Site icon Vistara News

Bangalore South Election Result 2024 : ತೇಜಸ್ವಿ ಸೂರ್ಯಗೆ ಭಾರಿ ಅಂತರದ ಗೆಲುವು

Udupi Chikmagalur Result 2024:

ಬೆಂಗಳೂರು: ಬೆಂಗಳೂರು ನಗರದ ಗಮನಾರ್ಯ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ (7,50, 830 ಮತಗಳು) ಅವರು ವಿಜಯ ಸಾಧಿಸಿದ್ದಾರೆ. (Bangalore South Electon Result 2024) ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸೌಮ್ಯ ರೆಡ್ಡಿ (4,73, 747 ಮತಗಳು) ವಿರುದ್ಧ 2,77,083 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಯುವ ನಾಯಕ ತೇಜಸ್ವಿ ಸೂರ್ಯ ಅವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ ಅವರನ್ನು 3,31,192 ಮತಗಳ ಅಂತರದಿಂದ ಸೋಲಿಸಿದ್ದರು. ಸೂರ್ಯ 7,39,229 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ನ ಬಿ.ಕೆ.ಹರಿಪ್ರಸಾದ್ 4,08,037 ಮತಗಳನ್ನು ಪಡೆದಿದ್ದರು.

2014 ರ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿ ಕಾಂಗ್ರೆಸ್ ಅನ್ನು ಗಮನಾರ್ಹ ಸಂಖ್ಯೆಯ ಮತಗಳಿಂದ ಸೋಲಿಸಿತು. 2014ರಲ್ಲಿ ಶೇ.55.75ರಷ್ಟು ಮತದಾನವಾಗಿತ್ತು. ಬಿಜೆಪಿಯ ಅನಂತ್ ಕುಮಾರ್ 6,33,816 ಮತಗಳನ್ನು ಪಡೆದಿದ್ದರು. ನಂದನ್ ನಿಲೇಕಣಿ 4,05,241 ಮತಗಳನ್ನು ಪಡೆದಿದ್ದರು. ಜೆಡಿಎಸ್ ನ ರುತ್ ಮನೋರೋಮಾ 25,677 ಮತಗಳನ್ನು ಪಡೆದಿದ್ದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 2019 ರವರೆಗೆ ಒಟ್ಟು 17 ಚುನಾವಣೆಗಳು ನಡೆದಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷವು ಆರು ಬಾರಿ ಗೆದ್ದಿದೆ. ಜನತಾ ಪಕ್ಷವು ಮೂರು ಬಾರಿ ಜಯಗಳಿಸಿತು. 1991ರಿಂದ ಸತತ 8 ಬಾರಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಈ ಕ್ಷೇತ್ರವು ಬಿಜೆಪಿಯ ಅನಂತ್ ಕುಮಾರ್ ಅವರ ಭದ್ರಕೋಟೆಯಾಗಿತ್ತು. ಅವರು ಸತತ ಆರು ಬಾರಿ ಗೆದ್ದಿದ್ದಾರೆ. ಈ ಕ್ಷೇತ್ರವು ಆರಂಭದಲ್ಲಿ ಮೈಸೂರು ರಾಜ್ಯದ ಭಾಗವಾಗಿತ್ತು ಆದರೆ 1977 ರ ನಂತರ ಕರ್ನಾಟಕದ ಭಾಗವಾಯಿತು. ಈ ಕ್ಷೇತ್ರವನ್ನು ಮೊದಲು ಬೆಂಗಳೂರು ಎಂದು ಕರೆಯಲಾಗುತ್ತಿತ್ತು. ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಎಚ್ ಹನುಮಂತಪ್ಪ ಮತ್ತು ಆರ್ ಗುಂಡೂರಾವ್ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಗೆದ್ದಿದ್ದಾರೆ.

ಇದನ್ನೂ ಓದಿ: Udupi Chikmagalur Result 2024 : ಉಡುಪಿಯಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್​ ಪೂಜಾರಿಗೆ ವಿಜಯ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಕರ್ನಾಟಕದಲ್ಲಿ ಬಿಜೆಪಿಯ ಭದ್ರಕೋಟೆಯಾಗಿದೆ. ಈ ಸ್ಥಾನದಿಂದ ಗೆದ್ದ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರು ರಾಜ್ಯದ ಮುಖ್ಯಮಂತ್ರಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.

ಎಷ್ಟು ಮತದಾರರು ಇದ್ದಾರೆ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 23. 17 ಲಕ್ಷ ಮತದಾರರಿದ್ದು, ಈ ಬಾರಿ ಶೇಕಡಾ 53.17 ಮತದಾನವಾಗಿದೆ. ಹಿಂದಿನ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಆದಾಗ್ಯೂ ಯುವ ಹೆಚ್ಚು ಸ್ಥಳೀಯವಾಗಿ ಹೆಚ್ಚು ಪರಿಚಿತವಾಗಿರುವ ತೇಜಸ್ವಿ ಸೂರ್ಯ ಗೆಲ್ಲಬಹುದು ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ವ್ಯಾಪ್ತಿ

ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರವು ಬೆಂಗಳೂರಿನ ಹೃದಯ ಭಾಗದ ಹಲವಾರು ಬಿಬಿಎಂಪಿ ವಾರ್ಡ್​ಗಳು ಮತ್ತು ಬೆಂಗಳೂರು ದಕ್ಷಿಣ ತಾಲೂಕಿನ ಬೊಮ್ಮನಹಳ್ಳಿ, ಆನೇಕಲ್ ತಾಲೂಕಿನ ಕೆಲವು ಭಾಗಗಳನ್ನು ಹೊಂದಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಇತರ ನಾಲ್ಕು ಲೋಕಸಭಾ ಕ್ಷೇತ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಬೆಂಗಳೂರು ದಕ್ಷಿಣಕ್ಕೆ ಹೊಂದಿಕೊಂಡಿರುವ ಇತರ ಲೋಕಸಭಾ ಕ್ಷೇತ್ರಗಳು ಈ ರೀತಿ ಇವೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ.

Exit mobile version