Site icon Vistara News

Union Budget 2024 : ಕೇಂದ್ರ ಬಜೆಟ್​ ನಮ್ಮ ಪ್ರಣಾಳಿಕೆ, ರಾಹುಲ್ ಗಾಂಧಿ ಆಲೋಚನೆಗಳ ನಕಲು; ಕಾಂಗ್ರೆಸ್​ ಟೀಕೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಕೇಂದ್ರ ಬಜೆಟ್ (Union Budget 2024) ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕರು ಇದು ‘ಕಾಂಗ್ರೆಸ್ ಪ್ರಣಾಳಿಕೆ’ ಎಂದು ಹೇಳಿದ್ದಾರೆ. ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಹಣಕಾಸು ಸಚಿವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಲೋಕಸಭೆಯಲ್ಲಿ ಓದಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯ 30ನೇ ಪುಟದಲ್ಲಿ ವಿವರಿಸಲಾದ ಉದ್ಯೋಗ-ಸಂಬಂಧಿತ ಪ್ರೋತ್ಸಾಹಕವನ್ನು (ಇಎಲ್ಐ) ಅವರು ಅಳವಡಿಸಿಕೊಂಡಿದ್ದಾರೆ ಎಂದು ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯ 11 ನೇ ಪುಟದಲ್ಲಿ ಅಪ್ರೆಂಟಿಸ್​​ಗೆ ಭತ್ಯೆ ನೀಡು ಭರವಸೆ ನೀಡಲಾಗಿತ್ತು. ಅದೇ ಯೋಜನೆಯನ್ನು ಬಜೆಟ್​ನಲ್ಲಿ ಪರಿಚಯಿಸಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಇತರ ಕೆಲವು ವಿಚಾರಗಳನ್ನು ಹಣಕಾಸು ಸಚಿವರು ನಕಲು ಮಾಡಿದ್ದರೆ ಚೆನ್ನಾಗಿತ್ತು. ಬಿಟ್ಟುಹೋಗಿರುವ ಅಂಶಗಳನ್ನು ನಾನು ಶೀಘ್ರದಲ್ಲೇ ಪಟ್ಟಿ ಮಾಡುತ್ತೇನೆ ಎಂದು ಎಚ್ ಡಿ ದೇವೇಗೌಡ, ಐ.ಕೆ ಗುಜ್ರಾಲ್ ಮತ್ತು ಡಾ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಗಳಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ “ಹತ್ತು ವರ್ಷಗಳ ನಿರಾಕರಿಸಕೊಂಡು ಬರಲಾಗಿದ್ದ ನಿರುದ್ಯೋಗದ ಸಮಸ್ಯೆಯನ್ನು ಜೈವಿಕವಲ್ಲದ ಪ್ರಧಾನಿ ಮತ್ತು ಅವರ ಪಕ್ಷದ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರಲಿಲ್ಲ .ಇದೀಗ ಬಜೆಟ್​ನಲ್ಲಿ ಅದನ್ನ ಅಳವಡಿಸಲಾಗಿದೆ. ಅಂತೂ ಕೇಂದ್ರ ಸರ್ಕಾರವು ಸಾಮೂಹಿಕ ನಿರುದ್ಯೋಗವು ರಾಷ್ಟ್ರೀಯ ಬಿಕ್ಕಟ್ಟು ಎಂಬುದನ್ನು ಮೌನವಾಗಿ ಒಪ್ಪಿಕೊಂಡಿದೆ ಎಂದು ಟೀಕಿಸಿದ್ದಾರೆ.

ಎಲ್ಲವೂ ತಡವಾಗಿ ನಡೆದಿದೆ. ಆದರೂ ಕಡಿಮೆಯೇ ಕೊಡಲಾಗಿದೆ. ಬಜೆಟ್ ಭಾಷಣವು ಕ್ರಿಯೆಗಿಂತ ಭಂಗಿಯ ಮೇಲೆ ಹೆಚ್ಚು ಕೇಂದ್ರೀಕರಣಗೊಂಡಿತ್ತು ಎಂದು ಅವರು ಸರಣಿ ಎಕ್ಸ್ ಪೋಸ್ಟ್​​ಗಳನ್ನು ಮಾಡಿದ್ದಾರೆ.

“ಬಜೆಟ್​​ನಲ್ಲಿ ಅನೇಕ ವಿಷಯಗಳು ಕಾಣೆಯಾಗಿವೆ. ಎಂಎನ್ಆರ್​​​ಇಜಿಎ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ನಮ್ಮ ಜನಸಂಖ್ಯೆಯ ಕೆಳಮಟ್ಟದ ಶೇ. 40 ಜನರ ಆದಾಯವನ್ನು ಸುಧಾರಿಸಲು ಯಾವುದೇ ಗಂಭೀರ ಕ್ರಮಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ನಮ್ಮ ದೇಶದಲ್ಲಿ ಅಸಮಾನತೆಯ ಬಗ್ಗೆ ಮಾತನಾಡುವುದು ಬಹಳ ಕಡಿಮೆ” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆಸಿದ್ದಾರೆ.

ಕಾಂಗ್ರೆಸ್ ಸಂಸದ ಮಾಣಿಕಂ ಠಾಗೋರ್, “ಈ ಬಜೆಟ್ ಹೆಚ್ಚು ಕಡಿಮೆ ಕಾಂಗ್ರೆಸ್ ಪ್ರಣಾಳಿಕೆಯನ್ನು ನಕಲು ಮಾಡಿದೆ. ಯುವ ನಿಧಿ ಯೋಜನೆಯ ವಿಚಾರವನ್ನು ಕದಿಯಲಾಗಿದೆ. ಸರ್ಕಾರವು ಅಪ್ರೆಂಟಿಸ್​​ಶಿಪ್​ನಲ್ಲಿರುವ ಪ್ರತಿ ಯುವಕನಿಗೆ ₹ 5000 ಎಂದು ಘೋಷಿಸಿದೆ. ಈ ಸರ್ಕಾರವು ರಾಹುಲ್ ಗಾಂಧಿಯವರ ವಿಚಾರಗಳನ್ನು ನಕಲು ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​ ಬಳಿಕ ಯಾವುದೆಲ್ಲ ಅಗ್ಗ, ಯಾವುದೆಲ್ಲ ದುಬಾರಿ?

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಬಜೆಟ್​ನಲ್ಲಿ ಸರ್ಕಾರವನ್ನು ಉಳಿಸಲು ಪ್ರಯತ್ನಿಸಲಾಗಿದೆ . ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಯೋಜನೆಗಳು ಸಿಕ್ಕಿರುವುದು ಒಳ್ಳೆಯದು. ಆದರೆ ಪ್ರಧಾನ ಮಂತ್ರಿಗಳನ್ನು ಪ್ರತಿನಿಧಿಸುವ ರಾಜ್ಯವಾದ ಉತ್ತರ ಪ್ರದೇಶವು ರೈತರಿಗಾಗಿ ದೊಡ್ಡ ಘೋಷಣೆಗಳನ್ನು ಮಾಡಿದೆಯೇ? ರೈತರ ಉತ್ಪನ್ನಗಳು ಮತ್ತು ಆದಾಯಕ್ಕೆ ನಿಬಂಧನೆಗಳಿವೆಯೇ? ಎಂದು ಪ್ರಶ್ನಿಸಿದ್ದಾರೆ.

Exit mobile version