ಬೆಂಗಳೂರು: 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2024) ಟೀಂ ಇಂಡಿಯಾ (Team India) ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ತಂಡವು ಗುಂಪು ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನವನ್ನು ಪಡೆಯಿತು. ಸೂಪರ್ 8 ಹಂತದಲ್ಲಿ, ತಂಡವು ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿದೆ ಮತ್ತು ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡದ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಗೊಂಡಿದೆ.
ಈ ಪ್ರದರ್ಶನದ ಹೆಚ್ಚಿನ ಶ್ರೇಯಸ್ಸು ಆಟಗಾರರ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಲ್ಲಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಆಟಗಾರರು ತಮ್ಮ ಆಹಾರದ ಅವಶ್ಯಕತೆಗಳ ಮೇಲೆ ಬಿಗಿ ಹಿಡಿತ ಇಟ್ಟುಕೊಂಡಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ಮನೆಯೂಟ ತಿನ್ನುವುದಕ್ಕಾಗಿ ಪಂದ್ಯಾವಳಿಗೆ ಹೋಗುವ ವೇಳೆ ವೈಯಕ್ತಿಕ ಬಾಣಸಿಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಮನೆಯಿಂದ ದೂರವಿದ್ದರೂ ಮನೆಯಲ್ಲಿ ತಯಾರಿಸಿದ ಊಟದ ಸೌಲಭ್ಯ ಪಡೆದಿದ್ದಾರೆ. ಇಬ್ಬರು ಕ್ರಿಕೆಟಿಗರು ತಮ್ಮೊಂದಿಗೆ ತಮ್ಮ ಬಾಣಸಿಗರನ್ನು ಕರೆದುಕೊಂಡು ಹೋಗಿದ್ದು ಆಹಾರದ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ.
ಈ ಬಾಣಸಿಗರು ತಂಡದೊಂದಿಗೆ ಎಲ್ಲ ಕಡೆ ಪ್ರಯಾಣಿಸುತ್ತಿಲ್ಲ. ಅವರು ಪ್ರತ್ಯೇಕವಾಗಿದ್ದಾರೆ. ವರದಿಯ ಪ್ರಕಾರ, ಈ ಬಾಣಸಿಗರು ತಮ್ಮದೇ ಆದ ಹೋಟೆಲ್ ಬುಕಿಂಗ್ ಮಾಡಿಕೊಂಡಿದ್ದಾರೆ. ಟೀಮ್ ಇಂಡಿಯಾದ ಹೋಟೆಲ್ ಬಳಿ ವಾಸಿಸುತ್ತಿದ್ದಾರೆ. ಟಿಫಿನ್ ಕ್ಯಾರಿಯರ್ ಗಳಲ್ಲಿ ಪ್ರತಿದಿನ ಊಟವನ್ನು ಅವರಿಗೆ ನೀಡುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.
ಎಲ್ಲರಿಗೂ ಉತ್ತಮ ಆಹಾರ
ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಮಾತ್ರ ಊಟದ ಬಗ್ಗೆ ಜಾಗರೂಕತೆ ಮಾಡುತ್ತಿಲ್ಲ. ಉಳಿದವರೂ ಆಹಾರದ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ. ಪಂದ್ಯಕ್ಕೆ ಫಿಟ್ ಆಗಿರಲು ಸರಿಯಾದ ಆಹಾರ ತಿನ್ನುತ್ತಿದ್ದಾರೆ.
ಹೆಚ್ಚಿನ ಫಿಟ್ನೆಸ್ಗಾಗಿ ಸಮರ್ಪಕ ಆಹಾರದ ಸಂಸ್ಕೃತಿಯನ್ನು ತಂಡಕ್ಕೆ ತಂದಿರುವುದು ವಿರಾಟ್ ಕೊಹ್ಲಿ. ಅವರು ಫಿಟ್ನೆಸ್ ಮತ್ತು ಪೌಷ್ಠಿಕಾಂಶದ ವಿಷಯದಲ್ಲಿ ಉನ್ನತ ಕಾಳಜಿ ನಿಗದಿಪಡಿಸಿದರು. ಕೊಹ್ಲಿ 35 ವರ್ಷ ವಯಸ್ಸಿನವರಾಗಿದ್ದರೂ, ವಿಶ್ವದ ಅತ್ಯಂತ ಫಿಟ್ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ ಅವರು ಹಾಲಿನ ಉತ್ಪನ್ನ ಸೇರಿದಂತೆ ಅನವಶ್ಯಕ ವಸ್ತುಗಳನ್ನು ಸೇವಿಸುತ್ತಿಲ್ಲ. ಎಲ್ಲವೂ ಲೆಕ್ಕಾಚಾರದ ಪ್ರಕಾರ ಸೇವಿಸುತ್ತಾರೆ.
2024ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಪ್ರದರ್ಶನ
ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಹೊರತುಪಡಿಸಿ ಭಾರತವು ಇಲ್ಲಿಯವರೆಗೆ ಅಜೇಯ ತಂಡವಾಗಿ ಅಭಿಯಾನ ಮುಂದುವರಿಸಿದೆ. ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧದ ಸೂಪರ್ 8 ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಮೆನ್ ಇನ್ ಬ್ಲೂ ತಂಡ ಈ ಬಾರಿ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದೆ.
ಇದನ್ನೂ ಓದಿ: Olympic Day : 900 ಮಕ್ಕಳೊಂದಿಗೆ ಒಲಿಂಪಿಕ್ ದಿನ ಸಂಭ್ರಮಿಸಿದ ರಿಲಯನ್ಸ್ಫೌಂಡೇಶನ್
ಗ್ರೂಪ್ ಹಂತದಲ್ಲಿ ಭಾರತ ಐರ್ಲೆಂಡ್, ಪಾಕಿಸ್ತಾನ ಮತ್ತು ಅಮೆರಿಕವನ್ನು ಸೋಲಿಸಿ ಸೂಪರ್ 8 ಹಂತಕ್ಕೆ ಪ್ರವೇಶಿಸಿತ್ತು. ಕೆನಡಾ ವಿರುದ್ಧದ ಪಂದ್ಯವು ಪ್ರತಿಕೂಲ ಹವಾಮಾನದಿಂದಾಗಿ ರದ್ದಾಗಿತ್ತು. ಈ ಪಂದ್ಯಗಳಲ್ಲಿ ಭಾರತವು ಸಂಯಮವನ್ನು ತೋರಿಸಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಎರಡೂ ತಂಡಗಳಿಗೆ ಇದು ಕೊನೆಯ ಸೂಪರ್ 8 ಪಂದ್ಯವಾಗಿದೆ. ಸೂಪರ್ 8 ಗುಂಪಿನಲ್ಲಿ ಭಾರತವು ಪಾಯಿಂಟ್ಸ್ ಟೇಬಲ್ನಲ್ಲಿ ಆರಾಮವಾಗಿ ಅಗ್ರಸ್ಥಾನದಲ್ಲಿದ್ದರೆ, ಸೆಮಿಫೈನಲ್ಗೆ ಅರ್ಹತೆ ಪಡೆಯಲು ಆಸ್ಟ್ರೇಲಿಯಾಕ್ಕೆ ;ಮಾಡು ಇಲ್ಲವೇ ಮಡಿ’ ಪಂದ್ಯವಾಗಿದೆ.
ಭಾರತ ಸೆಮಿಫೈನಲ್ಗೆ ಅರ್ಹತೆ ಪಡೆದರೆ, ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಎರಡನೇ ಸೆಮಿಫೈನಲ್ ಆಡಲಿದೆ. ಟೂರ್ನಿಯ ಫೈನಲ್ ಪಂದ್ಯ ಜೂನ್ 29ರಂದು ಬಾರ್ಬಡೋಸ್ನ ಬ್ರಿಜ್ಟೌನ್ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯಲಿದೆ.