ಬೆಂಗಳೂರು: ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1 ರಿಂದ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024 ಕ್ಕೆ (T20 World Cupl 2024) ಮುಂಚಿತವಾಗಿ ಭಾರತ ತಂಡಕ್ಕೆ ಏಕೈಕ ಅಭ್ಯಾಸ ಪಂದ್ಯ ದೊರಕಿದೆ. ಆದರೆ ಆ ಹಣಾಹಣಿಯಿಂದ ವಿರಾಟ್ ಕೊಹ್ಲಿ(Virat kohli) ಹೊರಕ್ಕೆ ಉಳಿಯುವ ಸಾಧ್ಯತೆಗಳಿವೆ. ಐಪಿಎಲ್ ಮುಗಿದ ಬಳಿಕ ಅವರು ಸಣ್ಣ ವಿರಾಮ ತೆಗೆದುಕೊಂಡಿದ್ದಾರೆ. ಅವರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಹೀಗಾಗಿ ಅಭ್ಯಾಸ ಪಂದ್ಯದಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಕೊಹ್ಲಿ ಜೊತೆಗೆ, ಸಂಜು ಸ್ಯಾಮ್ಸನ್ ಕೂಡ ನಿಗದಿತ ಸಮಯದಲ್ಲಿ ಹೊರಡುವುದಿಲ್ಲ ಎಂದು ಹೇಳಲಾಗಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೂಡ ತಂಡ ಸೇರಿಲ್ಲ. ನಾನಾ ಗಾಸಿಪ್ಗಳ ನಡುವೆ ಅವರೂ ಪ್ರವಾಸಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಭಾರತ ತಂಡದ ಮೊದಲ ಬ್ಯಾಚ್ ಆಟಗಾರರು ಶನಿವಾರ ತೆರಳಿದರೆ, ಎರಡನೇ ಬ್ಯಾಚ್ ಸೋಮವಾರ ಹೊರಡಲಿದೆ ಈ ಆಟಗಾರರು ಅಲ್ಲಿ ಆಡಲಿದ್ದಾರೆ.
ಆರ್ಸಿಬಿ ಬ್ಯಾಟ್ಸ್ಮನ್ ಕೊಹ್ಲಿ ಐಪಿಎಲ್ 2024ರಲ್ಲಿ ಒಂದು ಶತಕ ಮತ್ತು 5 ಅರ್ಧಶತಕಗಳೊಂದಿಗೆ 741 ರನ್ ಬಾರಿಸಿದ್ದರು ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಐಪಿಎಲ್ನಲ್ಲಿ ಒಟ್ಟು 15 ಪಂದ್ಯವಾಡಿರುವ ಅವರು ಟಿ20 ಮೋಡ್ನಲ್ಲಿದ್ದಾರೆ. ಹೀಗಾಗಿ ಅಭ್ಯಾಸ ಪಂದ್ಯ ತಪ್ಪಿಸಲು ಉದ್ದೇಶಿಸಿದ್ದಾರೆ. ಇನ್ನು ದುಬೈಗೆ ವೈಯಕ್ತಿಕ ಕೆಲಸಕ್ಕಾಗಿ ತೆರಳಿರುವ ಸಂಜು ಸ್ಯಾಮ್ಸನ್ ಸ್ವಲ್ಪ ದಿನ ಬಿಟ್ಟು ಹೊರಡು ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮಾಹಿತಿ ನೀಡಿದ್ದಾರೆ.
“ಕೊಹ್ಲಿ ಅವರು ತಡವಾಗಿ ತಂಡವನ್ನು ಸೇರಲಿದ್ದಾರೆ ಎಂದು ನಮಗೆ ಮೊದಲೇ ತಿಳಿಸಿದ್ದರು/ ಅದಕ್ಕಾಗಿಯೇ ಬಿಸಿಸಿಐ ಅವರ ವೀಸಾ ಅವಧಿಯನ್ನು ನಂತರದ ದಿನಾಂಕಕ್ಕೆ ಮುಂದೂಡಿದೆ. ಅವರು ಮೇ 30ರ ಮುಂಜಾನೆ ನ್ಯೂಯಾರ್ಕ್ ಗೆ ಹಾರುವ ನಿರೀಕ್ಷೆಯಿದೆ. ಅವರ ಮನವಿಯನ್ನು ಬಿಸಿಸಿಐ ಒಪ್ಪಿಕೊಂಡಿದೆ, “ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
The wait is over.
— BCCI (@BCCI) May 25, 2024
We are back!
Let's show your support for #TeamIndia 🇮🇳 pic.twitter.com/yc69JiclP8
ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಶಿವಂ ದುಬೆ, ಕುಲದೀಪ್ ಯಾದವ್, ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಮತ್ತು ಸಹಾಯಕ ಸಿಬ್ಬಂದಿ ಶನಿವಾರ ರಾತ್ರಿ ಮುಂಬೈನಿಂದ ಹೊರಟರು. ಭಾರತವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಐಪಿಎಲ್ 2024 ಅನ್ನು ಪ್ರಾರಂಭಿಸಲಿದ್ದು, ನಂತರ ಜೂನ್ 9 ರಂದು ಪಾಕಿಸ್ತಾನವನ್ನು ಎದುರಿಸಲಿದೆ.