ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ (virat kohli))ವಿವಾದಕ್ಕೆ ಸಿಲುಕಿದ್ದಾರೆ. ಎರಡನೇ ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿ ಸ್ಟಾರ್ ಬ್ಯಾಟ್ಸ್ಮನ್ ಔಟಾಗಿರುವ ರೀತಿ ಅಂಪೈರಿಂಗ್ ನಿರ್ಧಾರದ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿತು.
ಕೆಕೆಆರ್ನ ಹರ್ಷಿತ್ ರಾಣಾ ಅವರ ಹೈಫುಲ್ಟಾಸ್ಗೆ ಕೊಹ್ಲಿ ಔಟ್ ಆಗಿದ್ದರು. ಡಿಆರ್ಎಸ್ ಕೋರಿದ ಹಿನ್ನೆಲೆಯಲ್ಲಿ ನಿರ್ಧಾರವನ್ನು ಮೂರನೇ ಅಂಪೈರ್ಗೆ ಶಿಫಾರಸು ಮಾಡಲಾಯಿತು. ರಿಪ್ಲೇಗಳು ಅಪೂರ್ಣವಾಗಿದ್ದರೂ, ಮೈದಾನದಲ್ಲಿನ ನಿರ್ಧಾರಕ್ಕೆ ಅಂಪೈರ್ ಬೆಂಬಲ ಕೊಟ್ಟರು. ಇದರ ಪರಿಣಾಮವಾಗಿ ಕೊಹ್ಲಿ ಏಳು ಎಸೆತಗಳಲ್ಲಿ 18 ರನ್ ಗಳಿಸಿದ ನಂತರ ಕ್ರೀಸ್ನಿಂದ ನಿರ್ಗಮಿಸಬೇಕಾಯಿತು.
ಈ ನಿರ್ಧಾರದಿಂದ ಅಸಮಾಧಾನಗೊಂಡ ಕೊಹ್ಲಿ ಆನ್ ಫೀಲ್ಡ್ ಅಂಪೈರ್ ಗಳೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು. ಅದೇ ಕೋಪವನ್ನು ಅವರು ಕೊನೇ ತನಕ ಇಟ್ಟುಕೊಂಡಿದ್ದರು. ಪಂದ್ಯ ಮುಗಿದ ಬಳಿಕ ಕೈಕುಲುಕಲು ನಿರಾಕರಿಸಿದ್ದರಯ. ಈ ಕ್ಷಣವನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಯಿತು.
ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಿದ ಐಪಿಎಲ್ ಅಧಿಕಾರಿಗಳು ಈ ಘಟನೆಯನ್ನು ಗಮನಿಸದೆ ಹೋಗಲಿಲ್ಲ. ಐಪಿಎಲ್ ಹೇಳಿಕೆಯ ಪ್ರಕಾರ, ಕೊಹ್ಲಿಯ ಕ್ರಮಗಳು ನೀತಿ ಸಂಹಿತೆಯ ಆರ್ಟಿಕಲ್ 2.8 ರ ಅಡಿಯಲ್ಲಿ ಲೆವೆಲ್ 1 ಅಪರಾಧವಾಗಿದೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ವಿವಾದಗಳು ಅಸಾಮಾನ್ಯವಲ್ಲವಾದರೂ, ಕೊಹ್ಲಿಯ ಪ್ರತಿಕ್ರಿಯೆಯು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಟಗಾರರು ಅನುಭವಿಸುವ ತೀವ್ರ ಭಾವನೆಗಳನ್ನು ಒತ್ತಿಹೇಳುತ್ತದೆ.
Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸೆಮಿಫೈನಲ್ನಲ್ಲಿ ಪಂದ್ಯದಲ್ಲಿ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ತಮ್ಮ 50 ನೇ ಏಕದಿನ ಶತಕವನ್ನು ಗಳಿಸಿದ್ದರು. ಈ ಮೂಲಕ ಅವರು ಸಚಿನ್ ತೆಂಡೂಲ್ಕರ್ ಅವರ 49 ಏಕ ದಿನ ಶತಕಗಳ ಸಾಧನೆಯನ್ನು ಮುರಿದಿದ್ದರು. ಹೀಗಾಗಿ ಅದು ಕ್ರೀಡಾ ಇತಿಹಾಸದಲ್ಲಿ ಚಾರಿತ್ರಿಕ ಘಟನೆಯಾಗಿದೆ. ಅವರು ಶತಕ ಬಾರಿಸಿದ ಬಳಿಕ ದೇಶ ವಿದೇಶಗಳ ಅಥ್ಲೀಟ್ಗಳಿಂದ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಇದೀಗ ಅವರ ಆ ಅವಿಸ್ಮರಣೀಯ ಶತಕಕ್ಕೆ ಅಂತಾರಾಷ್ಟ್ರೀಯ ಗೌರವವೊಂದು ದೊರಕಿದೆ ಎಂಬುದಾಗಿ ವರದಿಯಾಗಿದೆ. ಕೊಹ್ಲಿಯ ಅಭಿಮಾನಿ ಎಂಬ ಹೆಸರಲ್ಲಿ ಸೃಷ್ಟಿ ಮಾಡಿರುವ ಎಕ್ಸ್ ಖಾತೆಯಲ್ಲಿ ಈ ಮಾಹಿತಿಹಂಚಿಕೊಳ್ಳಲಾಗಿದೆ.
ಸ್ಪೇನ್ ನ ಮ್ಯಾಡ್ರಿಡ್ ನ ಪಲಾಸಿಯೊ ಡಿ ಸಿಬೆಲೆಸ್ ನಲ್ಲಿ ಸೋಮವಾರ (ಏಪ್ರಿಲ್ 22) ನಡೆದ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ ನಲ್ಲಿ ಕೊಹ್ಲಿಯ ಈ ಅಸಾಧಾರಣ ಸಾಧನೆಯನ್ನು ಉನ್ನತ ಕ್ರೀಡಾ ಕ್ಷಣಗಳಲ್ಲಿ ಒಂದಾಗಿ ಗೌರವಿಸಲಾಗಿದೆ ಎಂದು ಎಕ್ಸ್ನಲ್ಲಿ ಬರೆಯಲಾಗಿದೆ.
ಈ ಮನ್ನಣೆ ನಿಸ್ಸಂದೇಹವಾಗಿ ಅರ್ಹವಾಗಿದೆ. ಏಕೆಂದರೆ ಮುಂಬೈನ ಕ್ರಿಕೆಟ್ ಪ್ರೇಕ್ಷಕರು ಕೊಹ್ಲಿ ಇತಿಹಾಸವನ್ನು ನಿರ್ಮಿಸುವುದಕ್ಕೆ ಸಾಕ್ಷಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಶತಕ ಬಾರಿಸುವ ಮೂಲಕ ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೊಹ್ಲಿ, ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು.
ಎರಡು ದಶಕಗಳ ಕಾಲ ರಾಷ್ಟ್ರದ ಭರವಸೆಗಳನ್ನು ಹೊತ್ತ ಬ್ಯಾಟಿಂಗ್ ದಂತಕಥೆ ಸಚಿನ್ ಅವರ ಹೆಜ್ಜೆಗಳನ್ನು ಅನುಸರಿಸಿ, ಸಚಿನ್ ತೆಂಡೂಲ್ಕರ್ ಅವರ ಸ್ಮರಣೀಯ ವಿಶ್ವಕಪ್ ವಿದಾಯದ 12 ವರ್ಷಗಳ ನಂತರ, ಕೊಹ್ಲಿ 50 ನೇ ಏಕದಿನ ಶತಕವನ್ನು ತಲುಪಿದರು.