Site icon Vistara News

Virat Kohli : ಐಸಿಸಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ವಿಶೇಷ ಮೈಲುಗಲ್ಲು ಸ್ಥಾಪಿಸಿದ ವಿರಾಟ್​ ಕೊಹ್ಲಿ

Virat kohli

ಬೆಂಗಳೂರು: ವೆಸ್ಟ್​ ಇಂಡೀಸ್​ನ ಆಂಟಿಗುವಾದಲ್ಲಿ ನಡೆದ ಟಿ20 ವಿಶ್ವ ಕಪ್​ನ ಸೂಪರ್ 8 ಪಂದ್ಯದಲ್ಲಿ ಭಾರತ ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC Tournament) ಟೂರ್ನಮೆಂಟ್ ಗಳ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 36 ರನ್ ಬಾರಿಸಿ ಔಟಾಗುವ ಮೊದಲು ಈ ವಿಶೇಷ ಸಾಧನೆ ಮಾಡಿದ್ದಾರೆ. ಅದೇನೆಂದರೆ ಅವರು ಐಸಿಸಿ ಆಯೋಜಿಸುವ ಸೀಮಿತ ಓವರ್​ಗಳ (ಏಕದಿನ ಹಾಗೂ ಟಿ20) ಟೂರ್ನಿಗಳಲ್ಲಿ 3500 ರನ್​ಗಳನ್ನು ಬಾರಿಸಿದ ವಿಶೇಷ ಮೈಲುಗಲ್ಲು ದಾಟಿದ್ದಾರೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿರುವುದು ಇನ್ನೂ ವಿಶೇಷ.

ಹಾಲಿ ಟಿ20 ವಿಶ್ವಕಪ್ 2024ರಲ್ಲಿ ಫಾರ್ಮ್​ ಕಂಡುಕೊಳ್ಳದ ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧ ಸಕಾರಾತ್ಮಕ ಇನ್ನಿಂಗ್ಸ್ ಆಡಿದ್ದಾರೆ. ಸೂಪರ್ 8 ಹಂತದ ಎರಡನೇ ಪಂದ್ಯದ ತಮ್ಮ ಇನ್ನಿಂಗ್ಸ್​ನಲ್ಲಿ ಕೆಲವು ಅದ್ಭುತ ಶಾಟ್​ಗಳನ್ನು ಹೊಡೆದು ರಂಜಿಸಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ವಿರಾಟ್​ ಬ್ಯಾಟ್ ನಿಂದ ಮಿಂಚಿದ್ದರು. ರೋಹಿತ್ ಶರ್ಮಾ ಜತೆ 39 ರನ್ ಮತ್ತು ರಿಷಭ್ ಪಂತ್ (36) ಅವರೊಂದಿಗೆ 32 ರನ್ ಗಳ ಪಾಲುದಾರಿಕೆ ನೀಡಿದ್ದಾರೆ. ಇದು ಭಾರತಕ್ಕೆಬೃಹತ್ ಮೊತ್ತ ಪೇರಿಸಲು ನೆರವಾಯಿತು.

ಐಸಿಸಿ ಟೂರ್ನಿಯಲ್ಲಿ ಅದ್ಭುತ ಆಟಗಾರ

ಕಳೆದ ಹಲವು ವರ್ಷಗಳಿಂದ ವಿರಾಟ್ ಕೊಹ್ಲಿ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಬೆನ್ನೆಲುಬಾಗಿದ್ದಾರೆ. ಅಂತೆಯೇ ಬಾಂಗ್ಲಾ ವಿರುದ್ಧ 28 ಎಸೆತಗಳಲ್ಲಿ 37 ರನ್ ಗಳಿಸಿದರು. ಅವರು 132 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅವರ ಇನ್ನಿಂಗ್ಸ್​ನಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್​ಗಳು ಸೇರಿಕೊಂಡಿವೆ. ಅಂತೆಯೇ ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕದ ನೆರವಿನಿಂದ ಭಾರತ 196 ರನ್​ಗಳ ಬೃಹತ್ ಮೊತ್ತ ಪೇರಿಸಿ, ಬಾಂಗ್ಲಾವನ್ನು 50 ರನ್​ಗಳಿಂದ ಸೋಲಿಸಿದೆ.

ಐಸಿಸಿ ಸೀಮಿತ ಓವರ್ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ರನ್ ದಾಖಲೆ

ಐಸಿಸಿ ಸೀಮಿತ ಓವರ್​ಗಳ ಕ್ರಿಕೆಟ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಟ್ಟು 3500 ರನ್ ಪೂರೈಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ 2024ರಲ್ಲಿ ರಲ್ಲಿ ಭಾರತವು ಇನ್ನೂ ಕೆಲವು ಪಂದ್ಯಗಳನ್ನು ಆಡಲಿದೆ. ಹೀಗಾಗಿ ಅವರ ರನ್​ ಗಳಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಅಂದ ಹಾಗೆ ಐಸಿಸಿ ವೈಟ್-ಬಾಲ್ ಪಂದ್ಯಾವಳಿಗಳ ಇತಿಹಾಸದಲ್ಲಿ ನಾಯಕ ರೋಹಿತ್ ಶರ್ಮಾ 3107 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: T20 World Cup 2024 : ಬಾಂಗ್ಲಾದೇಶ ವಿರುದ್ಧ ಭಾರತಕ್ಕೆಭರ್ಜರಿ 50 ರನ್​ಗಳ ಭರ್ಜರಿ ಗೆಲುವು

ಕ್ರಿಸ್ ಗೇಲ್ 2942 ರನ್ ಗಳಿಸಿ ಮೂರನೇ ಸ್ಥಾನ ಪಡೆದರೆ, ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಕ್ರಮವಾಗಿ 2876 ಮತ್ತು 2858 ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ (2719) ಮತ್ತು ಡೇವಿಡ್ ವಾರ್ನರ್ (2590) ಐಸಿಸಿ ಟೂರ್ನಿಗಳಲ್ಲಿ (ವೈಟ್ಬಾ ಲ್) ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಪಟ್ಟಿ ಇಲ್ಲಿದೆ

Exit mobile version