Site icon Vistara News

Virat kohli : ವಿಶ್ವಕಪ್ ಫೈನಲ್​ನಲ್ಲಿ ಔಟ್ ಆದ ರೀತಿಯನ್ನುಗೌತಮ್ ಗಂಭೀರ್​ಗೆ ವಿವರಿಸಿದ ಕೊಹ್ಲಿ, ಇಲ್ಲಿದೆ ವಿಡಿಯೊ

Virat kohli

ಬೆಂಗಳೂರು: ವಿಶ್ವಕಪ್ 2023ರ ಫೈನಲ್​ ಪಂದ್ಯ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್​ ಅಭಿಮಾನಿ ಮರೆಯಲು ಬಯಸುವ ಕೆಟ್ಟ ಕನಸು. ನವೆಂಬರ್ 19, 2023 ರಂದು ಕಿಕ್ಕಿರಿದು ತುಂಬಿದ್ದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಬಳಗ ಭಾರತ ತಂಡವನ್ನು ಸೋಲಿಸಿತ್ತು. ಭಾರತೀಯ ಇನ್ನಿಂಗ್ಸ್ ಬಗ್ಗೆ ಮಾತನಾಡುವಾಗ, ವಿರಾಟ್ ಕೊಹ್ಲಿ (Virat kohli) ಅವರ ಔಟ್ ಆಗಿರುವುದು ಪಂದ್ಯದ ತಿರುವು ಎನ್ನಲಾಗುತ್ತದೆ. ಭಾರತದ ಸ್ಟಾರ್ ಬ್ಯಾಟ್ಸ್ಮನ್ ಉತ್ತಮ ಫಾರ್ಮ್​ನಲ್ಲಿದ್ದರು. ಅವರನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಔಟ್ ಮಾಡಿದ್ದರು.

ಕಮಿನ್ಸ್ ಸ್ಟಂಪ್ ಗಳ ಮೇಲೆ ಎಸೆದ ಎಸೆತವನ್ನು ಕೊಹ್ಲಿ ಡಿಫೆಂಡ್ ಮಾಡಲು ಯತ್ನಿಸಿದ್ದರು. ಅದು ಬ್ಯಾಟ್​​ಗೆ ತಗುಲಿ ಕಾಲುಗಳ ನಡುವೆ ಪಿಚ್​ ಮೇಲೆ ಪುಟಿದು ವಿಕೆಟ್​ಗೆ ಬಿದದಿತ್ತು. ಅವರು ಔಟಾದ ತಕ್ಷಣ ಭಾರತದ ಅಭಿಮಾನಿಗಳು ನಿರಾಸೆಗೆ ಒಳಗಾಗಿದ್ದರು. ಈ ಕ್ಷಣವನ್ನು ಏಪ್ರಿಲ್ 21 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದ ವೇಳೆ ಆರ್​ಸಿಬಿ ಆಟಗಾರ ಕೊಹ್ಲಿ ಕೆಕೆಆರ್​ ಮೆಂಟರ್​​ ಗೌತಮ್ ಗಂಭೀರ್ ವಿವರಿಸಿ ಹೇಳುವ ಘಟನೆ ನಡೆದಿದೆ.

ಟ್ರೋಫಿ ರೇಸ್​ನಲ್ಲಿ ಹಿಂದಕ್ಕೆ ಬಿದ್ದ ಆರ್​ಸಿಬಿ


ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಬಗ್ಗೆ ಮಾತನಾಡುವುದಾದರೆ, ಆರ್​ಸಿಬಿ ಪ್ರಸ್ತುತ ಪಂದ್ಯಾವಳಿಯಲ್ಲಿ ತನ್ನ ನೀರಸ ಪ್ರದರ್ಶನ ಮುಂದುವರಿಸಿದೆ. ಆಡಿದ ಏಳು ಪಂದ್ಯಗಳಲ್ಲಿ ಅವರು ಗಳಿಸಿರುವುದು ಕೇವಲ ಒಂದು ಗೆಲುವು. ಅವರ ಪ್ಲೇಆಫ್ ಅವಕಾಶಗಳು ಮಂಕಾಗಿ ಹೋಗಿವೆ. ನಾಕೌಟ್ ಗೆ ಪ್ರವೇಶಿಸಲು ಇನ್ನೂ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಮತ್ತೊಂದಡೆ ಕೊಹ್ಲಿ ಉತ್ತಮ ಸಂಪರ್ಕದಲ್ಲಿದ್ದು ಆರೆಂಜ್ ಕ್ಯಾಪ್ ಹೊಂದಿರುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ನಂಬಿಕೆ ಖಂಡಿತವಾಗಿಯೂ ಇದೆ. ನಂಬಿಕೆ ಇಲ್ಲದಿದ್ದರೆ, ಐಪಿಎಲ್​ನಂಥ ಪಂದ್ಯಾವಳಿಯಲ್ಲಿ ಆಡುವುದರಲ್ಲಿ ಅರ್ಥವಿಲ್ಲ. ಪ್ರತಿ ವರ್ಷ, ಈ ಹಂತದಲ್ಲಿ ತಂಡಗಳು ಗೆಲ್ಲಲು ಪ್ರಯತ್ನಿಸುತ್ತಿವೆ. ಉತ್ತಮ ಪಂದ್ಯಾವಳಿಯನ್ನು ಹೊಂದಿಲ್ಲ. ಆದರೆ ಅವರು ಪಂದ್ಯಗಳನ್ನು ಎತ್ತಿಕೊಂಡು ಗೆದ್ದ ಅನೇಕ ಉದಾಹರಣೆಗಳಿವೆ. ನಾವು ಏನಾದರೂ ವಿಶೇಷವಾದದ್ದನ್ನು ಮಾಡಲು ಸಾಧ್ಯವಾದಕ್ಕೆ ಕೆಲವು ಪಂದ್ಯಗಳಿವೆ. ಅಲ್ಲಿ ನಾವು ಆವೇಗವನ್ನು ಪಡೆಯಬಹುದು ಮತ್ತು ಅದನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು ಎಂದು ನಾವು ನಂಬುತ್ತೇವೆ ಎಂದು ದಿನೇಶ್ ಕಾರ್ತಿಕ್ ಆರ್ಸಿಬಿಯ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Exit mobile version