Site icon Vistara News

Tungabhadra Dam : ಅಬ್ಬರದ ಮಳೆ; ವಿಶ್ವ ವಿಖ್ಯಾತಿಯ ತುಂಗಭದ್ರಾ ಡ್ಯಾಮ್​​ನಲ್ಲಿ​ ಹೆಚ್ಚಿದ ಒಳ ಹರಿವು

Tungabhadra Dam

ವಿಜಯನಗರ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು ಬರಗಾಲದ ಭಯದಿಂದ ಜನ ಪಾರಾಗಿದ್ದಾರೆ. ಇದೇ ವೇಳೆ ಇಲ್ಲಿನ ವಿಶ್ವ ಪ್ರಸಿದ್ಧ ತುಂಗಭದ್ರಾ ಜಲಾಶಯಕ್ಕೆ (Tungabhadra Dam) ನೀರಿನ ಒಳ ಹರಿವು ಹೆಚ್ಚಾಗಿದೆ. ಒಂದು ವಾರದಲ್ಲಿ ಮೂರು ಟಿಎಂಸಿ ನೀರು ಹರಿದು ಬಂದಿದ್ದು ಜೀವ ಜಲ ನಳನಳಿಸಲು ಆರಂಭಿಸಿದೆ. ಕಳೆದ ವರ್ಷ ಕಳೆ ಕಡಿಮೆಯಾಗಿದ್ದ ಕಾರಣ ಜಲಾಶಯ ಸಂಪೂರ್ಣವಾಗಿ ಬತ್ತಿ ಹೋಗಿತ್ತು. ಡೆಡ್​ ಸ್ಟೋರೇಜ್ ನೀರು ಮಾತ್ರ ಉಳಿದಿತ್ತು. ಇದೀಗ ಮತ್ತೆ ಡ್ಯಾಮ್​ನಲ್ಲಿ ನಿಧಾನವಾಗಿ ನೀರು ತುಂಬಿಕೊಳ್ಳುವುದಕ್ಕೆ ಆರಂಭಿಸಿದೆ.

ಬೇಸಿಗೆ ಕೊನೆಯಲ್ಲಿ ಮಳೆ ಬಂದಿದ್ದ ಕಾರಣ ವಾರದ ಹಿಂದೆ ಕೇವಲ ಮೂರು ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು. ಉತ್ತಮ ಮಳೆ ಆಗಿದ್ದರಿಂದ ಸದ್ಯ ಜಲಾಶಯದಲ್ಲಿ ಆರು ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗುತ್ತಿದೆ. ಈ ಜಲಾಶಯದ ನೀರನ್ನು ನಂಬಿಕೊಂಡು ಈ ಪ್ರದೇಶದ ಕೋಟ್ಯಂತರ ಜನರು ಜೀವನ ಸಾಗಿಸ್ತಿದ್ದಾರೆ. ಅವರ ಮುಖದಲ್ಲಿ ಇದೀಗ ನಗು ಮೂಡಿದೆ.

ಈ ಡ್ಯಾಮ್​ನಿಂದ ಲಕ್ಷಾಂತರ ಎಕರೆ ಕೃಷಿ ಪ್ರದೇಶಕ್ಕೆ ನೀರು ಹೋಗುತ್ತದೆ. ಅಷ್ಟೇ ಅಲ್ಲದೇ ತುಂಗಭದ್ರಾ ಜಲಾಶಯದಿಂದ ಆಂಧ್ರಪ್ರದೇಶದ, ತೆಲಂಗಾಣ ಎರಡು ರಾಜ್ಯಕ್ಕೂ ನೀರು ಹರಿಯುತ್ತದೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದ ಕಾರಣ ಕೇವಲ 90 ಟಿಎಂಸಿ ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹಣೆ ಆಗಿತ್ತು. ಈ ಜಲಾಶಯದಲ್ಲಿ 105 ಟಿಎಂಸಿ ಸಂಗ್ರಹಣಾ ಸಾಮರ್ಥ್ಯವಿದೆ. ಹೀಗಾಗಿ ಕಳೆದ ವರ್ಷ ಡ್ಯಾಮ್ ತುಂಬಿರಲಿಲ್ಲ. ಭೀಕರ ಬರಗಾಲದಿಂದ ಕುಡಿಯೋ ನೀರಿಗೂ ಭಾರೀ ಹಾಹಾಕಾರ ಶುರು ಆಗಿತ್ತು. ಆದರೆ, ಈ ಬಾರಿ ಬೇಗ ಮಳೆ ಬಂದ ಕಾರಣ ಸಮಸ್ಯೆ ಸರಿಯಾಗುವ ಲಕ್ಷಣ ಕಂಡು ಬಂದಿದೆ. 100 ಟಿಎಂಸಿ ನೀರು ತುಂಬಿದರೆ ಹೊರಕ್ಕೆ ಹರಿಯಬಿಡಲಾಗುತ್ತದೆ

ಇಂದು ಕರಾವಳಿ ಭಾಗ, ಬೆಳಗಾವಿ, ಬಾಗಲಕೋಟೆ ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ!

ಬೆಂಗಳೂರು: ಕರ್ನಾಟಕದ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಅಥವಾ ಗುಡುಗು ಸಹತ ಮಳೆಯಾಗುವ (Karnataka Weather) ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ, ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Polluted Water : ಕಲುಷಿತ ನೀರು ಕುಡಿದು ಒಂದೇ ಗ್ರಾಮದ ನಾಲ್ವರ ಸಾವು, ಇಬ್ಬರ ಸ್ಥಿತಿ ಗಂಭೀರ

ಇನ್ನು ಜೂನ್‌ 14ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳ ಮೇಲೆ ಹಲವು ಸ್ಥಳಗಳಲ್ಲಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ರೀತಿಯ ಪರಿಸ್ಥಿತಿ ಜೂನ್‌ 16ರವರೆಗೆ ಇರಲಿದೆ ಎಂದು ಮಾಹಿತಿ ನೀಡಿದೆ.

ಮೀನುಗಾರರಿಗೆ ಎಚ್ಚರಿಕೆ

ಚಂಡಮಾರುತದ ಹವಾಮಾನವು ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ 55 ಕಿ.ಮೀ ವರೆಗೆ ಬೀಸುವ ಗಾಳಿಯೊಂದಿಗೆ ಕರ್ನಾಟಕ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ದಕ್ಷಿಣ ಕನ್ನಡ: ಮೂಲ್ಕಿಯಿಂದ ಮಂಗಳೂರಿನವರೆಗೆ ದಕ್ಷಿಣ ಕನ್ನಡ, ಕರ್ನಾಟಕ ಕರಾವಳಿಗೆ ಹೈ ವೇವ್ ಅಲರ್ಟ್‌ ಇದೆ. . ಜೂನ್ 12‌ರಿಂದ 13ರ ಬೆಳಗ್ಗೆ 11:30 ಗಂಟೆಗಳವರೆಗೆ 1.9 – 2.0 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ.

ಉಡುಪಿ: ಬೈಂದೂರಿನಿಂದ ಕಾಪುವರೆಗಿನ ಉಡುಪಿ, ಕರ್ನಾಟಕ ಕರಾವಳಿಯಲ್ಲಿ ಹೈ ವೇವ್ ಅಲರ್ಟ್‌ ಇದೆ. ಜೂನ್‌ 12ರಿಂದ 13ರ ಬೆಳಗ್ಗೆ 11:30ರವರೆಗೆ 1.9- 2.1 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ.

ಉತ್ತರ ಕನ್ನಡ: ಉತ್ತರ ಕನ್ನಡ, ಕರ್ನಾಟಕ ಕರಾವಳಿಯ ಮಾಜಾಳಿಯಿಂದ ಭಟ್ಕಳದವರೆಗೆ ಹೈ ವೇವ್ ಅಲರ್ಟ್‌ ನೀಡಲಾಗಿದೆ. ಜೂನ್‌ 12ರಿಂದ 13ರ ರಾತ್ರಿ 11.30ರವರೆ 2.0 – 2.1 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ. ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು ಸಲಹೆ ನೀಡಲಾಗಿದೆ.

ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಅಕಾಶ. ಹಗುರದಿಂದ ಸಾಧಾರಣ ಮಳೆ, ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29ನೇC ಮತ್ತು 21c ಆಗಿರಬಹುದು.

Exit mobile version