Site icon Vistara News

Hardik Pandya : ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​​ನಲ್ಲಿ ಮತ್ತೆ ವಿಫಲ; ಬೆಂಡೆತ್ತಿದ ಅಭಿಮಾನಿಗಳು

Hardik Pandya

ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಸೋಮವಾರ (ಏಪ್ರಿಲ್ 22) ಮತ್ತೊಮ್ಮೆ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡಿದ್ದಾರೆ. ನೇಹಾಲ್ ವಧೇರಾ ಔಟಾದ ನಂತರ ಅವರು 17 ನೇ ಓವರ್ ನಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದರು ಪಾಂಡ್ಯ . ಆಗ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ಇನ್ನೊಂದು ತುದಿಯಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಒಂಬತ್ತಕ್ಕೂ ಹೆಚ್ಚು ರನ್ ರೇಟ್ ಹೊಂದಿತ್ತು ಮುಂಬೈ. ಹೀಗಾಗಿ ತಮ್ಮ ಫಿನಿಶಿಂಗ್ ಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಇನ್ನಿಂಗ್ಸ್ ಅನ್ನು ಕಟ್ಟಿ ತಮ್ಮ ತಂಡಕ್ಕೆ ಸಹಾಯ ಮಾಡಲು ಸೂಕ್ತ ಅವಕಾಶ ಹೊಂದಿದ್ದರು ಹಾರ್ದಿಕ್ ಪಾಂಡ್ಯ. ಆದರೆ ಪಾಂಡ್ಯ ಮತ್ತೆ ಫೇಲಾಗಿದ್ದರು.

ಮುಂಬೈ ಇಂಡಿಯನ್ಸ್ ನಾಯಕ ತನ್ನ ಅಲ್ಪಾವಧಿಯಲ್ಲಿ ರನ್ ಗಳಿಸಲು ಹೆಣಗಾಡಿದರು. ಅಂತಿಮವಾಗಿ 19 ನೇ ಓವರ್​ನಲ್ಲಿ ಎಸೆತಕ್ಕೆ ಒಂದು ರನ್​ಗಳಂತೆ ಹತ್ತು ರನ್​ಗೆ ಔಟ್ ಆದರು. ಅವರನ್ನು ಅವೇಶ್ ಖಾನ್ ಎಲ್​ಬಿಡಬ್ಲ್ಯು ಮಾಡಿರು ಒತ್ತಡಕ್ಕೆ ಬಿದ್ದಿರುವ ಆಲ್ರೌಂಡರ್ ಮತ್ತೊಮ್ಮೆ ಪ್ರದರ್ಶನ ನೀಡಲು ವಿಫಲವಾದ ಕಾರಣ ಅಭಿಮಾನಿಗಳು ಅವರನ್ನು ಚೆನ್ನಾಗಿ ಬೆಂಡೆತ್ತಿದರು.

ಟಿ20 ವಿಶ್ವಕಪ್​​ನಲ್ಲಿ ಹಾರ್ದಿಕ್ ಪಾಂಡ್ಯಗೆ ಸ್ಥಾನ ಕಷ್ಟ

ಕಳೆದ ವರ್ಷ ಟಿ 20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದರೂ ಹಾರ್ದಿಕ್ ಪಾಂಡ್ಯ ಟಿ 20 ವಿಶ್ವಕಪ್​ಗಾಗಿ ಭಾರತೀಯ ತಂಡದಲ್ಲಿ ಸ್ಥಾನ ಖಾತರಿಯಿಲ್ಲ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಆಲ್ರೌಂಡರ್ ಅನ್ನು ತಂಡದಲ್ಲಿ ಸೇರಿಸುವ ಇಂಗಿತ ಹೊಂದಿಲ್ಲ.

ರೋಹಿತ್, ದ್ರಾವಿಡ್ ಮತ್ತು ಅಗರ್ಕರ್ ಇತ್ತೀಚೆಗೆ ಮುಂಬೈನಲ್ಲಿ ಸಭೆ ನಡೆಸಿದ್ದು, ತಂಡದಲ್ಲಿ ಸ್ಥಾನ ಪಡೆಯಲು ಪಾಂಡ್ಯ ನಿಯಮಿತವಾಗಿ ಬೌಲಿಂಗ್ ಮಾಡಬೇಕಾಗುತ್ತದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್​ಪ್ರೆಸ್​​ ವರದಿ ಮಾಡಿದೆ. ಮುಂಬೈ ಇಂಡಿಯನ್ಸ್ ನಾಯಕ ತಮ್ಮ ತಂಡದ ಮೂರನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ಬೌಲಿಂಗ್ ಮಾಡದ ನಂತರ ಈ ಬೆಳವಣಿಗೆ ಸಂಭವಿಸಿತ್ತು.

ಇದನ್ನೂ ಓದಿ: IPL 2024 : ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಸ್ಪಿನ್ನರ್​ ಯಜ್ವೇಂದ್ರ ಚಹಲ್​

ಹಾರ್ದಿಕ್​ ಪಾಂಡ್ಯ ಗಾಯವನ್ನು ಮರೆಮಾಚುತ್ತಿದ್ದಾರೆ ಎಂದು ಹಿರಿಯ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಪಾಂಡ್ಯ ಶೀಘ್ರದಲ್ಲೇ ಐಪಿಎಲ್​ನಲ್ಲಿ ಬೌಲಿಂಗ್ ಪುನರಾರಂಭಿಸಿದರು. ಆದರೆ ಪ್ರಭಾವ ಬೀರಲು ಹೆಣಗಾಡುತ್ತಿದ್ದಾರೆ. ಈವರೆಗೆ ಆಡಿರುವ 8 ಪಂದ್ಯಗಳಲ್ಲಿ 11ರ ಎಕಾನಮಿ ರೇಟ್ನಲ್ಲಿ 4 ವಿಕೆಟ್ ಕಬಳಿಸಿದ್ದಾರೆ.

ಬ್ಯಾಟ್ನೊಂದಿಗೆ ಅವರ ಪ್ರದರ್ಶನವೂ ಉತ್ತಮವಾಗಿಲ್ಲ. ಹಾರ್ದಿಕ್ ಪಾಂಡ್ಯ ಆಡಿರುವ 8 ಪಂದ್ಯಗಳಲ್ಲಿ 39 ರನ್ ಗಳಿಸಿ 142 ರನ್ ಗಳಿಸಿದ್ದಾರೆ.

Exit mobile version