Site icon Vistara News

Virat kohli : ಕೊಹ್ಲಿಯನ್ನು ಮತ್ತೆ ಸ್ವಾರ್ಥಿ ಎಂದು ದೂರಿದ ಪಾಕಿಸ್ತಾನದ ಮೊಹಮ್ಮದ್ ಹಫೀಜ್​

Virat kohli

ನವದೆಹಲಿ: ಭಾರತ ತಂಡದ ಸ್ಟಾರ್ ಆಟಗಾರ ಹಾಗೂ ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು (Virat kohli) ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಸ್ವಾರ್ಥಿ ಎಂದು ಕರೆದಿದ್ದಾರೆ. ಅವರು ತಂಡದ ಬದಲಿಗೆ ಸ್ವಾರ್ಥಕ್ಕಾಗಿ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂಲಕ ಪಾಕ್​ನ ಮಾಜಿ ಬ್ಯಾಟರ್​ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಅಂದಹಾಗೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಉದ್ದೇಶವನ್ನು ಹಫೀಜ್ ಪ್ರಶ್ನಿಸುತ್ತಿರುವುದು ಇದೇ ಮೊದಲಲ್ಲ. 2023ರಲ್ಲಿ ಭಾರತದಲ್ಲಿ ನಡೆದ ಏಕ ದಿನ ವಿಶ್ವ ಕಪ್ ಟೂರ್ನಿಯಲ್ಲಿ​ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ, ಹಫೀಜ್ ಕೊಹ್ಲಿಯನ್ನು ತಮ್ಮ ತಂಡದ ಬದಲು ಶತಕಕ್ಕಾಗಿ ಆಡುತ್ತಿಲ್ಲ ಎಂದು ಟೀಕಿಸಿದ್ದರು.

ಏಕದಿನ ಕ್ರಿಕೆಟ್​​ನಲ್ಲಿ 49ನೇ ಶತಕ ಬಾರಿಸಿದ ಬಳಿಕ ಕೊಹ್ಲಿ ನಿಧಾನಗತಿಯಲ್ಲಿ ಆಡಿದ್ದರು ಎಂದು ಅವರು ಆರೋಪಿಸಿದ್ದಾರೆ. “ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್​ನಲ್ಲಿ ನಾನು ಸ್ವಾರ್ಥದ ಭಾವನೆ ನೋಡಿದೆ. ಇದು ಈ ವಿಶ್ವಕಪ್​​ನಲ್ಲಿ ಮೂರನೇ ಬಾರಿಗೆ ಸಂಭವಿಸಿದೆ. 49ನೇ ಓವರ್​ನಲ್ಲಿ ಅವರು ಶತಕ ತಲುಪಲು ಒಂದೇ ಒಂದು ರನ್​ಗಾಗಿ ಓಡಿದರು. ಅವರು ತಂಡಕ್ಕೆ ಮೊದಲ ಆದ್ಯತೆ ನೀಡಲಿಲ್ಲ” ಎಂದು ಹಫೀಜ್ 2023 ರ ವಿಶ್ವಕಪ್ ಅನ್ನು ವರದಿ ಮಾಡುತ್ತಿದ್ದ ಪಾಕಿಸ್ತಾನದ ಟಿವಿ ಕಾರ್ಯಕ್ರಮದಲ್ಲಿ ಹೇಳಿದ್ದರು.

ವಿರಾಟ್ ಕೊಹ್ಲಿಯ ಉದ್ದೇಶವನ್ನು ಮತ್ತೆ ಪ್ರಶ್ನಿಸಿದ ಮೊಹಮ್ಮದ್ ಹಫೀಜ್

ಆಡಮ್ ಗಿಲ್​ಕ್ರಿಸ್ಟ್​​ ಮತ್ತು ಮೈಕೆಲ್ ವಾನ್ ಕೂಡ ಭಾಗಿಯಾಗಿದ್ದ ಯೂಟ್ಯೂಬ್ ಶೋ ಕ್ಲಬ್ ಪ್ರೈರಿ ಫೈನರ್​ ಸಂವಾದದ ಸಮಯದಲ್ಲಿ, ಮೊಹಮ್ಮದ್ ಹಫೀಜ್ ತಮ್ಮ ಮಾತುಗಳಿಗೆ ಬದ್ಧರಾಗಿದ್ದರು. ಆ ಸಮಯದಲ್ಲಿ ಕೊಹ್ಲಿಯನ್ನು ಸ್ವಾರ್ಥಿ ಎಂದು ಕರೆಯುವ ಹಿಂದಿನ ಕಾರಣವನ್ನು ವಿವರಿಸಿದ್ದರು.

ಆ ಸಮಯದಲ್ಲಿ ನಾನು ಹೇಳಿದ್ದು ಸರಿಯಾಗಿಯೇ ಇತ್ತು. ನೀವು ಇಡೀ ಸಂದರ್ಭವನ್ನು ನೋಡಿದರೆ ನಿಮಗೆ ತಿಳಿಯುತ್ತದೆ. ನನ್ನ ಪ್ರಕಾರ, ಯಾರೇ ಆಡುತ್ತಿದ್ದರೂ ನಿಮ್ಮ ಉದ್ದೇಶ, ನಿಮ್ಮ ಆಟದ ವಿಧಾನವು ಯಾವಾಗಲೂ ಪಂದ್ಯವನ್ನು ಗೆಲ್ಲುವತ್ತ ಇರಬೇಕು,” ಎಂದು ಹಫೀಜ್ ಹೇಳಿದ್ದಾರೆ.

90 ರನ್​ ಮಾಡಿದ ಬಳಿಕ ದೊಡ್ಡ ಶಾಟ್ ಆಡುವುದನ್ನು ನಿಲ್ಲಿಸಿದರೆ ನಾನು ಒಪ್ಪಿಕೊಳ್ಳುವುದಿಲ್ಲ. ನಾನು ಅದನ್ನು ಎಂದಿಗೂ ಒಪ್ಪುವುದಿಲ್ಲ. 95 ರನ್ ಗಳಿಸಿ ಯಾರಾದರೂ ತಮ್ಮ 100 ರನ್ ಗಳಿಸಲು ಐದು ಎಸೆತಗಳನ್ನು ತೆಗೆದುಕೊಳ್ಳಬಾರದು. ಮೂರು ಅಥವಾ ನಾಲ್ಕು ಎಸೆತಗಳಲ್ಲಿ ನಾನು ಹೊಡೆಯಬಹುದೇ ಎಂದು ಯೋಚಿಸದಿದ್ದರೆ ತಪ್ಪು ಎಂದು ಹೇಳಿದರು.

100 ರನ್ ಗಳಿಸಿದ ನಂತರ ನನ್ನ ಉದ್ದೇಶಗಳು ಬದಲಾದರೆ, ನಾನು 95 ರನ್ ಗಳಿಸಿದ್ದಾಗ ಅದೇ ಶಾಟ್ ಅನ್ನು ಏಕೆ ಆಡಲು ಸಾಧ್ಯವಿಲ್ಲ? ಏಕೆಂದರೆ ನನ್ನ ಪ್ರಕಾರ ನಿಮ್ಮ ಉದ್ದೇಶ ಯಾವಾಗಲೂ ಒಂದೇ ಆಗಿರಬೇಕು. ನಿಮ್ಮ ತಂಡಕ್ಕೆ ಮೌಲ್ಯವನ್ನು ವೃದ್ಧಿಸಲು ಮತ್ತು ಅವರನ್ನು ಗೆಲುವಿನ ಸ್ಥಾನಕ್ಕೆ ತರಲು ಸಾಧ್ಯವಿರುವ ಎಲ್ಲವನ್ನೂ ಮಾಡಿ ಎಂದು ಹಫೀಜ್ ಹೇಳಿದರು. ಈ ಮೂಲಕ ಅವರು ಕೊಹ್ಲಿಯನ್ನು ಮತ್ತೊಮ್ಮೆ ಟೀಕಿಸಿದ್ದಾರೆ.

ವೈಯಕ್ತಿಕ ಮೈಲಿಗಲ್ಲುಗಳ ನಿರೀಕ್ಷೆ ಬೇಡ: ಮೊಹಮ್ಮದ್ ಹಫೀಜ್

ಯಾವುದೇ ದೊಡ್ಡ ಶಾಟ್​ಗಳನ್ನು ಆಡದೆ ಕೊಹ್ಲಿ ತಮ್ಮ ಶತಕ ತಲುಪಲು ಸಾಕಷ್ಟು ಎಸೆತಗಳನ್ನು ತೆಗೆದುಕೊಂಡರು. ಅದಕ್ಕಾಗಿ ಟೀಕಿಸಿದ್ದಾರೆ ಎಂದು ಹಫೀಜ್ ತಮ್ಮ ನಿಲುವು ವಿವರಿಸಿದರು.

ಇದನ್ನೂ ಓದಿ: BCCI: ಟೀಮ್​ ಇಂಡಿಯಾದ ತವರಿನ ಕ್ರಿಕೆಟ್​ ಸರಣಿಯ ವೇಳಾಪಟ್ಟಿ ಪ್ರಕಟ

ಆ ಪಂದ್ಯದಲ್ಲಿ ವಿರಾಟ್ ತಮ್ಮ 100 ರನ್ ಗಳಿಸಲು ಸಾಕಷ್ಟು ಎಸೆತಗಳನ್ನು ತೆಗೆದುಕೊಂಡರು. ಅವರು ದೊಡ್ಡ ಶಾಟ್​ಗಳನ್ನು ಆಡುತ್ತಿಲ್ಲ ಎಂದು ನಾನು ಭಾವಿಸಿದೆ. ನೀವು ಅವರ ಶತಕವನ್ನು ಮತ್ತೆ ನೋಡಿದರೆ ನಾನು ಏನು ಹೇಳುತ್ತಿದ್ದೇನೆಂದು ನಿಮಗೆ ಅರ್ಥವಾಗಬಹುದು,” ಎಂದು ಪಾಕಿಸ್ತಾನದ ಮಾಜಿ ಆಲ್ರೌಂಡರ್ ವಿವರಿಸಿದರು.

“ನನ್ನ ಪ್ರಕಾರ, ವೈಯಕ್ತಿಕ ಮೈಲಿಗಲ್ಲುಗಳು ಕ್ರಿಕೆಟ್​ನಿಂದ ದೂರವಿರಬೇಕು. ನಿಮ್ಮ ಅಭಿಮಾನಿಯಾಗಿ ನಾವು ಕಷ್ಟಪಟ್ಟು ಶತಕ ಬಾರಿಸುವುದನ್ನು ಇಷ್ಟಪಡುವುದಿಲ್ಲ ಎಂದು ಹಫೀಜ್ ಹೇಳಿದ್ದಾರೆ. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 90 ನೇ ರನ್ ನಂತರ ಶತಕವನ್ನು ತಲುಪಲು ಒಂಬತ್ತು ಎಸೆತಗಳನ್ನು ತೆಗೆದುಕೊಂಡರು. ಅವರು 93 ರನ್ ಗಳಿಸಿದ್ದಾಗ ಬೌಂಡರಿ ಬಾರಿಸಿದರು ಮತ್ತು 119 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು.

ಕೊಹ್ಲಿ 121 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದ್ದರಿಂದ ಭಾರತ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತ್ತು. ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ 83 ರನ್​ಗಳಿಗೆ ಆಲೌಟ್ ಆಯಿತು. ಈ ಪಂದ್ಯವನ್ನು ಭಾರತ 243 ರನ್ ಗಳಿಂದ ಗೆದ್ದುಕೊಂಡಿತು.

Exit mobile version