Site icon Vistara News

Union Budget 2024 Live: ನಿರ್ಮಲಾ ಬಜೆಟ್‌ನಲ್ಲಿ ಯಾರಿಗೆಲ್ಲ ಸಿಹಿ? ಬಜೆಟ್‌ ಮಂಡನೆಯ ಲೈವ್‌ ಇಲ್ಲಿ ವೀಕ್ಷಿಸಿ

Union Budget 2024

Union Budget 2024: Watch Budget Live Here

ನವದೆಹಲಿ: ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ (Union Budget 2024 Live) ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಸಜ್ಜಾಗಿದ್ದಾರೆ. ದೇಶದ ಜನರಿಗೆ ತೆರಿಗೆ ವಿನಾಯಿತಿ, ಅಗತ್ಯ ವಸ್ತುಗಳ ಬೆಲೆ ಇಳಿಕೆ, ಉದ್ಯೋಗ ಸೃಷ್ಟಿ ಸೇರಿ ಹಲವು ನಿರೀಕ್ಷೆಗಳಿವೆ. ಇನ್ನು, ಕೇಂದ್ರ ಬಜೆಟ್‌ನ ಪ್ರತಿ ಪಕ್ಷಣದ ಮಾಹಿತಿಯನ್ನು ಲೈವ್‌ ವೀಕ್ಷಣೆ ಮಾಡಬಹುದಾಗಿದೆ. ಲೈವ್‌ಅನ್ನು ಹೀಗೆ ವೀಕ್ಷಿಸಿ…

ರೈಲ್ವೆ ಕ್ಷೇತ್ರದಲ್ಲಿ ನಿರೀಕ್ಷೆಗಳು
1. ಸಂಚಾರ ಜಾಲ ವಿಸ್ತರಣೆ

ಈ ಮೂಲಕ ರೈಲು ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆಸಬಹುದು. ಸಾರ್ವಜನಿಕರಿಗೆ ಸೌಲಭ್ಯಗಳನ್ನು ವಿಸ್ತರಿಸಲು ಸರ್ಕಾರವು ಗಮನಾರ್ಹ ಪ್ರಮಾಣದ ಹಣವನ್ನು ಮೀಸಲಿಡುವ ಸಾಧ್ಯತೆ ಇದೆ. ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು, ಅಪಘಾತಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕರಿಗೆ ಅತ್ಯತ್ತಮ ಸಾರಿಗೆ ಅನುಭವವನ್ನು ಹೆಚ್ಚಿಸುವ ನಿರೀಕ್ಷೆ ಇದೆ.

2. ರೈಲ್ವೇ ಕಾರಿಡಾರ್

ಮಧ್ಯಂತರ ಬಜೆಟ್‌ನಲ್ಲಿ 11 ಲಕ್ಷ ಕೋಟಿ ರೂ. ಮೊತ್ತದ ರೈಲ್ವೆ ಕಾರಿಡಾರ್‌ಗಳನ್ನು ಸರ್ಕಾರದ ಮುಂಬರುವ ಯೋಜನೆಗಳಲ್ಲಿ ಸೇರಿಸಲಾಗುವುದು ಎಂದು ಘೋಷಿಸಲಾಗಿತ್ತು. ಪ್ರಸ್ತುತ ತಯಾರಿ ಹಂತದಲ್ಲಿರುವ ಒಟ್ಟು 400 ಯೋಜನೆಗಳನ್ನು ಈ ಬಾರಿಯ ಬಜೆಟ್ ಒಳಗೊಳ್ಳುವ ನಿರೀಕ್ಷೆ ಇದೆ.

3. ಸೌಲಭ್ಯ ಆಧುನೀಕರಣ

ಮೂಲಸೌಕರ್ಯ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪಿಡಬ್ಲ್ಯುಸಿ ಇಂಡಿಯಾದ ಪಾಲುದಾರರಾಗಿರುವ ಮನೀಷ್ ಆರ್ ಶರ್ಮಾ ಅವರ ಪ್ರಕಾರ, , ರೈಲ್ವೇ ಜಾಲವು ವಿಸ್ತಾರವಾಗಿರುವುದರಿಂದ ಸರ್ಕಾರವು ಕನಿಷ್ಠ ಐದು ವರ್ಷಗಳವರೆಗೆ ಸೌಲಭ್ಯಗಳ ಆಧುನೀಕರಣದತ್ತ ಗಮನ ಹರಿಸುವುದನ್ನು ಮುಂದುವರಿಸಬಹುದು ಎಂದು ತಿಳಿಸಿದ್ದಾರೆ.


4. ಹೆಚ್ಚಿನ ರೈಲು ಸಂಚಾರ

ಪ್ರಯಾಣಿಕರ ವೇಟಿಂಗ್‌ ಲಿಸ್ಟ್‌ ಪ್ರಮಾಣ ಕಡಿಮೆ ಮಾಡಲು ರೈಲು ಸಂಚಾರವನ್ನು ಹೆಚ್ಚಿಸಬಹುದು. ಭಾರತೀಯ ರೈಲ್ವೆಯು 10,754 ದೈನಂದಿನ ರೈಲು ಪ್ರಯಾಣಗಳನ್ನು ನಡೆಸುತ್ತಿದೆ. ವಾರ್ಷಿಕವಾಗಿ ಸುಮಾರು 700 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. 2030ರ ವೇಳೆಗೆ ವೇಟಿಂಗ್‌ ಲಿಸ್ಟ್‌ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ಮೂಲಕ ವಾರ್ಷಿಕ 1,000 ಕೋಟಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ರೈಲು ಸೇವೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ರಯಾಣಿಕರ ಕಾಯುವ ಅವಧಿ ಕಡಿಮೆ ಮಾಡುವ ಸವಾಲನ್ನು ಎದುರಿಸಲು ಕನಿಷ್ಠ ಶೇ. 30ರಷ್ಟು ಅಂದರೆ ಸುಮಾರು 3,000 ಹೆಚ್ಚುವರಿ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವ ವೈಷ್ಣವ್ ಹೇಳಿದ್ದಾರೆ.

5. ಅಭಿವೃದ್ಧಿ ಕಾಮಗಾರಿ

ಮೆಟ್ರೋ ನೆಟ್‌ವರ್ಕ್‌ ಹೆಚ್ಚಳ, ನಮೋ ಭಾರತ್ ಕಾರಿಡಾರ್‌ಗಳ ಅಭಿವೃದ್ಧಿ, ವಂದೇ ಭಾರತ್ ರೈಲುಗಳ ವಿಸ್ತರಣೆ, ಹೈಸ್ಪೀಡ್ ಕಾರಿಡಾರ್‌ಗಳ ಸ್ಥಾಪನೆ ಮತ್ತು ಆರ್ಥಿಕ ಕಾರಿಡಾರ್‌ಗಳ ರಚನೆಗೆ ಆರ್ಥಿಕ ಸಂಪನ್ಮೂಲಗಳನ್ನು ಬಜೆಟ್ ನಲ್ಲಿ ಮೀಸಲಿಡುವ ಸಾಧ್ಯತೆ ಇದೆ.

6. ಪಿಎಲ್‌ಐ ಯೋಜನೆ

ಬಜೆಟ್‌ನಲ್ಲಿ ಈ ಬಾರಿ ಪಿಎಲ್‌ಐ ಯೋಜನೆಯ ಅಡಿಯಲ್ಲಿ ಸರ್ಕಾರವು ಸಾಮಾನ್ಯವಾಗಿ ಆಮದು ಮಾಡಿಕೊಳ್ಳುವ ಉತ್ಪನ್ನಗಳನ್ನು ತಯಾರಿಸಲು ಪ್ರೋತ್ಸಾಹ ನೀಡುವ ನೀಡಲಿದೆ.

7. ಸುರಕ್ಷತೆಗೆ ಆದ್ಯತೆ

ಕೇಂದ್ರ ಬಜೆಟ್ 2024ರಲ್ಲಿ ರೈಲ್ವೇ ವಲಯದ ಪ್ರಮುಖ ನಿರೀಕ್ಷೆಗಳಲ್ಲಿ ಸುರಕ್ಷತೆ ಪ್ರಮುಖವಾಗಿದೆ. ಇದಕ್ಕಾಗಿ ರೈಲ್ವೇಯ ಯಂತ್ರೋಪಕರಣಗಳು, ಉಪಕರಣಗಳು, ಕಟ್ಟಡ, ಆರೋಗ್ಯ ಸೌಲಭ್ಯ, ಶಿಕ್ಷಣ ಮೊದಲಾದವುಗಳ ಅಭಿವೃದ್ಧಿಗೆ ಸರ್ಕಾರವು ಹೆಚ್ಚು ಖರ್ಚು ಮಾಡುವ ನಿರೀಕ್ಷೆ ಇದೆ. ಇದರೊಂದಿಗೆ ಅಪಘಾತಗಳನ್ನು ತಡೆಯಲು ಸುರಕ್ಷತೆಗಾಗಿ ಹೆಚ್ಚಿನ ಹಣ ವಿನಿಯೋಗಿಸಬಹುದು.

ಹೊಸ ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳನ್ನು ಪ್ರಾರಂಭಿಸುವುದು, ಸರಕು ವ್ಯಾಗನ್ ಗಳನ್ನು ಹೆಚ್ಚಿಸುವುದು, ಪ್ರಯಾಣಿಕರ ವಿಭಾಗ, ದಟ್ಟಣೆಯ ನೆಟ್‌ವರ್ಕ್‌ಗಳಲ್ಲಿ ಸುರಕ್ಷಿತ ಮತ್ತು ವೇಗವಾದ ಟ್ರ್ಯಾಕ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದು ಎನ್ನುತ್ತಾರೆ ಬಜೆಟ್ ವಿಶ್ಲೇಷಕ ಅಜಯ್ ಬಗ್ಗಾ.

ಇದನ್ನೂ ಓದಿ: Central Budget 2024: ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಹಣಕಾಸು ಸಚಿವರು ಇವರೇ ನೋಡಿ

Exit mobile version