Site icon Vistara News

Virat kohli : ಒಂದೇ ಬಾರಿಗೆ 110 ಕೋಟಿ ರೂಪಾಯಿ ಕಳೆದುಕೊಳ್ಳಲಿದ್ದಾರೆ ವಿರಾಟ್​ ಕೊಹ್ಲಿ

Virat kohli

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ (Virat kohli) ಪ್ರಸ್ತುತ ವೈಯಕ್ತಿಕ ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಿದ್ದಾರೆ. ಹೀಗಾಗಿ ಅವರು ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅವರು ಅಲಭ್ಯರಾಗಲಿದ್ದರು. ಸರಣಿಯ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಇನ್ನೂ ಘೋಷಿಸಲಾಗಿಲ್ಲ. ಆದಾಗ್ಯೂ ಕೊನೆಯ ಮೂರು ಟೆಸ್ಟ್​ ಪಂದ್ಯಗಳಿಗೆ ಅವರ ಲಭ್ಯತೆಯ ಬಗ್ಗೆ ತೀವ್ರ ಊಹಾಪೋಹಗಳಿವೆ. ಏತನ್ಮಧ್ಯೆ ವಿರಾಟ್ ಕೊಹ್ಲಿ ಆದಾಯ ಮತ್ತು ಕ್ರಿಕೆಟ್ ಹೊರತುಪಡಿಸಿದ ಆದಾಯದ ವಿಚಾರದಲ್ಲಿ ಹೊಸ ಸುದ್ದಿಯೊಂದು ಬಂದಿದೆ.

ಮೂಲವೊಂದರ ಪ್ರಕಾರ ವಿರಾಟ್ ಕೊಹ್ಲಿ, ಜನಪ್ರಿಯ ಕ್ರೀಡಾ ಆಕ್ಸೆಸರೀಸ್ ಬ್ರಾಂಡ್​ ಪೂಮಾ ಇಂಡಿಯಾದೊಂದಿಗಿನ ದೀರ್ಘಕಾಲದ ಪಾಲುದಾರಿಕೆ ಕೊನೆಗೊಳಿಸುವ ಸಾಧ್ಯತೆಯಿದೆ. ಬ್ರಾಂಡ್ ನೊಂದಿಗೆ ಎಂಟು ವರ್ಷಗಳ ಒಡನಾಟದ ನಂತರ ಅವರು ನಿರ್ಗಮಿಸುವುದು ಅನೇಕರಿಗೆ ಆಶ್ಚರ್ಯದ ವಿಚಾರ. ಯಾಕೆಂದರೆ 2017 ರಲ್ಲಿ 110 ಕೋಟಿ ರೂ.ಗಳ ಒಪ್ಪಂದದೊಂದಿಗೆ ವಿರಾಟ್ ಕೊಹ್ಲಿಯ ಬ್ರಾಂಡ್ ನೊಂದಿಗಿನ ಸಂಬಂಧ ಪ್ರಾರಂಭವಾಗಿತತ್ತು. ಇದು ಭಾರತೀಯ ಕ್ರೀಡೆಗಳಲ್ಲಿ ಹೆಚ್ಚು ಚರ್ಚೆಗ ಒಳಗಾದ ದೊಡ್ಡ ಮೊತ್ತದ ಒಪ್ಪಂದವಾಗಿತ್ತು. ಅದನ್ನೂ ಈಗ ಕೊನೆಗೊಳಿಸುವ ಮೂಲಕ ಅವರು 110 ಕೋಟಿ ರೂಪಾಯಿ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಮತ್ತೆ ಅದು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : Jasprit Bumrah: ನಂ.1 ಸ್ಥಾನ ಅಲಂಕರಿಸಿ ಹಲವು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

ಕ್ರೀಡಾ ಪಾದರಕ್ಷೆಗಳ ತಯಾರಿಕೆಯ ಬ್ರಾಂಡ್ ಆಗಿರುವ ಅಗಿಲಿಟಾಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್​​ನ ಅಂಬಾಸಿಡರ್ ಆಗಿ ವಿರಾಟ್ ಕೊಹ್ಲಿ ಹೊಸ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅಧಿಕೃತ ಹೇಳಿಕೆಗಳನ್ನು ಪೂಮಾ ಮತ್ತು ಅಗಿಲಿಟಾಸ್ ಸ್ಪೋರ್ಟ್ಸ್ ಎರಡೂ ಪ್ರಕಟಿಸಿಲ್ಲ ಎಂದು ವರದಿ ಹೇಳಿದೆ.

ಆಯ್ಕೆಗಾರರಿಗೆ ಸಮಸ್ಯೆ

ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ಗೆ ತಂಡ ಘೋಷಿಸುವಲ್ಲಿ ಆಯ್ಕೆದಾರರಿಗೆ ಎದುರಾಗಿರುವ ಅಡಚಣೆಗಳಲ್ಲಿ ಒಂದು ವಿರಾಟ್ ಕೊಹ್ಲಿ ಲಭ್ಯತೆಯ ಬಗ್ಗೆ ಸ್ಪಷ್ಟತೆಯ ಕೊರತೆ. ಎಬಿ ಡಿವಿಲಿಯರ್ಸ್ ಪ್ರಕಾರ ಅವರ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರ ಎರಡನೇ ಮಗುವಿನ ಜನ್ಮ ನೀಡಿದ ಕಾರಣ ಕೌಟುಂಬಿಕ ಕಾಳಜಿಗಾಗಿ ಭಾರತದ ಮಾಜಿ ನಾಯಕ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ಕೊಹ್ಲಿ ಬಗ್ಗೆ ಕೇಳಿದಾಗ. ಸ್ಟಾರ್ ಆಟಗಾರ ಪಂದ್ಯಕ್ಕೆ ಬರಲು ಸಜ್ಜಾಗಿದ್ದಾರೆ ಎಂದು ಹೇಳಿದ್ದರು.

ವಿರಾಟ್ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರ ಆಗಮನ ಆ ತಂಡದ ಬಲವನ್ನು ಸುಧಾರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಭಾರತೀಯ ಕ್ರಿಕೆಟ್​ನಲ್ಲಿ ಆಳದಲ್ಲಿ ಹಲವಾರು ಪ್ರತಿಭೆಗಳಿವೆ. ಆದ್ದರಿಂದ ನಾವು ಎದುರಾಳಿ ತಂಡದ ಪ್ರತಿಯೊಬ್ಬ ಆಟಗಾರನನ್ನು ಗೌರವಿಸುತ್ತೇವೆ,” ಎಂದು ಮೆಕಲಮ್ ಹೇಳಿದ್ದರು.

Exit mobile version