Site icon Vistara News

IPL 2024 : ಮೈದಾನದಲ್ಲೇ ಜಗಳವಾಡಿದ ಕೊಹ್ಲಿ, ಜಡೇಜಾ; ಇಲ್ಲಿದೆ ವಿಡಿಯೊ

Ravindra Jadeja

ನವದೆಹಲಿ: ಐಪಿಎಲ್ 2024ರ (IPL 2024) ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಆರ್​ಸಿಬಿ (Royal Challengers Bangalore) ತಂಡವನ್ನು ಆರು ವಿಕೆಟ್​​ಗಳಿಂದ ಸೋಲಿಸಿದೆ. ಈ ಪಂದ್ಯದ ಹಲವಾರು ಕ್ಷಣಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಅದರಲ್ಲೊಂದು ವಿರಾಟ್​ ಕೊಹ್ಲಿ (Virat Kohli) ಹಾಗೂ ರವೀಂದ್ರ ಜಡೇಜಾ (Ravindra Jadeja) ನಡುವಿನ ಮಾತಿನ ಸಮರ. ಇದು ಪಂದ್ಯದ ನಂತರದ ದಿನವೂ ಹೆಚ್ಚು ವೈರಲ್ ಆಗುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್​​ನ 11 ನೇ ಓವರ್​ನಲ್ಲಿ ಈ ಪ್ರಸಂಗ ನಡೆದಿದೆ. ಜಡೇಜಾ ತಮ್ಮ 3 ನೇ ಓವರ್​​ನಲ್ಲಿ ಈ ಪ್ರಸಂಗ ನಡೆದಿದೆ. ಜಡೇಜಾ ತಮ್ಮ ಓವರ್​ಗಳನ್ನು ಅತ್ಯಂತ ವೇಗವಾಗಿ ಮುಗಿಸುತ್ತಾರೆ. ಅಂತೆಯೇ ಅವರು ಈ ಬಾರಿಯೂ ಅತ್ಯಂತ ವೇಗದಲ್ಲಿ ಓವರ್​ಮುಗಿಸಲು ಮುಂದಾದರು. ಈ ವೇಳೆ ವಿರಾಟ್ ಕೊಹ್ಲಿ ಜಡೇಜಾ ಕಾಲೆಳೆದರು. ಸ್ವಲ್ಪ ನಿಧಾನವಾಗಿ ಬೌಲಿಂಗ್ ಮಾಡು ಎಂಬುದಾಗಿ ಹೇಳಿದರು.

ಕ್ಯಾಮರೂನ್ ಗ್ರೀನ್ ಉಸಿರಾಡಲು ಬಿಡು ಸ್ವಲ್ಪ ಹೊತ್ತು ” ಎಂದು ಕೊಹ್ಲಿ ಹೇಳುವ ಮೂಲಕ ಜಡೇಜಾ ಅವರನ್ನು ಕೆಣಕಿದರು. ಹಳೆಯ ಸ್ನೇಹಿತರ ನಡುವಿನ ಸ್ನೇಹವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದರು. ವೀಡಿಯೊ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : MS Dhoni : ಧೋನಿ ನಾಯಕನಾಗಲು ನಾನೇ ಕಾರಣ; ಗುಟ್ಟು ಬಹಿರಂಗ ಮಾಡಿದ ಸಚಿನ್​

ವಿರಾಟ್ ಕೇವಲ 21 (20) ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ, ಅನುಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ ಅವರ 95 ರನ್​ಗಳ ಜೊತೆಯಾಟದ ನೆರವಿನಿಂದ 173 ರನ್​ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಸಿಎಸ್​ಕೆ ಕೇವಲ ನಾಲ್ಕು ವಿಕೆಟ್​ಗಳ ಕಳೆದುಕೊಂಡು ಎಂಟು ಎಸೆತಗಳು ಬಾಕಿ ಇರುವಾಗಲೇ ಮೊತ್ತವನ್ನು ಬೆನ್ನಟ್ಟಿತು. ನಾಲ್ಕು ವಿಕೆಟ್ ಕಬಳಿಸಿದ ಮುಸ್ತಾಫಿಜುರ್ ರೆಹಮಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Exit mobile version