Site icon Vistara News

UPSC Coaching : ನೈತಿಕತೆಯ ಪಾಲನೆ ವಿಚಾರದಲ್ಲಿ ಶ್ರೀರಾಮನಿಗಿಂತ ಅಕ್ಬರನೇ ಶ್ರೇಷ್ಠ ಎಂದ ಯುಪಿಎಸ್​ಸಿ ಬೋಧಕಿ ಶುಭ್ರಾ ರಂಜನ್; ಕೇಸ್​ ದಾಖಲಾದ ಬಳಿಕ ಕ್ಷಮೆ ಕೋರಿಕೆ

ನವದೆಹಲಿ: ಮೊಘಲ್ ಚಕ್ರವರ್ತಿ ಅಕ್ಬರ್ ಅವರನ್ನು ಹಿಂದೂ ದೇವರಾದ ರಾಮನಿಗೆ ಹೋಲಿಕೆ ಮಾಡಿದ್ದಲ್ಲದೆ, ನೈತಿಕತೆ ಪಾಲನೆ ವಿಚಾರದಲ್ಲಿ ರಾಮನಿಗಿಂತ (Lord Rama) ಅಕ್ಬರನೇ ಶ್ರೇಷ್ಠ ಎಂದು ಹೇಳಿರುವ ಯುಪಿಎಸ್​​ಸಿ ಟ್ಯುಟೋರಿಯಲ್ (UPSC Coaching) ಒಂದು ವಿವಾದ ಹುಟ್ಟು ಹಾಕಿದೆ. ಬಳಿಕ ಬೋಧನೆ ಮಾಡಿರುವ ಶಿಕ್ಷಕಿ ಶುಭ್ರಾ ರಂಜನ್ (Shubhra Ranjan) ಕ್ಷಮೆ ಕೋರಿ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ರಂಜನ್ ಅವರು ಶ್ರೀರಾಮ ” ತನ್ನ ಅಪರಿಮಿತ ಶಕ್ತಿಯನ್ನು ಪ್ರದರ್ಶಿಸುವುದಿಲ್ಲ” ಎಂದು ಹೇಳಿದ್ದರು. ಇದು ನೆಟ್ಟಿಗರನ್ನು ಕೆರಳಿಸಿತ್ತು. ಶೈಕ್ಷಣಿಕ ಬೋಧನೆ ವೇಳೆ ಐತಿಹಾಸಿಕ ಮತ್ತು ಧಾರ್ಮಿಕ ವ್ಯಕ್ತಿಗಳ ನಡುವೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬೆಳವಣಿಕೆ ಬಳಿಕ ಶುಭ್ರಾ ರಂಜನ್ ಕ್ಷಮೆಯಾಚಿಸಿದ್ದಾರೆ. ಯಾರ ಭಾವನೆಯನ್ನೂ ನೋಯಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ. “ಯಾರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ಅದು ಆಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ಉಪನ್ಯಾಸದ ಒಂದು ಭಾಗವನ್ನು ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅದು ವಿಡಿಯೋ ತರಗತಿಯ ಚರ್ಚೆಯ ಒಂದು ಸಣ್ಣ ಭಾಗ ಮಾತ್ರ ಎಂದು ಹೇಳಿದ್ದಾರೆ.

ಶ್ರೀ ರಾಮನ ರಾಜ್ಯವು ಆದರ್ಶ ರಾಜ್ಯ ಎಂದು ತಿಳಿಸಲು ನಾನು ಉದ್ದೇಶಿಸಿದ್ದೆ. ಸಂಪೂರ್ಣ ವೀಡಿಯೊ ಉಪನ್ಯಾಸವನ್ನು ನೋಡುವುದರಿಂದ ಅರ್ಥಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಈ ಚರ್ಚೆಯು ತುಲನಾತ್ಮಕ ಅಧ್ಯಯನದ ಭಾಗವಾಗಿದೆ.. ಅನಪೇಕ್ಷಿತ ತಪ್ಪು ವ್ಯಾಖ್ಯಾನ ಅಲ್ಲ ಎಂದು ಹೇಳಿದ್ದಾರೆ.

ಶುಭ್ರಾ ರಂಜನ್ ಹೇಳಿದ್ದೇನು?

ರಾಮನ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಶುಭ್ರಾ ರಂಜನ್. ಹಿಂದೂ ದೇವರ ಶಕ್ತಿಯನ್ನು “ಸಂಪ್ರದಾಯಗಳಿಂದ ನಿರ್ಬಂಧಿಸಲಾಗಿದೆ” ಎಂದು ಹೇಳಿದ್ದರು. ಅಲ್ಲದೆ, ಚಕ್ರವರ್ತಿ ಅಕ್ಬರನನ್ನು ಹೋಲಿಕೆ ಮಾಡುತ್ತಾ ‘ಯಾರ ಅಧಿಕಾರವು ಸಂಪ್ರದಾಯಕ್ಕೆ ಮೀರಿದೆ ಅಥವಾ ಸೀಮಿತವಾಗಿದೆ?’ ಎಂದು ಹೇಳುವಂತೆ ವಿದ್ಯಾರ್ಥಿಗಳನ್ನು ಕೇಳಿದ್ದಾರೆ. ಬಳಿಕ ಅವರೇ “ಅಕ್ಬರ್” ಎಂದು ಉತ್ತರಿಸಿದ್ದಾರೆ. ಅಲ್ಲದೆ, ರಾಮ ಧರ್ಮವೊಂದರ ಅಡಿಯಲ್ಲಿ ನೈತಿಕತೆಯನ್ನು ಪಾಲನೆ ಮಾಡಿದರೆ, ಅಕ್ಬರ್​ ತನ್ನದೇ ಆದ ನೈತಿಕತೆ ಹೊಂದಿದ್ದ ಎಂದು ಹೇಳಿದ್ದಾರೆ.

ಅಕ್ಬರ್ ತನ್ನದೇ ಆದ ಧರ್ಮ ಮತ್ತು ತನ್ನದೇ ಆದ ನೈತಿಕತೆ ಸ್ಥಾಪಿಸುವ ಗುರಿ ಹೊಂದಿದ್ದ ಎಂದು ರಂಜನ್ ವಿಡಿಯೊ ಕ್ಲಾಸ್​ನಲ್ಲಿ ವಿವರಿಸಿದ್ದಾರೆ. ರಂಜನ್ 1582 ರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಪ್ರತಿಪಾದಿಸಿದ ಸರ್ವ ಧರ್ಮ- ‘ದೀನ್-ಇ ಇಲಾಹಿ’. ಯನ್ನು ಉಲ್ಲೇಖಿಸುತ್ತಾರೆ. ಮುಂದುವರಿದ ಅವರು “ರಾಮ ನೈತಿಕತೆಯನ್ನು ವ್ಯಾಖ್ಯಾನಿಸುತ್ತಿಲ್ಲ” ಎಂದು ಮೊಘಲ್ ಚಕ್ರವರ್ತಿಗೆ ಹೋಲಿಸುತ್ತಾರೆ.

ಇದನ್ನು ಓದಿ: Income Tax : ವಿದೇಶ ಪ್ರಯಾಣಕ್ಕೆಹೊರಟವರೇ ಇಲ್ಲಿ ಕೇಳಿ; ಆದಾಯ ತೆರಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಎಲ್ಲರಿಗೂ ಕಡ್ಡಾಯವಲ್ಲ ಎಂದಿದೆ ಕೇಂದ್ರ ಸರ್ಕಾರ

ಭಾರತದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ರಾಜಪ್ರಭುತ್ವದ ವ್ಯವಸ್ಥೆಯು ಹೇಗೆ ವಿಕಸನಗೊಂಡಿದೆ ಎಂಬುದನ್ನು ವಿವರಿಸಲು ಶುಭ್ರಾ ರಂಜನ್ ಹೋಲಿಕೆಗಳನ್ನು ಬಳಸುತ್ತಾರೆ. ಭಾರತದಲ್ಲಿ ರಾಜಪ್ರಭುತ್ವವು ‘ಸಂಪೂರ್ಣ’ ಅಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

“ರಾಜ ಕೂಡ ಧರ್ಮದ ಅಡಿಯಲ್ಲಿದ್ದ. ರಾಜಧರ್ಮ ಎತ್ತಿಹಿಡಿದಿದ್ದನು ” ಎಂದು ರಂಜನ್ ಹೇಳಿದ್ದಾರೆ.

ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದ್ದಾರೆ?

ಎಕ್ಸ್ ಬಳಕೆದಾರರೊಬ್ಬರು ಸೈಬರ್ ಪೊಲೀಸ್ ಪೋರ್ಟಲ್​ನಲ್ಲಿ ದೂರು ದಾಖಲಿಸಿದ್ದು, ಶುಭ್ರಾ ರಂಜನ್ ಅವರು “ಧರ್ಮನಿಂದನೆ ಮತ್ತು ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಎಕ್ಸ್ ಬಳಕೆದಾರರು ರಂಜನ್ ಅವರನ್ನು ಟೀಕಿಸಿದ್ದು, ಭಗವಾನ್ ರಾಮನನ್ನು ಅಕ್ಬರ್​ಗೆ ಹೋಲಿಸುವ ಮೂಲಕ ಯುಪಿಎಸ್​ಸಿ ಆಕಾಂಕ್ಷಿಗಳ ಮನಸ್ಸನ್ನು ಭ್ರಷ್ಟಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ .

ಕೆಲವು ನೆಟ್ಟಿಗರು ಶುಭ್ರಾ ಅವರನ್ನು ಬೆಂಬಲಿಸಿದ್ದಾರೆ. “ಅಕ್ಬರ್ ತನ್ನದೇ ಆದ ನೈತಿಕತೆ ವ್ಯಾಖ್ಯಾನಿಸುತ್ತಿದ್ದ. ಶ್ರೀ ರಾಮನು ನಿಜವಾಗಿ ನೈತಿಕತೆ ಅನುಸರಿಸುತ್ತಿದ್ದ. ಹೀಗಿರುವಾರ ಶ್ರೀ ರಾಮನನ್ನು ರಾಜನೆಂದು ವಿಶ್ಲೇಷಿಸುವುದರಲ್ಲಿ ಏನು ಸಮಸ್ಯೆ?” ಎಂದು ಪ್ರಶ್ನಿಸಿದ್ದಾರೆ.

Exit mobile version