ಬೆಂಗಳೂರು: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat ) ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಆಘಾತಕಾರಿ ಎದುರಿಸಿದ ಅನರ್ಹತೆಯ ಕುರಿತ ವ್ಯಾಜ್ಯದ ತೀರ್ಪನ್ನು ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ಮತ್ತಷ್ಟು ಮುಂದೂಡಿಕೆ ಮಾಡಿದೆ. ಕ್ರೀಡಾ ನ್ಯಾಯಾಲಯವು ಈ ವಿಷಯದ ಬಗ್ಗೆ ವಿಸ್ತರಣೆಯನ್ನು ಕೇಳಿರುವುದು ಇದು ಮೂರನೇ ಬಾರಿ. ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ನ ಫೈನಲ್ಗೆ ಮೊದಲು ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿದ್ದರು. ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಜಂಟಿ ಬೆಳ್ಳಿ ಪದಕವನ್ನು ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ಭಾರತೀಯ ಕ್ರೀಡಾಭಿಮಾನಿಗಳು ತೀರ್ಪಿಗಾಗಿ ಮತ್ತಷ್ಟು ಕಾಯುವಂತಾಗಿದೆ.
CAS extends time limit to give verdict on Vinesh Phogat case to 6pm Paris time August 16. @sportstarweb pic.twitter.com/hUYQTvhYYZ
— jonathan selvaraj (@jon_selvaraj) August 13, 2024
ಫೋಗಟ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ನಡುವಿನ ಪ್ರಕರಣದ ತೀರ್ಪನ್ನು ಮತ್ತಷ್ಟು ವಿಳಂಬಗೊಳಿಸುವುದಾಗಿ ನ್ಯಾಯಾಲಯ ಮಂಗಳವಾರ ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಕಟಿಸಿದೆ.
ವಿನೇಶ್ ಫೋಗಟ್ ಅವರ ಮನವಿ ಏನು?
ಐಒಸಿಯ ಅನರ್ಹತೆಯನ್ನು ರದ್ದುಗೊಳಿಸುವಂತೆ ಮತ್ತು ಫೈನಲ್ನಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ವಿನೇಶ್ ಆರಂಭದಲ್ಲಿ ಸಿಎಎಸ್ನ ತಾತ್ಕಾಲಿಕ ಪೀಠವನ್ನು ಕೋರಿದ್ದರು. ಸಿಎಎಸ್ನ ತಾತ್ಕಾಲಿಕ ಪೀಠವು ತನ್ನ ತೀರ್ಪನ್ನು ತ್ವರಿತವಾಗಿ ನೀಡಲು ಸಾಧ್ಯವಾಗಲಿಲ್ಲ. ಫೈನಲ್ ನಿಗದಿಯಾಗಿದ್ದ ಗುರುವಾರ ಸಂಜೆಗೆ ಮೊದಲು ವಾದಗಳನ್ನು ಆಲಿಸಲು ಅದಕ್ಕೆ ಸಾಧ್ಯವಾಗಿರಲಿಲ್ಲ. ನಂತರ ವಿನೇಶ್ ತನ್ನ ಮನವಿಯಲ್ಲಿ ಅನರ್ಹತೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಕೋಡಿದ್ದರು. ಆದಾಗ್ಯೂ, ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಮುಖ್ಯಸ್ಥ ನೆನಾಡ್ ಲಾಲೋವಿಕ್ ಅವರು ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಿನೇಶ್ ಅವರ ಬಗ್ಗೆ ಸಹಾನುಭೂತಿ ಇದೆ. ಆದರೆ ಭಾರತೀಯ ಕುಸ್ತಿಪಟುವನ್ನು ಅನರ್ಹಗೊಳಿಸುವ ಮೊದಲು ನಿಯಮಗಳನ್ನು ಪಾಲಿಸಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Natasa Stankovic : ‘ಹೊಸ ಹೆಸರನ್ನು ಪಡೆಯುತ್ತಿದ್ದೇನೆ’; ಕುತೂಹಲ ಮೂಡಿಸಿದ ನತಾಶಾ ಸ್ಟಾಂಕೊವಿಕ್ ಹೊಸ ಪೋಸ್ಟ್
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮುಖ್ಯಸ್ಥೆ ಪಿ.ಟಿ.ಉಷಾ ಅವರು ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ದಿನ್ಶ್ವಾ ಪರ್ಡಿವಾಲಾ ಅವರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಎದುರಾದ ಟೀಕೆಗಳಿಗೆ ಉತ್ತರ ಕೊಟ್ಟರು. ತೂಕ ನಿಯಂತರಣ ಕ್ರೀಡಾಪಟು ಮತ್ತು ಅವರ ತರಬೇತುದಾರರ ಜವಾಬ್ದಾರಿಯಾಗಿದೆ ಎಂದು ಉಷಾ ಹೇಳಿದ್ದರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ದಿನಗಳ ತೂಕದ ನ್ಯಾಯೋಚಿತತೆಯ ಬಗ್ಗೆ ಪ್ರಶ್ನೆಗಳು ಈ ವೇಳೆ ಎದ್ದಿತು. ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ತನ್ನ ನಿಯಮಗಳನ್ನು ಮರುಪರಿಶೀಲಿಸಬೇಕು ಮತ್ತು ಎರಡನೇ ದಿನದಂದು ತೂಕಕ್ಕೆ 1 ಕೆ.ಜಿ ತೂಕ ಹೆಚ್ಚುವರಿ ಅವಕಾಶ ನೀಡಬೇಕು ಎಂದು ಅಮೆರಿಕದ ಕುಸ್ತಿ ಶ್ರೇಷ್ಠ ಜೋರ್ಡಾನ್ ಬರ್ರೋಸ್ ಸೇರಿದಂತೆ ಹಲವರುಒತ್ತಾಯಿಸಿದ್ದರಯ. ನೀಡುವ ರಿಪೆಚೇಜ್ ಸ್ವರೂಪವನ್ನು ಹೊಂದುವ ಬದಲು ಇಬ್ಬರೂ ಸೆಮಿಫೈನಲ್ ಸ್ಪರ್ಧಿಗಳಿಗೆ ಒಲಿಂಪಿಕ್ ಪದಕಗಳನ್ನು ನೀಡಬೇಕು ಎಂದು ಅವರು ಹೇಳಿದ್ದರು.