ಬಹುಕೋಟಿ ಹಗರಣದ ರೂವಾರಿ ಹಾಗೂ ತಲೆ ತಪ್ಪಿಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ (Trinamool congress) ನಾಯಕ ಶೇಖ್ ಶಹಜಹಾನ್‌ನನ್ನು (sheikh Shahjahan) ಬಂಧಿಸಲಾಗಿದೆ.

ಈತ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದು, ಸಂದೇಶ್‌ಖಾಲಿ ಗ್ರಾಮದಲ್ಲಿ ಭೂಕಬಳಿಕೆ ನಡೆಸಿದ್ದ. ಗುರುವಾರ ಬೆಳಗ್ಗೆ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಉತ್ತರ 24 ಪರಗಣ ಜಿಲ್ಲೆಯ ಮಿನಾಖಾನ್‌ನಲ್ಲಿರುವ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಎಂದು ಗೊತ್ತಾಗಿದೆ.

ಟಿಎಂಸಿಯ ಪ್ರಭಾವಿ ನಾಯಕ ಇದೀಗ ಬಸಿರ್‌ಹತ್ ಕೋರ್ಟ್ ಲಾಕಪ್‌ನಲ್ಲಿದ್ದು, ಅವನನ್ನು ಈ ದಿನದ ಕೊನೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಹೆಚ್ಚಿನ ವಿವರಗಳನ್ನು ದಕ್ಷಿಣ ಬಂಗಾಳ ಎಡಿಜಿ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಲಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿ, ಕಳೆದ ಒಂದು ತಿಂಗಳಿನಿಂದ ಭಾರಿ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕನಾದ ಶಹಜಹಾನ್‌ ಇಲ್ಲಿ ನಿರಂತರವಾಗಿ ಲೈಂಗಿಕ ದೌರ್ಜನ್ಯಗಳು ಮತ್ತು ಭೂಕಬಳಿಕೆ ನಡೆಸುತ್ತ ಬಂದಿದ್ದಾನೆ. ಕಳೆದ ತಿಂಗಳು ಸಂದೇಶಖಾಲಿಯಲ್ಲಿ ಬಹುಕೋಟಿ ಪಡಿತರ ಹಗರಣಕ್ಕೆ ಸಂಬಂಧಿಸಿ ಈತನನ್ನು ವಿಚಾರಿಸಲು ಇಡಿ ಅಧಿಕಾರಿಗಳು ಇಲ್ಲಿಗೆ ಬಂದಾಗ, ಈತ ಹಾಗೂ ಇವನ ಬೆಂಬಲಿಗರು ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ನಂತರ ಶಹಜಹಾನ್ ಪರಾರಿಯಾಗಿದ್ದ.

ಟಿಎಂಸಿ ನಾಯಕನ ದೌರ್ಜನ್ಯ, ಇಡಿ ಅಧಿಕಾರಿಗಳ ಮೇಲೆ ಹಲ್ಲೆ ಹಾಗೂ ನಾಪತ್ತೆ ಮತ್ತು ಪ್ರತಿಭಟನೆಯಿಂದಾಗಿ ಪಶ್ಚಿಮ ಬಂಗಾಲ ಸರ್ಕಾರಕ್ಕೆ ಬಿಸಿ ಮುಟ್ಟಿತ್ತು. ರಾಜಕೀಯ ಪಕ್ಷಗಳ ನಿಯೋಗಗಳು ಸಂದೇಶಖಾಲಿಗೆ ಹೋಗಿದ್ದವು. ಬಿಜೆಪಿ ನಿಯೋಗ ಹಾಗೂ ನಾಯಕರನ್ನು ಮಧ್ಯದಲ್ಲಿ ತಡೆಯಲಾಗಿತ್ತು. ಪರಿಸ್ಥಿತಿ ಉದ್ವಿಗ್ನವಾಗಿತ್ತು.

Exit mobile version