Site icon Vistara News

Virat Kohli : ಅಂಪೈರ್​ ಜತೆ ಜಗಳವಾಡಿದ ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ.50 ದಂಡ

Virat kohli

ಬೆಂಗಳೂರು: ಏಪ್ರಿಲ್​ 21ರಂದು ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಒಂದು ರನ್ ಸೋಲನುಭವಿಸಿದೆ. ಈ ಪಂದ್ಯದ ನಡುವೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ (Virat Kohli) ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿದೆ. ಬಿಸಿಸಿಐ ಈ ವಿಚಾರದಲ್ಲಿ ಸ್ಟಾರ್ ಬ್ಯಾಟರ್ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡಿದೆ. ಅವರ ವರ್ತನೆಗಳಿಗೆ ರೆಫರಿಗಳ ಮೂಲಕ ಪಾಠ ಹೇಳಿಸಲಾಗಿದೆ

ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನ ನಡೆದ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ರ 36 ನೇ ಪಂದ್ಯದ ಸಮಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್​ ವಿರಾಟ್ ಕೊಹ್ಲಿಗೆ ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.8 ರ ಅಡಿಯಲ್ಲಿ ಕೊಹ್ಲಿ ಲೆವೆಲ್ 1 ಅಪರಾಧ ಮಾಡಿದ್ದಾರೆ. ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫರಿಯ ಅನುಮತಿ ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ ಮ್ಯಾಚ್ ರೆಫರಿ ನಿರ್ಧಾರವು ಅಂತಿಮ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಾಲ್ ಟ್ರ್ಯಾಕಿಂಗ್ ತಂತ್ರಜ್ಞಾನಕ್ಕೆ ಅನ್ವಯಿಸಲಾದ ಹೊಸ ವಿಧಾನದ ಪ್ರಕಾರ ಪಿಚ್​ನಿಂದ ಹೊರಗೆ ನಿಂತು ಬ್ಯಾಟ್​ ಮಾಡುವಾಗ ಸೊಂಟದ ಮೇಲಿನಿಂದ ಬರುವ ಬೀಮರ್ ಎಸೆತ ನೊಬಾಲ್ ಆಗಿರುವುದಿಲ್ಲ. ಆದರೆ, ವಿರಾಟ್ ಕೊಹ್ಲಿ ಹರ್ಷಿತ್​ ರಾಣಾ ಎಸೆತಕ್ಕೆ ರಿಟರ್ನ್ ಕ್ಯಾಚ್ ನೀಡಿ ಔಟಾಗಿದ್ದರು. ಅವರು ಡಿಆರ್​ಎಸ್​ ಪರಿಶೀಲನೆಯಲ್ಲೂ ವಿಫಲಗೊಂಡರು. ಈ ವೇಳೆ ಅವರು ಅಂಪೈರ್​ಗಳ ವಿರುದ್ಧ ಕಿಡಿಕಾರಿದ್ದರು. ಇದು ನಿಯಮಗಳ ಉಲ್ಲಂಘನೆಯಾಗಿದೆ.

ಇದನ್ನೂ ಓದಿ: IPL 2024 : ​ ಅಂಪೈರ್​ಗಳ ಮೋಸಕ್ಕೆ ಬಲಿಯಾಯ್ತೇ ಆರ್​ಸಿಬಿ? ಇಲ್ಲಿದೆ ವಿಡಿಯೊ ಸಾಕ್ಷಿ

ಏನಾಗಿತ್ತು?

ಹರ್ಷಿತ್ ರಾಣಾ ಅವರ ಹೈ ಫುಲ್ ಟಾಸ್ ಎಸೆತವನ್ನು ಹೊಡೆಯಲು ಕೊಹ್ಲಿ ಕ್ರೀಸ್​ನಿಂದ ಮುಂದೆ ಬಂದಿದ್ದರು. ಎಸೆತವನ್ನು ಪರಿಶೀಲಿಸಲು ಅಂಪೈರ್ ಪರಿಶೀಲನೆಗೆ ಸಂಕೇತ ನೀಡಿದ್ದರು. ಎಸೆತ ಯೋಜಿತ ಎತ್ತರವು ಪಿಚ್​ ಒಳಗೆ ಆಗಿದ್ದರೆ ಕೊಹ್ಲಿಯ ಸೊಂಟಕ್ಕಿಂತ ಕಡಿಮೆ ಇರುವುದು ಕಂಡುಬಂದಿತು. ಹೀಗಾಗಿ ಎಸೆತವನ್ನು ನ್ಯಾಯಬದ್ಧ ಎಂದು ಘೋಷಿಸಿದರು. ಆದರೆ, ಅಕ್ರಮಣಕಾರಿ ಕೊಹ್ಲಿ ಇದಕ್ಕೆ ಸಮಾಧಾನ ಪಟ್ಟುಕೊಳ್ಳದೇ ಗಲಾಟೆ ಮಾಡಿದ್ದರು. ಡಗ್ಔಟ್​ಗೆ ಹೋದ ಬಳಿಕವೂ ಅವರು ಗಲಾಟೆ ಮಾಡಿದ್ದರು. ಅಲ್ಲದೆ, ಪಂದ್ಯ ಮುಗಿದ ಬಳಿಕವೂ ಅಂಪೈರ್​ಗಳಿದ ವಿವರಣೆ ಕೇಳಿದದರು.

Exit mobile version