ಬೆಂಗಳೂರು: ಭಾರತ ತಂಡಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ ಸತತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ (KKR) ಆಲ್ರೌಂಡರ್ ವೆಂಕಟೇಶ್ ಅಯ್ಯರ್ (Venkatesh Iyer) ಏಕದಿನ ಕಪ್ ಮತ್ತು ಕೌಂಟಿ ಚಾಂಪಿಯನ್ಶಿಪ್ಗಾಗಿ ಲಂಕಾಶೈರ್ ತಂಡದೊಂದಿಗೆ ಐದು ವಾರಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ನಂತರ ಅವರಿಗೆ ಈ ಅವಕಾಶ ಸಿಕ್ಕಿದೆ.
🚨📰| Phil Salt recommended Lancashire to sign KKR teammate Venkatesh Iyer.
— KnightRidersXtra (@KRxtra) July 26, 2024
(ESPNcricinfo) pic.twitter.com/zlZ5JQxjHh
ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ (IPL 2024) ಕೋಲ್ಕತಾ ನೈಟ್ ರೈಡರ್ಸ್ (KKR) ಗೆಲ್ಲುವಲ್ಲಿ ವೆಂಕಟೇಶ್ ಅಯ್ಯರ್ ಪ್ರಮುಖ ಪಾತ್ರ ವಹಿಸಿದ್ದರು. ಆಲ್ರೌಂಡರ್ ಫ್ರಾಂಚೈಸಿಗಾಗಿ 370 ರನ್ ಗಳಿಸಿದ್ದರು. 4 ಅರ್ಧಶತಕಗಳನ್ನು ಬಾರಿಸಿದರು. ಅವರು ಪಂದ್ಯಾವಳಿಯ ಇತಿಹಾಸದಲ್ಲಿ ತಮ್ಮ ತಂಡಕ್ಕೆ ಮೂರನೇ ಪ್ರಶಸ್ತಿ ಎತ್ತಿಹಿಡಿಯಲು ಸಹಾಯ ಮಾಡಿದರು. ಅವರ ಸ್ಥಿರ ಪ್ರದರ್ಶನದ ಹೊರತಾಗಿಯೂ ವೆಂಕಟೇಶ್ ಅಯ್ಯರ್ ಅವರಿಗೆ ಭಾರತೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ. ಆಲ್ರೌಂಡರ್ ಈಗ ಯುಕೆಯಲ್ಲಿ ಆಡಲು ನಿರ್ಧರಿಸಿದ್ದಾರೆ. ಅವರು ಲಂಕಾಶೈರ್ನೊಂದಿಗೆ ಐದು ವಾರಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸೆಪ್ಟೆಂಬರ್ನಲ್ಲಿ ನಡೆಯಲಿರುವ ದುಲೀಪ್ ಟ್ರೋಫಿಗಾಗಿ ಭಾರತಕ್ಕೆ ಮರಳಲಿದ್ದಾರೆ.
ವೆಂಕಟೇಶ್ ಅಯ್ಯರ್ ದೇಶೀಯ ಸರ್ಕೀಟ್ ಮತ್ತು ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಲಂಕಾಶೈರ್ ಪರ ಉತ್ತಮ ಪ್ರದರ್ಶನ ಮುಂದುವರಿಸುವ ಮತ್ತು ದುಲೀಪ್ ಟ್ರೋಫಿಯಲ್ಲಿ ಪ್ರಭಾವ ಬೀರುವ ಭರವಸೆ ಅವರು ಹೊಂದಿದ್ದಾರೆ. 2022 ರ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಟಿ 20 ಐ ಸರಣಿಯಲ್ಲಿ ಅವರು ಕೊನೆಯ ಬಾರಿಗೆ ತಂಡಕ್ಕಾಗಿ ಕಾಣಿಸಿಕೊಂಡಿದ್ದರು.
ವೆಂಕಟೇಶ್ ಅಯ್ಯರ್ ಐತಿಹಾಸಿಕ ಕ್ಲಬ್ ಪರ ಆಡುವ ಉತ್ಸಾಹದ ಬಗ್ಗೆ ಮಾತನಾಡಿದ್ದಾರೆ, ತಮ್ಮ ಕೌಶಲಗಳನ್ನು ಪರೀಕ್ಷಿಸಲು ಮತ್ತು ತನ್ನ ತಂಡವನ್ನು ಗೆಲ್ಲಲು ಸಹಾಯ ಮಾಡಲು ಇದು ಉತ್ತಮ ಅವಕಾಶ ಎಂದು ಅವರು ಒಪ್ಪಿಕೊಂಡರು. ಅಧಿಕೃತ ಹೇಳಿಕೆಯಲ್ಲಿ ಅವರು ಈ ರೀತಿ ತಿಳಿಸಿದ್ದಾರೆ.
ಇಂಗ್ಲೆಂಡ್ಗೆ ತೆರಳಲು ಮತ್ತು ನನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುವ ಅವಕಾಶವನ್ನು ಪಡೆಯಲು ಉತ್ಸುಕನಾಗಿದ್ದೇನೆ. ಲಂಕಾಶೈರ್ ಅತ್ಯಂತ ಐತಿಹಾಸಿಕ ಕೌಂಟಿಯಾಗಿದ್ದು, ಭಾರತೀಯ ಆಟಗಾರರನ್ನು ತಮ್ಮ ಕ್ಲಬ್ಗೆ ಸ್ವಾಗತಿಸುವ ದೀರ್ಘ ಇತಿಹಾಸ ಹೊಂದಿದೆ. ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಮ್ನಲ್ಲಿ ಕೆಂಪು ಗುಲಾಬಿ ಬಣ್ಣ ಜೆರ್ಸಿ ಧರಿಸಿದ ಲೆಜೆಂಡ್ಗಳಾದ ಫಾರೂಕ್ ಎಂಜಿನಿಯರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ಇತ್ತೀಚೆಗೆ ವಾಷಿಂಗ್ಟನ್ ಸುಂದರ್ ಅವರನ್ನು ಅನುಕರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: India Tour of Sri Lanka 2024 : ಶ್ರೀಲಂಕಾ ತಂಡಕ್ಕೆ 3ನೇ ಹೊಡೆತ; ಭಾರತ ವಿರುದ್ಧದ ಟಿ20 ಸರಣಿಗೆ ಬಿನುರಾ ಫರ್ನಾಂಡೊ ಅಲಭ್ಯ
ಇಂಗ್ಲೆಂಡ್ನ ಪರಿಸ್ಥಿತಿಗಳಲ್ಲಿ ಏಕದಿನ ಮತ್ತು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ನನ್ನ ಕೌಶಲಗಳನ್ನು ಪರೀಕ್ಷಿಸಲು ಉತ್ತಮ ವೇದಿಕೆಯಾಗಿದೆ. ನಾನು ಅಭಿಮಾನಿಗಳನ್ನು ರಂಜಿಸಬಲ್ಲೆ ಮತ್ತು ಈ ಬೇಸಿಗೆಯಲ್ಲಿ ಎರಡೂ ಸ್ವರೂಪಗಳಲ್ಲಿ ತಮ್ಮ ಗುರಿ ಸಾಧಿಸಲು ನನ್ನ ಲಂಕಾಶೈರ್ ತಂಡದ ಆಟಗಾರರಿಗೆ ಸಹಾಯ ಮಾಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.