Site icon Vistara News

Virat kohli : ವಿರಾಟ್​​ ಕೊಹ್ಲಿ ಈ ಬಾರಿ ಐಪಿಎಲ್​ನಲ್ಲಿಯೂ ಆಡುವುದಿಲ್ಲ…

Virat kohli ipl

ಬೆಂಗಳೂರು: ಆಧುನಿಕ ಕ್ರಿಕೆಟ್​​ನ ಪೋಸ್ಟರ್ ಬಾಯ್ ವಿರಾಟ್ ಕೊಹ್ಲಿ (Virat kohli) ಎರಡನೇ ಮಗುವಿನ ಜನನದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಎಲ್ಲಾ ನಾಲ್ಕು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿರುವುದು ದುರದೃಷ್ಟಕರ. ಅದಕ್ಕಾಗಿಯೇ ವಿಶ್ವ ಕ್ರಿಕೆಟ್​ನ ಅಭಿಮಾನಿಗಳು ಪರಿತಪಿಸಿದ್ದರು. ಇದೀಗ ಮತ್ತೊಂದು ಬ್ಯಾಡ್ ನ್ಯೂಸ್​ ಬಂದಿದೆ. ಅವರು ಮುಂಬರುವ ಐಪಿಎಲ್​ನಲ್ಲಿಯೂ (IPL 2024) ಆಡುವುದಿಲ್ಲ ಎಂದು ಹೇಳಲಾಗಿದೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್​​ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಹೀಗಾಗಿ ರೋಹಿತ್ ಶರ್ಮಾ ಮತ್ತು ಬಳಗ ಸಜ್ಜಾಗುತ್ತಿದೆ. ಏತನ್ಮಧ್ಯೆ ಐಪಿಎಲ್​ ವೇಳಾಪಟ್ಟಿಯು ಬಿಡುಗಡೆಗೊಂಡಿದೆ. ಮಾರ್ಚ್ 22ರಂದು ಆರ್​​​ಸಿಬಿ ಮತ್ತು ಸಿಎಸ್​ಕೆ ನಡುವಿನ ಮುಖಾಮುಖಿಯೊಂದಿಗೆ ಐಪಿಎಲ್ 2024 ಶುಭಾರಂಭವಾಗಲಿದೆ. ಹೀಗಾಗಿ ಕೊಹ್ಲಿಯ ಮರಳುವಿಕೆಯ ನಿರೀಕ್ಷೆ ಎಲ್ಲರದ್ದು . ಅವರ ಅಭಿಮಾನಿಗಳು ಕೊಹ್ಲಿ ಖಂಡಿತವಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ ಆಡುತ್ತಾರೆ ಎಂದು ನಂಬಿದ್ದಾರೆ.

ಇವೆಲ್ಲದರ ನಡುವೆ ಭಾರತದ ಕ್ರಿಕೆಟ್​ ದಂತಕತೆ ಸುನಿಲ್ ಗವಾಸ್ಕರ್ ಕೊಹ್ಲಿ ಬರುವುದು ಖಚಿತವಲ್ಲ ಎಂದು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್​​ನ ಸ್ಟಾರ್ ನಹೀ ಫಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಮಾಜಿ ಶ್ರೇಷ್ಠ ಆಟಗಾರ, ಕೊಹ್ಲಿ ಐಪಿಎಲ್ 2024 ರಲ್ಲಿ ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

“ಕ್ಯಾ ವೋ ಖೇಲೆಂಗೆ… ಕುಚ್ ಕಾರಣ ಕೆ ಲಿಯೆ ಖೇಲ್ ನಹೀನ್ ರಹೇ ಹೈ, ಶಾಯದ್ ಹೋ ಸಕ್ತಾ ಹೈ ಕೆ ಐಪಿಎಲ್ ಕೆ ಲಿಯೆ ಭಿ ನಾ ಖೇಲೆ (ಅವರು ಆಡುತ್ತಾರೆಯೇ ಎಂಬುದು ಗೊತ್ತಿಲ್ಲ. ಕೆಲವು ಕಾರಣಗಳಿಂದಾಗಿ ಅವರು ಆಡುತ್ತಿಲ್ಲ, ಬಹುಶಃ ಅವರು ಐಪಿಎಲ್​​ನಲ್ಲಿಯೂ ಆಡದಿರಬಹುದು,” ಎಂದು ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ : Shreyas Iyer : ಬಿಸಿಸಿಐ ಕ್ರಮದ ಭಯ; ರಣಜಿ ಟ್ರೋಫಿ ಆಡಲು ಒಪ್ಪಿಕೊಂಡ ಶ್ರೇಯಸ್​ ಅಯ್ಯರ್​​!

ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಕುಟುಂಬಕ್ಕೆ ಹೊಸ ಮಗುವನ್ನು ಸ್ವಾಗತಿಸಿದ್ದಾರೆ ಎಂದು ಕೊಹ್ಲಿ ಇತ್ತೀಚೆಗೆ ಬಹಿರಂಗಪಡಿಸಿದ್ದರು. 35 ವರ್ಷದ ಕೊಹ್ಲಿ ಈ ವಿಷಯದ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸದಿದ್ದರೂ, ತಮ್ಮ ಎರಡನೇ ಮಗುವಿನ ಜನನದಿಂದಾಗಿ ಅವರು ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯುತ್ತಾರೆ ಎಂದು ವ್ಯಾಪಕವಾಗಿ ನಂಬಲಾಗಿದೆ.

ವಾಷಿಂಗ್ಟನ್ ಸುಂದರ್​ ಧರ್ಮಶಾಲಾ ಟೆಸ್ಟ್​​ನಿಂದ ಔಟ್

ನವದೆಹಲಿ: ಭಾರತದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಬಿಕೆಸಿಯಲ್ಲಿ ನಡೆಯಲಿರುವ ಮುಂಬೈ ವಿರುದ್ಧದ ರಣಜಿ ಟ್ರೋಫಿ (Ranji Trophy) ಸೆಮಿಫೈನಲ್ಸ್​​ನಲ್ಲಿ ಆಡಲಿದ್ದಾರೆ. ಇದು ತಮಿಳುನಾಡಿಗೆ ಗಮನಾರ್ಹ ಉತ್ತೇಜನವನ್ನು ನೀಡುತ್ತದೆ. ಹೀಗಾಗಿ ಅವರು ಭಾರತ ತಂಡದಿಂದ ಬಿಡುಗಡೆಗೊಂಡಿದ್ದಾರೆ. ಅವರು ಧರ್ಮಶಾಲಾ ಟೆಸ್ಟ್​​ನಲ್ಲಿ ತಂಡದ ಭಾಗವಾಗಿರುವುದಿಲ್ಲ.

ಸುಂದರ್ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ 20 ಐ ಪಂದ್ಯದಲ್ಲಿ ಆಡಿದ್ದರು. ಅವರು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್​​ಗೆ ಭಾರತದ ತಂಡದ ಭಾಗವಾಗಿದ್ದರು. ಆದರೆ ಮುಂಬೈ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ ಆಯ್ಕೆಯಾದ ನಂತರ, ಬಲಗೈ ಆಫ್-ಸ್ಪಿನ್ ಆಲ್ರೌಂಡರ್ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯಲಿರುವ ಐದನೇ ಟೆಸ್ಟ್​​ನಿಂದ ಹೊರಗುಳಿಯಲಿದ್ದಾರೆ.

ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ಸಿಕ್ಕಾಗಲೆಲ್ಲಾ ಯಾವಾಗಲೂ ಉತ್ತಮ ಪ್ರದರ್ಶನ ನೀಡುವ ಅಂಡರ್​ ರೇಟೆಡ್​ ಆಟಗಾರರಲ್ಲಿ ಒಬ್ಬರು. ಆದಾಗ್ಯೂ, ತಂಡವು ಈಗಾಗಲೇ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರಂತಹ ಗುಣಮಟ್ಟದ ಸ್ಪಿನ್ನರ್​ಗಳಿಂದ ತುಂಬಿರುವುದರಿಂದ ಸುಂದರ್​ಗೆ ಭಾರತ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ.​​

Exit mobile version