ಬೆಂಗಳೂರು: ಐಪಿಎಲ್ 2024ರ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿ (RCB) ಸೋತ ಬಳಿಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಕೆಕೆಆರ್ ಯುವ ಆಟಗಾರರಿಗೆ ಕ್ರಿಕೆಟ್ ಪಾಠ ಹೇಳಿದ ಕ್ಷಣ ವೈರಲ್ ಆಗಿದೆ. ಏಪ್ರಿಲ್ 21ರಂದು ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ವಿವಾದಾತ್ಮಕವಾಗಿ ಔಟಾದರು. ಆದಾಗ್ಯೂ ಕೊಹ್ಲಿ ಯುವ ಆಟಗಾರರಿಗೆ ಕ್ರಿಕೆಟ್ ಪಾಠ ಹೇಳುವಲ್ಲಿ ಹಿಂಜರಿದಿಲ್ಲ.
ಪಂದ್ಯಾವಳಿಯ 36 ನೇ ಪಂದ್ಯದಲ್ಲಿ ತಮ್ಮ ತಂಡದ ಪರವಾಗಿ ಇನ್ನಿಂಗ್ಸ್ ಪ್ರಾರಂಭಿಸಿದ ಕೊಹ್ಲಿ ಹರ್ಷಿತ್ ರಾಣಾ ಅವರ ಹೆಚ್ಚಿನ ಫುಲ್ ಟಾಸ್ ಎಸೆತಕ್ಕೆ ಕ್ಯಾಚ್ ನೀದಿ ಔಟಾದರು. ಅದು ನೊಬಾಲ್ ಎಂದು ಕೊಹ್ಲಿ ಮನವಿ ಮಾಡಿದರು. ಆನ್-ಫೀಲ್ಡ್ ಅಂಪೈರ್ನೊಂದಿಗೆ ಚರ್ಚೆ ನಡೆಸಿದರು. ಟೆಲಿವಿಷನ್ ರಿಪ್ಲೇಗಳು ಮತ್ತು ಹಾಕ್-ಐ ತಂತ್ರಜ್ಞಾನವು ಅಂತಿಮವಾಗಿ ಅದು ಸರಿಯಾದ ಎಸೆತ ಎಂಬುದಾಗಿ ಹೇಳಿತು. ಹೀಗಾಗಿ ಕೊಹ್ಲಿ ಔಟ್ ಎಂಬುದು ಸಾಬೀತಾಯಿತು.
ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿ ತಂಡ ಕೆಕೆಆರ್ 222 ರನ್ಗಳ ಬೃಹತ್ ಮೊತ್ತ ಬೆನ್ನಟ್ಟುವಲ್ಲಿ ಒಂದು ರನ್ ಹಿಂದಕ್ಕೆ ಬಿತ್ತು. ಈ ಮೂಲಕ ಆರ್ಸಿಬಿ ಋತುವಿನ 7 ನೇ ಸೋಲಿಗೆ ಮತ್ತು ಸತತ ಆರನೇ ಸೋಲಿಗೆ ಒಳಗಾಯಿತು. ಆದರೆ, ಪಂದ್ಯ ಮುಗಿದ ಬಳಿಕ ಕೊಹ್ಲಿ ತಮ್ಮ ಅನುಭವಗಳನ್ನು ಕಿರಿಯ ಆಟಗಾರರೊಂದಿಗೆ ಹಂಚಿಕೊಳ್ಳುವುದಕ್ಕೆ ಹಿಂಜರಿಯಲಿಲ್ಲ. ಹಲವಾರು ಪ್ರತಿಭಾವಂತ ಆಟಗಾರರಿಗೆಕೆಲವು ಅಮೂಲ್ಯವಾದ ಬ್ಯಾಟಿಂಗ್ ಸಲಹೆಗಳನ್ನು ನೀಡಿದರು.
ಯುವ ಆಟಗಾರರನ್ನು ಸೆಳೆದ ವಿರಾಟ್ ಕೊಹ್ಲಿ
ಈಡನ್ ಗಾರ್ಡನ್ಸ್ನಲ್ಲಿ ಆರ್ಸಿಬಿ ಒಂ ದು ರನ್ ಸೋಲಿಗೆ ಶರಣಾದ ನಂತರ ವಿರಾಟ್ ಕೊಹ್ಲಿ ಹಲವಾರು ಕೆಕೆಆರ್ ಯುವ ಆಟಗಾರರ ಆಕರ್ಷಣೆಗೆ ಒಳಗಾದರು. ಕ್ರಿಕೆಟಿಗ ಹಲವಾರು ಉತ್ಸಾಹಿ ಕೇಳುಗರಿಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡುತ್ತಿರುವುದು ಕಂಡುಬಂತು.
ಕೊಹ್ಲಿಗೆ ಮತ್ತೆ ಮೋಸ, ನೋ ಬಾಲ್ಗೆ ಔಟ್ ಕೊಟ್ಟರೇ ಮೂರನೇ ಅಂಪೈರ್?
ಕೊಹ್ಲಿಗೆ ಮತ್ತೆ ಮೋಸ, ನೋ ಬಾಲ್ಗೆ ಔಟ್ ಕೊಟ್ಟರೇ ಮೂರನೇ ಅಂಪೈರ್?
ಕೋಲ್ಕತ್ತಾ : ಈಡನ್ ಗಾರ್ಡನ್ಸ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. 2024ರ ಋತುವಿನಲ್ಲಿ ಎರಡನೇ ಗೆಲುವಿಗಾಗಿ ಪ್ರವಾಸಿ ತಂಡ 223 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದೆ. ಈ ಪಂದ್ಯದಲ್ಲಿ, ಎರಡನೇ ಓವರ್ನಲ್ಲಿ ಆರ್ಸಿಬಿ ಚೇಸಿಂಗ್ ಸಮಯದಲ್ಲಿ ನಾಟಕೀಯ ಕ್ಷಣವೊಂದು ಅನಾವರಣಗೊಂಡಿತು.
ವಿರಾಟ್ ಕೊಹ್ಲಿಯನ್ನು ಔಟ್ ಮಾಡಲಾಗಿದ್ದು, ಇದು ವಿವಾದಾತ್ಮಕ ಕ್ಷಣ ಕಾರಣವಾಯಿತು. ಮೈದಾನದಿಂದ ಹೊರಡುವ ಮೊದಲು ಕೊಹ್ಲಿ ಅಂಪೈರ್ ವಿರುದ್ಧ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು. 7 ಎಸೆತಕ್ಕೆ 18 ರನ್ ಬಾರಿಸಿ ಬ್ಯಾಟಿಂಗ ಮಾಡುತ್ತಿದ್ದ ಕೊಹ್ಲಿಗೆ ನಿತೀಶ್ ರಾಣಾ ಎಸೆತ ದೊಡ್ಡ ಫುಲ್ಟಾಸ್ ಎಸೆತವನ್ನು ಹೊಡೆಲು ಮುಂದಾದರು. ಮಧ್ಯದ ಬ್ಯಾಟ್ಗೆ ತಗುಲಿ ಅದು ರಿಟರ್ನ್ ಕ್ಯಾಚ್ ಆಗಿ ಪರಿವರ್ತನೆಗೊಂಡಿತು. ಅದು ಎಸೆತ ಎತ್ತರದಲ್ಲಿದ್ದ ಕಾರಣ ಫೀಲ್ಡಿಂಗ್ ಅಂಪೈರ್ಗಳು ನೊ ಬಾಲ್ ಪರಿಶೀಲನೆಗೆ ಮುಂದಾದರು.
ಇದನ್ನೂ ಓದಿ: IPL 2024 : ಕೆಕೆಆರ್ ವಿರುದ್ಧ ಆರ್ಸಿಬಿ ವೀರೋಚಿತ 1 ರನ್ ಸೋಲು; ಫಾಫ್ ಬಳಗಕ್ಕೆ ಏಳನೇ ಮುಖಭಂಗ
ಕೊಹ್ಲಿಯ ವಿಮರ್ಶೆಯ ಹೊರತಾಗಿಯೂ ಅವರು ಕ್ರೀಸ್ಗಿಂತ ಹೊರಗೆ ಬ್ಯಾಟ್ ಮಾಡುತ್ತಿರುವುದು ಕಾಣಿಸಿಕೊಂಡಿತು. ಚೆಂಡಿನ ಪಥವು ಸೊಂಟದ ಕೆಳಗೆ ಇದೆ ಎಂದು ದೃಢಪಡಿಸಿತು. ಹೀಗಾಗಿ ಅಂಪೈರ್ ಔಟ್ ಕೊಟ್ಟರು. ಆದರೆ, ಕೊಹ್ಲಿಗೆ ಅದು ಸಮಾಧಾನವಾಗಿಲ್ಲ. ಅವರು ಅಲ್ಲಿಯೇ ಅಂಪೈರ್ಗಳ ಜತೆ ಜಗಳವಾಡಿ ಹೊರಗೆ ನಡೆದರು. ಅಲ್ಲದೆ, ಡಗ್ಔಟ್ಗೆ ನಡೆದ ಬಳಿಕೂ ಕೊಹ್ಲಿ ಅಸಮಾಧಾನಗೊಂಡಿದ್ದರು.