ನವ ದೆಹಲಿ: ಕನ್ನಡತಿ ಹಾಗೂ ಮಾಜಿ ಸಚಿವೆ ಮಾರ್ಗರೆಟ್ ಆಳ್ವಾ ಅವರು ಪ್ರತಿಪಕ್ಷಗಳ ಉಪರಾಷ್ಟ್ರಪತಿ ಚುನಾವಣೆಯಲ್ಲಿ (Vice President Election) ಯಪಿಎ ಅಭ್ಯರ್ಥಿಯಾಗಿ ಭಾನುವಾರ ಆಯ್ಕೆಯಾಗಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಜುಲೈ ೧೯ ಕೊನೇ ದಿನವಾಗಿದ್ದು, ಆಗಸ್ಟ್ ೬ರಂದು ಚುನಾವಣೆ ನಡೆಯಲಿದೆ.
ಮಾರ್ಗರೆಟ್ ಅವರು ಮಾಜಿ ಕೇಂದ್ರ ಸಚಿವರಾಗಿದ್ದು, ರಾಜಸ್ಥಾನ, ಗೋವಾ, ಗುಜರಾತ್ ಹಾಗೂ ಉತ್ತರಾಖಂಡದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.
ಆಡಳಿತಾರೂಢ ಎನ್‌ಡಿಎ ಶನಿವಾರ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್‌ಕರ್ ಅವರನ್ನು ಘೋಷಣೆ ಮಾಡಿತ್ತು. ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಳಿಕ ಧನ್‌ಕರ್ ಅವರ ಹೆಸರನ್ನು ಘೋಷಿಸಲಾಗಿತ್ತು. ಅಂತೆಯೇ ಭಾನುವಾರ ಯುಪಿಎ ಸದಸ್ಯ ಪಕ್ಷಗಳು ಭಾನುವಾರ ಸಭೆ ನಡೆಸಿ ಮಾರ್ಗರೆಟ್ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಹೊಸದಿಲ್ಲಿಯಲ್ಲಿ ಭಾನುವಾರ ಸರ್ವಪಕ್ಷಗಳ ಸಭೆ ನಡೆದ ಬಳಿಕ ಎನ್‌ಸಿಪಿ ನಾಯಕ ಶರದ್ ಪವಾರ್ ಮಾರ್ಗರೆಟ್ ಅವರ ಹೆಸರು ಪ್ರಕಟಿಸಿದರು. ಸಭೆಗೆ ಹಾಜರಾಗಿದ್ದ 17 ಪಕ್ಷಗಳು ಮಾರ್ಗರೆಟ್ ಆಳ್ವಾ ಅವರ ಉಮೇದುವಾರಿಕೆಗೆ ಒಮ್ಮತದ ಅಭಿಪ್ರಾಯ ಸೂಚಿಸಿದವು ಎಂದು ಶರದ್ ಪವಾರ್ ತಿಳಿಸಿದ್ದಾರೆ.
Vice President Election 2022 | ಜನತಾ ಪರಿವಾರದಿಂದ ಬಂದ ನಾಯಕ ಬಿಜೆಪಿ ಉಪರಾಷ್ಟ್ರಪತಿ ಅಭ್ಯರ್ಥಿ!