Site icon Vistara News

V Somanna : ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ಸಂಸದರ ಕಚೇರಿ ಉದ್ಘಾಟಿಸಿದ ವಿ ಸೋಮಣ್ಣ

V Somanna

ತುಮಕೂರು : ಇಲ್ಲಿನ ಪರಿವೀಕ್ಷಣಾ ಮಂದಿರದಲ್ಲಿ ತಮಗೆ ನೀಡಲಾಗಿದ್ದ ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಏಕಾಏಕಿ ರದ್ದು ಮಾಡಿರುವ ಹೊರತಾಗಿಯೂ ಕೇಂದ್ರ ರೈಲ್ವೆ ಖಾತೆ ಸಹಾಯ ಸಚಿವ ಸೋಮಣ್ಣ (V Somanna) ಅವರು ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿ ಕಚೇರಿ ಉದ್ಘಾಟಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಸೋಮಣ್ಣ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ತಮಕೂರು ಸಂಸದರಾಗಿರುವ ವಿ. ಸೋಮಣ್ಣ ಅವರು ತುಮಕೂರಿನ ರೈಲ್ವೆ ನಿಲ್ದಾಣ ಬಳಿಯಿರುವ ಹಳೆಯ ಪರಿವೀಕ್ಷಣಾ ಮಂದಿರದ ನಾಲ್ಕು ಕೊಠಡಿಗಳನ್ನು ತಮ್ಮ ಕಚೇರಿ ಉಪಯೋಗಕ್ಕಾಗಿ ಪಡೆದಿದ್ಧರು. ಭಾನುವಾರ ನೂತನ ಕಚೇರಿ ಉದ್ಫಾಟನೆ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದರು. ಕಚೇರಿಯನ್ನು ನವೀಕರಣ ಮಾಡಿ ಪೀಠೋಪಕರಣಗಳು, ಕುರ್ಚಿ ಹಾಗೂ ಮೇಜುಗಳನ್ನು ಹಾಕಿದ್ದರು.

ಸಿದ್ಧತೆಗಳನ್ನು ಅವರು ನಡೆಸಿದ ಬಳಿಕ ರಾಜ್ಯ ಸರ್ಕಾರ ಅವರಿಗೆ ನೀಡಲಾಗಿದ್ದ ಪರಿವೀಕ್ಷಣಾ ಮಂದಿರದ ಕಚೇರಿಯನ್ನು ವಾಪಸ್ ಪಡೆದಿತ್ತು. ಇದು ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಮೈತ್ರಿ ಪಾರ್ಟಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಯಿತು. ಏಕಾಏಕಿ ಕಚೇರಿ ತೆರೆಯದಂತೆ ಆದೇಶ ಹಿಂಪಡೆದಿದ್ದ ಸರ್ಕಾರದ ವಿರುದ್ಧ ಸ್ಥಳೀಯ ನಾಯಕರು ಕಿಡಿಕಾರಿದ್ದರು. ಆದರೆ, ಭಾನುವಾರ ಸೋಮಣ್ಣ ಅವರು ಎಂದಿನಂತೆ ಕಚೇರಿಯಲ್ಲಿ ಪೂಜೆ ಮಾಡಿಸಿ ಕಾರ್ಯಾರಂಭ ಮಾಡಿದ್ದಾರೆ ವಿ.ಸೋಮಣ್ಣಗೆ ಮಾಜಿ ಸಂಸದ ಜಿಎಸ್ ಬಸವರಾಜ, ಶಾಸಕ ಜಿ. ಬಿ ಜ್ಯೋತಿ ಗಣೇಶ್, ಸುರೇಶ್ ಗೌಡ, ಎಂ.ಟಿ ಕೃಷ್ಣಪ್ಪ, ಮಾಜಿ ಶಾಸಕ ಮಸಾಲೆ ಜಯರಾಮ್ ಸೇರಿದಂತೆ ಹಲವು ನಾಯಕರು ಜತೆಗಿದ್ದರು.

ವಿವಾದದ ನಡುವೆ ನೂತನ ಕಚೇರಿ ಉದ್ಘಾಟನೆ ನಡೆದ ಕಾರಣ ಅಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 300 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಭದ್ರತೆ ನೀಡಿದ್ದರು.

ಸುದ್ದಿಗೋಷ್ಠಿ ನಡೆಸಿದ್ದ ಮಿತ್ರ ಪಕ್ಷಗಳು

ಸಚಿವ‌ ವಿ.ಸೋಮಣ್ಣ ಅವರಿಗೆ ಪ್ರವಾಸಿ ಮಂದಿರದಲ್ಲಿದ್ದ ನೀಡಲಾಗಿದ್ದ ಕಚೇರಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದ ವಿಚಾರವಾಗಿ ತುಮಕೂರಿನಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಸಿ ಟೀಕಿಸಿದ್ದರು. ಇದು ಹಳೆಯ ಪರಿವೀಕ್ಷಣಾ ಮಂದಿರ. 1941 ರಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿತ್ತು. ಇದು ಸಂಪೂರ್ಣ ಹಾಳಾಗಿ ಶಿಥೀಲಾವಸ್ಥೆಗೆ ತಲುಪಿತ್ತು. ಆ ಬಳಿಕ ಜಿಲ್ಲಾಧಿಕಾರಿ ಲೋಕಸಭಾ ಸದಸ್ಯರಿಗೆ ಕಚೇರಿ ಮಾಡಿಕೊಳ್ಳಲು ಅನುಮತಿ ನೀಡಿದ್ದರು. ಬಳಿಕ ಸೋಮಣ್ಣ ಅವರು ಕಚೇರಿ ನವೀಕರಣ ಕೂಡ ಮಾಡಿದ್ದರು. ಆ ಬಳಿಕ ಏಕಾಏಕಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಅನುಮತಿ ರದ್ದು ಮಾಡಿದ್ದರು. ಸರ್ಕಾರವೇ ಕೊಟ್ಟು ಅಂತಿಮ ಹಂತದಲ್ಲಿ ರದ್ದು ಮಾಡಿದ್ದು ಯಾಕೆ ಎಂದು ಮಿತ್ರಪಕ್ಷಗಳು ಪ್ರಶ್ನಿಸಿದ್ದವು.

ಇದನ್ನೂ ಓದಿ: TNIT Media Award : ವಿಸ್ತಾರ ನ್ಯೂಸ್​​ಗೆ ಟಿಎನ್​ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್ಸ್​​ನ 3 ಪ್ರಶಸ್ತಿಗಳ ಗರಿ

ಗೃಹ ಸಚಿವ ಪರಮೇಶ್ವರ ಅವರು ಆದೇಶ ಮಾಡಿದ್ದು, ಘಟನೆಗೆ ಅವರೇ ನೇರ ಹೊಣೆ. ದ್ವೇಷ ರಾಜಕರಣ ಮಾಡಬೇಡಿ. ಕೇಂದ್ರ ಸಚಿವರನ್ನ ಬಳಸಿಕೊಂಡು ನಾವು ಜಿಲ್ಲೆ ಕಟ್ಟಬೇಕು. ರೈಲ್ವೆ ನೀರು ಮೆಟ್ರೋ ಕೈಗಾರಿಕೆ, ಚೆನೈ ಬೆಂಗಳೂರು ಕಾರಿಡಾರ್ ಸೇರಿದಂತೆ ಸಾಕಷ್ಟು ಯೋಜನೆ ಮಾಡಬೇಕಾಗಿದೆ. ಕಚೇರಿ ವಿಚಾರದಲ್ಲಿ ಕ್ಷುಲ್ಲಕ ರಾಜಕರಣ ಮಾಡಬಾರದು ಎಂದು ಆರೋಪಿಸಿದ್ದರು.

Exit mobile version