Site icon Vistara News

Hardik Pandya : ಅವಮಾನ ಮಾಡಿದ ಪ್ರೇಕ್ಷಕರಿಂದಲೇ ಜೈಕಾರ ಹಾಕಿಸಿಕೊಂಡ ಹಾರ್ದಿಕ್ ಪಾಂಡ್ಯ!

Hardik Pandya

ಮುಂಬಯಿ: ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ವಿಶ್ವ ಕಪ್ ವಿಜೇತ ಭಾರತ ತಂಡಕ್ಕೆ ವಿಶೇಷ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಭಾರತ ತಂಡದ ಆಟಗಾರರಿಗೆ ಅಭಿಮಾನಿಗಳು ಜೈಕಾರ ಕೂಗಿದರು. ಈ ವೇಳೆ ವಿಶೇಷ ಅನಿಸಿದ್ದು ಹಾರ್ದಿಕ್ ಪಾಂಡ್ಯ. (Hardik Pandya) ಯಾಕೆಂದರೆ ಇದೇ ಸ್ಟೇಡಿಯಮ್​ನಲ್ಲಿ ಅವರು ಐಪಿಎಲ್​ ವೇಳೆ ಪ್ರೇಕ್ಷಕರಿಂದ ಲೇವಡಿಗೆ ಒಳಗಾಗಿದ್ದರು. ಅಲ್ಲೇ ಅವಮಾನದಿಂದ ಕುಸಿದಿದ್ದರು. ಅವರಿಂದಲೇ ಈಗ ಹಾರ್ದಿಕ್ ಜೈಕಾರ ಹಾಕಿಸಿಕೊಂಡು ಸಮಾಧಾನ ಮಾಡಿಕೊಂಡಿದ್ದಾರೆ.

ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​​ನಿಂd ಟೀಮ್ ಇಂಡಿಯಾ ಗುರುವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ನಂತರ, ಭಾರತೀಯ ತಂಡವು ನಾರಿಮನ್ ಪಾಯಿಂಟ್​ನಿಂದ ತೆರೆದ ಬಸ್​​ನಲ್ಲಿ ಮೆರವಣಿಗೆ ಮಾಡುವ ಮೂಲಕ ವಾಂಖೆಡೆ ಕ್ರೀಡಾಂಗಣಕ್ಕೆ ತೆರಳಿತು. ಈ ವೇಳೆ ಅಭಿಮಾನಿಗಳು ಭಾರತದ ಪ್ರಸಿದ್ಧ 2007 ಟಿ 20 ವಿಶ್ವಕಪ್ ಗೆಲುವಿನ ನೆನಪುಗಳನ್ನು ಮರುಸೃಷ್ಟಿಸಿದರು.

ಟಿ 20 ವಿಶ್ವಕಪ್​ನಲ್ಲಿ ಐರ್ಲೆಂಡ್ ವಿರುದ್ಧ ಭಾರತದ ಮೊದಲ ಪಂದ್ಯದೊಂದಿಗೆ ಪ್ರಾರಂಭವಾದ ಅಭಿಯಾನ ಮುಂಬೈನಲ್ಲಿ ತೆರೆದ ಬಸ್​ನಲ್ಲಿ ನಡೆದ ಮೆರವಣಿಗೆಯೊಂದಿಗೆ ಕೊನೆಗೊಂಡಿತು. ಆಟಗಾರರು ವಾಂಖೆಡೆ ಕ್ರೀಡಾಂಗಣ ತಲುಪುವ ಮೊದಲು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ತಮ್ಮ ಹೀರೋಗಳನ್ನು ಸ್ವಾಗತಿಸಿದರು.

ಈ ಮಧ್ಯೆ ವಾಂಖೆಡೆ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಹೆಸರನ್ನು ಕೂಗಿದರು. ಪಾಂಡ್ಯ ತಮ್ಮ ಅಂತಿಮ ಓವರ್​​ನಲ್ಲಿ 16 ರನ್ ಗಳನ್ನು ಕಾಪಾಡಿಕೊಂಡು ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಅವರು ಡೇವಿಡ್ ಮಿಲ್ಲರ್ ಅವರ ಪ್ರಮುಖ ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: Narendra Modi : ಭಾರತ ತಂಡಕ್ಕೆ ಆತಿಥ್ಯ ನೀಡಿದ ಬಳಿಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ನರೇಂದ್ರ ಮೋದಿ

ಕೇವಲ ಎರಡು ತಿಂಗಳ ಹಿಂದೆ ಮುಂಬೈ ಇಂಡಿಯನ್ಸ್ ಪರ ಪಾಂಡ್ಯ ಅವರ ನೀರಸ ನಾಯಕತ್ವ ಮತ್ತು ಒಟ್ಟಾರೆ ಪ್ರದರ್ಶನಕ್ಕಾಗಿ ದೂಷಣೆಗೆ ಒಳಗಾಗಿದ್ದರು. ಹೀಗಾಗಿ ಭಾರತದ ಟಿ 20 ವಿಶ್ವಕಪ್ ಗೆಲುವಿನ ನಂತರ ಪಾಂಡ್ಯ ಅವರ ಜೀವನವು ಅನೇಕ ರೀತಿಯಲ್ಲಿ ಬದಲಾವಣೆ ಕಂಡಿತು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಈಗಾಗಲೇ ಟಿ 20 ವಿಶ್ವಕಪ್ ಗೆಲುವಿನ ನಂತರ ಟಿ 20 ಐ ನಿವೃತ್ತಿಯನ್ನು ಘೋಷಿಸಿದ್ದಾರೆ. ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರಿಸಲಿದ್ದಾರೆ. ಕೊಹ್ಲಿ ತಮ್ಮ ಕೊನೆಯ ಟಿ 20 ಐ ಇನ್ನಿಂಗ್ಸ್ ನಲ್ಲಿ 76 ರನ್ ಗಳಿಸಿದ್ದರು.

ಕಠಿಣ ದಿನಗಳನ್ನು ನೆನಪಿಸಿಕೊಂಡ ಹಾರ್ದಿಕ್ ಪಾಂಡ್ಯ

ಸ್ಮರಣೀಯ ಗೆಲುವಿನ ನಂತರ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕಣ್ಣೀರು ಹಾಕಿದರು. 11 ವರ್ಷಗಳ ಬಳಿಕ ಐಸಿಸಿ ಟ್ರೋಫಿಯ ಬರ ನೀಗಿಸಿದರು. 2011 ರ ಏಕದಿನ ವಿಶ್ವಕಪ್ ಗೆಲುವಿನ ನಂತರ ಭಾರತದ ಮೊದಲ ಪ್ರಮುಖ ಐಸಿಸಿ ಪ್ರಶಸ್ತಿಯಾಗಿದೆ.

“ಇದು ತುಂಬಾ ಭಾವನಾತ್ಮಕ, ನಾವು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ. ಆದರೆ ಏನೂ ಕೆಲಸ ಮಾಡುತ್ತಿರಲಿಲ್ಲ. ಇಂದು ಇಡೀ ರಾಷ್ಟ್ರವು ಬಯಸಿದ್ದನ್ನು ನಾವು ಪೂರೈಸಿದ ದಿನ. ನನಗೆ ಹೆಚ್ಚು ವಿಶೇಷವಾಗಿದೆ, ನನ್ನ ಕೊನೆಯ 6 ತಿಂಗಳುಗಳು ಕಷ್ಟಕರವಾಗಿದ್ದವು. ನನಗೆ ತುಂಬಾ ಅನ್ಯಾಯವಾಗಿದೆ. ನಾನು ಕಷ್ಟಪಟ್ಟು ಕೆಲಸ ಮಾಡಿ ಸಾಧಿಸಿದೆ ಎಂದು ಹೇಳಿಕೊಂಡಿದ್ದಾರೆ.

Exit mobile version