Site icon Vistara News

Union Budget 2023: ಗುಜರಿ ವಾಹನವೂ ಬೇಡ, ಗುಜರಿ ರಾಜಕೀಯವೂ ಬೇಡ! ನಿರ್ಮಲಾ ಆಣಿಮುತ್ತು!

scrappage policy

ನವ ದೆಹಲಿ: 2023ರ ಬಜೆಟ್‌ ಮಂಡನೆ ಸಂದರ್ಭದಲ್ಲಿ ಹಳೆಯ ವಾಹನಗಳ ಗುಜರಿ ನೀತಿಯ ಕುರಿತು ಪ್ರಸ್ತಾಪ ಮಾಡುತ್ತಿದ್ದಾಗ ಬಾಯಿ ತಪ್ಪಿ ಆಡಿದ ಒಂದು ಪದ, ರಸಪ್ರಸಂಗಕ್ಕೆ ಕಾರಣವಾಯಿತು.

ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಹಾಗೂ ಫಿಟ್ ಆಗಿರದ ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರ ಸರಕಾರದ ಗುಜರಿ ನೀತಿ-2022ಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದರು. ಈ ಸಂದರ್ಭದಲ್ಲಿ ʼold pollutant’ ಎನ್ನಬೇಕಿದ್ದ ಅವರು ಬಾಯ್ತಪ್ಪಿನಿಂದ ʼold political’ ಎಂದುಬಿಟ್ಟರು.

ಇದು ಆಡಳಿತ ಹಾಗೂ ಪ್ರತಿಪಕ್ಷಗಳ ಸಾಲಿನಲ್ಲಿ ಸಣ್ಣ ಸಂಚಲನ ಹಾಗೂ ನಗೆಯ ಅಲೆಗೆ ಕಾರಣವಾಯಿತು. ಆಗ ತಮ್ಮ ತಪ್ಪನ್ನು ವಿಭಿನ್ನರೀತಿಯಲ್ಲಿ ಸಮರ್ಥಿಸಿಕೊಂಡ ನಿರ್ಮಲಾ, ʼʼನಾನು ಸರಿಯಾಗಿಯೇ ಹೇಳಿದ್ದೇನೆ, ಹಳೆಯ ರಾಜಕೀಯ ವ್ಯವಸ್ಥೆಯೂ ಬದಲಾಗಿದೆʼʼ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಪರೋಕ್ಷ ಟಾಂಗ್‌ ನೀಡಿದರು. ಬಳಿಕ ತಮ್ಮ ಭಾಷಣ ಮುಂದುವರಿಸಿದರು.

ಹಳೆಯ ವಾಹನ ಗುಜರಿ ಯೋಜನೆಗೆ ಉತ್ತೇಜನ ಕೊಡುವ ಉದ್ದೇಶದಿಂದ ಕೇಂದ್ರ ಸರಕಾರ ಇನ್ನಷ್ಟು ಅನುದಾನ ಮೀಸಲಿಡಲಿದೆ ಹಾಗೂ ರಾಜ್ಯ ಸರಕಾರಗಳಿಗೂ ಬೆಂಬಲ ನೀಡಲಿದೆ. ರಾಜ್ಯ ಸರಕಾರ ಅಧೀನದಲ್ಲಿರುವ ಹಳೆ ವಾಹನಗಳು, ಆಂಬ್ಯುಲೆನ್ಸ್​ಗಳನ್ನು ಗುಜರಿಗೆ ಹಾಕುವ ನಿಟ್ಟಿನಲ್ಲಿಯೂ ಬೆಂಬಲ ಒದಗಿಸಲಾಗುವುದು ಎಂದು ನಿರ್ಮಲಾ ಹೇಳಿದರು.

ಇದನ್ನೂ ಓದಿ: Union Budget 2023 : ಗುಜರಿ ನೀತಿಗೆ ಮತ್ತಷ್ಟು ಪ್ರೋತ್ಸಾಹ, ವಿತ್ತ ಸಚಿವೆ ಘೋಷಣೆ

Exit mobile version