Site icon Vistara News

Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

Shakib Al Hasan

ನವದೆಹಲಿ: ಭಾರತದ ಮಾಜಿ ಆರಂಭಿಕ ಬ್ಯಾಟರ್​ ಹಾಗೂ ಕಾಮೆಂಟೇಟರ್​ ವೀರೇಂದ್ರ ಸೆಹ್ವಾಗ್ ಮತ್ತು ಬಾಂಗ್ಲಾದೇಶ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಅವರ ನಡುವಿ ಶೀತಲ ಸಮರ ತೀವ್ರಗೊಂಡಿದೆ. ಈ ಬಾರಿ ಸೆಹ್ವಾಗ್​, ತಕ್ಷಣದಲ್ಲೇ ನಿವೃತ್ತಿಯಾಗು ಎಂದು ಶಕಿಬ್​ಗೆ ಸಲಹೆ ಕೊಟ್ಟಿದ್ದಾರೆ. ನಿನ್ನಿಂದ ಆಡಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ತಂಡ ತೊರೆಯುವುದು ಉತ್ತಮ ಎಂದು ಹೇಳಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಸೂಪರ್​ 8 ಪಂದ್ಯದ ಬಳಿಕ ಸೆಹ್ವಾಗ್ ಈ ಮಾತುಗಳ ಮೂಲಕ ಕುಟುಕಿದ್ದಾರೆ.

ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ವಿರುದ್ದ ಬಾಂಗ್ಲಾದೇಶ 50 ರನ್​ಗಳ ಹೀನಾಯ ಸೋಲಿಗೆ ಒಳಗಾಗಿದೆ. ಏಕಪಕ್ಷೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಸೂಪರ್ 8 ಪಂದ್ಯದಲ್ಲಿ ಸೋತಿದ್ದ ಬಾಂಗ್ಲಾ ತಂಡಕ್ಕೆ ಇದು ಎರಡನೇ ಆಘಾತ.

ಪಂದ್ಯದಲ್ಲಿ ಟಾಸ್ ಸೋತ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭವನ್ನು ನೀಡಿದರು. ನಂತರ ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಭಾರತಕ್ಕೆ 190 ಕ್ಕೂ ಹೆಚ್ಚು ರನ್ ಗಳಿಸಲು ಸಹಾಯ ಮಾಡಿದರು. ನಿರೀಕ್ಷೆಯಂತೆ, ಬಾಂಗ್ಲಾದೇಶಕ್ಕೆ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಕ್ರಮಾಂಕದಲ್ಲಿ ಲಿಟನ್ ದಾಸ್, ತಂಝಿಮ್ ಹಸನ್ ಮತ್ತು ನಜ್ಮುಲ್ ಹುಸೇನ್ ಶಾಂಟೊ ಮಾತ್ರ ಕೆಲವು ರನ್ ಗಳಿಸಿದರೆ, ಅನುಭವಿ ಶಕೀಬ್ ಅಲ್ ಹಸನ್ ಕಳಪೆ ಪ್ರದರ್ಶನ ನೀಡಿದರು.

ಶಕೀಬ್ ಅಲ್ ಹಸನ್ ಉತ್ತಮವಾಗಿ ಇನಿಂಗ್ಸ್​ ಪ್ರಾರಂಭಿಸಿದರು. ಸಿಕ್ಸರ್ ಮತ್ತು ಬೌಂಡರಿ ಗಳಿಸಿದರು. ಆದರೆ ತಮ್ಮ ಏಳನೇ ಎಸೆತವನ್ನು ಕವರ್ ಕಡೆಗೆ ಬಾರಿಸಲು ಹೋಗಿ ರೋಹಿತ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರಿಗೆ ಪಂದ್ಯವನ್ನು ಗೆಲ್ಲಿಸುವ ಅವಕಾಶ ಇದ್ದರು ಅವರು ತಾಳ್ಮೆ ತೋರಲಿಲ್ಲ. ಈ ಬಗ್ಗೆ

ಶಕೀಬ್ ವಿರುದ್ಧ ವೀರೇಂದ್ರ ಸೆಹ್ವಾಗ್ ಗರಂ

ಶಕೀಬ್ ಅಲ್ ಹಸನ್ ಔಟಾಗಿದ್ದನ್ನು ನೋಡಿದ ವೀರೇಂದ್ರ ಸೆಹ್ವಾಗ್, ತಮ್ಮ ವಿಕೆಟ್ ಒಪ್ಪಿಸಿದಕ್ಕಾಗಿ ವಾಗ್ದಾಳಿ ನಡೆಸಿದ್ದಾರೆ. ಕ್ರೀಸ್​ನಲ್ಲಿ ಸೆಟ್ ಆದ ಬ್ಯಾಟರ್​ಗೆ ಬೆಂಬಲಿಸಲು ವಿಫಲವಾಗಿದ್ದಕ್ಕೆ ಹಾಗೂ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಪಡೆಯದಿರುವ ಬಗ್ಗೆ ಸೆಹ್ವಾಗ್ ಟೀಕಿಸಿದರು. ಉತ್ತಮ ಆರಂಭ ಪಡೆದ ನಂತರ ಬಾಂಗ್ಲಾದೇಶದ ಮಾಜಿ ನಾಯಕ ಏಕೆ ಹಾಗೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

“ಕ್ರೀಸ್​ನಲ್ಲಿ ನಿಮ್ಮೊಂದಿಗೆ ಸೆಟ್ ಆಗಿರುವ ಬ್ಯಾಟರ್​ ಇದ್ದಾಗ, ಕನಿಷ್ಠ ಅವರನ್ನು ಬೆಂಬಲಿಸಿ. ಕನಿಷ್ಠ ತಾಳ್ಮೆಯಿಂದ ಇರಿ, ಸ್ವಲ್ಪ ಸಮಯ ಕಳೆಯಿರಿ. ಪಂದ್ಯದಿಂದ ಏನನ್ನಾದರೂ ಪಡೆಯಲು ಪ್ರಯತ್ನಿಸಿ. ಏಳು ಎಸೆತಗಳಲ್ಲಿ ಕೇವಲ 11 ರನ್ ಗಳಿ ಹಿಂತಿರುಗಿದ್ದಾರೆ “ಎಂದು ಸೆಹ್ವಾಗ್ ಹೇಳಿದ್ದಾರೆ.

ಶಕೀಬ್ ಅಲ್ ಹಸನ್ ಈಗ ಯುವ ಆಟಗಾರನಿಗಾಗಿ ತಮ್ಮ ಸ್ಥಾನ ಬಿಟ್ಟುಕೊಡಬೇಕು ಎಂದು ಹಿಂದಿನ ಕ್ರಿಕ್ಬಝ್ ಸಂದರ್ಶನದಲ್ಲಿ ಹೇಳಿದ್ದನ್ನು ವೀರೇಂದ್ರ ಸೆಹ್ವಾಗ್ ಪುನರುಚ್ಚರಿಸಿದರು. ಆಲ್ರೌಂಡರ್ ತನ್ನ ಹೆಸರು ಮತ್ತು ಖ್ಯಾತಿಯನ್ನು 18 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಗಳಿಸಿದ ಮಟ್ಟಕ್ಕೆ ಕಾಪಾಡಿಕೊಂಡಿಲ್ಲ ಎಂದು ಅವರು ಅರೋಪಿಸಿದರು.

ಇದನ್ನೂ ಓದಿ: Gautam Gambhir : ಕೊಹ್ಲಿಯನ್ನು ತಂಡದಿಂದ ಹೊರಗಿಡಿ; ಕೋಚ್​ ಆಗಲು ಗಂಭೀರ್​ ಒಡ್ಡಿದ್ದ ಷರತ್ತು ಒಪ್ಪಿದ ಬಿಸಿಸಿಐ

ಪ್ರತಿ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಸಾಧ್ಯವಿಲ್ಲ ಎಂಬುದನ್ನು ಶಕಿಬ್​ಗೆ ವೀರೇಂದ್ರ ಸೆಹ್ವಾಗ್ ನೆನಪಿಸಿದರು. 190+ ರನ್​ಗಳ ಗುರಿಯನ್ನು ಬೆನ್ನಟ್ಟುವಾಗ ಎಡಗೈ ಬ್ಯಾಟರ್ ಆಡಿದ ವಿಧಾನವನ್ನು ವೀರೂ ಪ್ರಶ್ನಿಸಿದರು.

ಅವರಿಗೆ ತುಂಬಾ ಅನುಭವವಿದೆ. ಅದನ್ನು ಹೆಚ್ಚು ಬಳಸಿಕೊಳ್ಳುತ್ತಿಲ್ಲವೇ ಅಥವಾ ಅವರು ಕಾಳಜಿ ವಹಿಸುವುದಿಲ್ಲವೇ? ಗುರಿ ತುಂಬಾ ದೊಡ್ಡದಾಗಿದೆ. ನಾನು ಸಿಕ್ಸರ್ ಗಳಿಸಿದ್ದೇನೆ ಮತ್ತು ಈಗ ನಾನು ಪ್ರತಿ ಎಸೆತದಲ್ಲಿ ಸಿಕ್ಸರ್ ಬಾರಿಸುತ್ತೇನೆ ಅವರು ಯೋಚಿಸುತ್ತಿದ್ದರೇ? ಹೀಗಾಗಿ ಕಳೆದ ಬಾರಿಯೂ ಹೇಳಿದ್ದೆ. ಅವರು ಯುವ ಆಟಗಾರರಿಗೆ ದಾರಿ ಮಾಡಿಕೊಡಬೇಕು ಎಂದು ವೀರೇಂದ್ರ ಸೆಹ್ವಾಗ್ ಹೇಳಿದರು.

Exit mobile version