Site icon Vistara News

Gambhir vs Kohli : ಹಗೆತನ ಮರೆತು ‘ಹಗ್’ ಮಾಡಿದ ಕೊಹ್ಲಿ- ಗಂಭೀರ್​, ಇಲ್ಲಿದೆ ವಿಡಿಯೊ

Gambhir vs Kohli

ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ (Gambhir vs Kohli) ನಡುವಿನ ಜಿದ್ದಾಜಿದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಯ ವಿಷಯ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಇದು ಪುನರಾವರ್ತನೆಗೊಳ್ಳಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಆದದ್ದೇ ಬೇರೆ. ಅವರಿಬ್ಬರೂ ‘ನೀನೆಂದೂ ನನ್ನವನು’ ಎಂಬ ಹಾಗೆ ಪರಸ್ಪರ ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದರು. ಈ ಪ್ರಸಂಗದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಯಿತು. ನೆಟ್ಟಿಗರು ಈ ದೃಶ್ಯದ ಬಗ್ಗೆ ತಮ್ಮ ಭಾನೆಗಳನ್ನು ನಿಯಂತ್ರಿಸಲಾಗದೇ ನಾನಾ ಬಗೆಯಲ್ಲಿ ಕಾಮೆಂಟ್ ಮಾಡಿದರು.

ಪಂದ್ಯದ 16 ನೇ ಓವರ್ ನಲ್ಲಿ ಟೈಮ್​ ಔಟ್ ವೇಳೆ ಈ ಆಹ್ಲಾದಕರ ಘಟನೆ ನಡೆಯಿತು. ಮೈದಾನಕ್ಕೆ ಬಂದಿದ್ದ ಕೋಚ್​ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿಯ ಹತ್ತಿರಕ್ಕೆ ಹೋಗಿ ಅರ್ಧಶತಕಕ್ಕಾಗಿ ಅವರನ್ನು ಅಭಿನಂದಿಸಿದರು. ವಿರಾಟ್ ಕೊಹ್ಲಿ ಕೂಡ ಚಂದದ ಅಪ್ಪುಗೆಯೊಂದಿಗೆ ಆತ್ಮೀಯವಾಗಿ ಪ್ರತಿಕ್ರಿಯಿಸಿದರು. ಇಬ್ಬರೂ ದಂತಕಥೆಗಳು ನಗುವಿನೊಂದಿಗೆ ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಂಡಿರುವುದು ವಿಡಿಯೊದಲ್ಲಿ ಕಂಡು ಬಂತು.

ಈ ಹಿಂದೆ ಐಪಿಎಲ್​ನ ಅನೇಕ ಋತುಗಳಲ್ಲಿ ಹಲವಾರು ಬಾರಿ ಮಾತಿನ ಚಕಮಕಿಯಲ್ಲಿ ಭಾಗಿಯಾಗುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್​ ಪರಸ್ಪರ ವೈರಿಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರು. ಅವರ ನಡುವಿನ ಪೈಪೋಟಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರಿಂದ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ಗಮನ ಸೆಳೆಯಿತು. ಟೀಮ್ ಇಂಡಿಯಾ ದಂತಕಥೆಗಳ ಸಕಾರಾತ್ಮಕ ಮನೋಭಾವದ ಬಗ್ಗೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದರು. ಈ ಮೂಲಕ ಅವರು ಜಿದ್ದು ಮರೆತು ರಾಜಿಯಾಗಿದ್ದಾರೆ ಎಂಬುದು ಖಾತರಿಯಾಯಿತು.

ಇದನ್ನೂ ಓದಿ: IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

ನವಿನ್ ಜತೆಗೂ ರಾಜಿ

ಐಪಿಎಲ್ 2023 ರ ಜಗಳವು ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ವಾಗ್ವಾದಕ್ಕೆ ಮೂಲ ಕಾರಣವಾಗಿದ್ದ ನವೀನ್ ಉಲ್ ಹಕ್ ಅವರನ್ನೂ ಕಳೆದ ಏಕದಿನ ವಿಶ್ವ ಕಪ್ ವೇಳೆ ತಬ್ಬಿಕೊಂಡಿದ್ದರು. ಈ ವಿನಿಮಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದೀಗ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಗಳವೂ ಮರೆತು ಹೋಗಿದೆ.

ಕೊಹ್ಲಿಗೆ ಆರೆಂಜ್ ಕ್ಯಾಪ್​


ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಅದ್ಭುತ 83 ರನ್ ಗಳಿಸಿದ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಕ್ಯಾಮರೂನ್ ಗ್ರೀನ್ ಮತ್ತು ದಿನೇಶ್ ಕಾರ್ತಿಕ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ವಿರಾಟ್ ಕೊಹ್ಲಿಗೆ ಉತ್ತಮ ಬೆಂಬಲ ನೀಡಿದ್ದರು. ಬೆಂಗಳೂರು ತಂಡ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ.

Exit mobile version