Site icon Vistara News

Rohit Sharma : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

Rohit Sharma

ಬೆಂಗಳೂರು: ಹಾಲಿ ಆವೃತ್ತಿಯಲ್ಲಿ ಐಪಿಎಲ್​ನಲ್ಲಿ (IPL 2024) ಮುಂಬೈ ಇಂಡಿಯನ್ಸ್ (Mumbai Indian’s) ತಂಡದ ಆರಂಭಿಕ ಬ್ಯಾಟರ್​ ರೋಹಿತ್ ಶರ್ಮಾ (Rohit Sharma) ಮಿಂಚುತ್ತಿಲ್ಲ. ಅವರು ಕನಿಷ್ಠ ಮೊತ್ತಗಳಿಗೆ ಔಟ್​ ಆಗುತ್ತಿದ್ದಾರೆ. ಬಲಗೈ ಬ್ಯಾಟರ್​​ ಕಳೆದ ತಿಂಗಳು ಸಿಎಸ್ಕೆ (CSK) ವಿರುದ್ಧ ಶತಕ ಬಾರಿಸಿದರೂ ಅದನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಿಲ್ಲ. ಅಂತೆಯೇ ಕಳೆದ ಮೂರು ಇನಿಂಗ್ಸ್​ಗಳಲ್ಲಿ ರೋಹಿತ್ ಎರಡಂಕಿ ಮೊತ್ತವನ್ನು ಮುಟ್ಟಲು ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ, ಅವರು ಈ ಋತುವಿನಲ್ಲಿ ಇಲ್ಲಿಯವರೆಗೆ 10 ಇನಿಂಗ್ಸ್​​ಗಳಲ್ಲಿ 35 ಸರಾಸರಿ ಮತ್ತು 158.29 ಸ್ಟ್ರೈಕ್ ರೇಟ್​ನೊಂದಿಗೆ 315 ರನ್ ಗಳಿಸಿದ್ದಾರೆ.

ಟಿ 20 ವಿಶ್ವಕಪ್ 2024 ಸಮೀಪಿಸುತ್ತಿರುವುದರಿಂದ ರೋಹಿತ್ ಶರ್ಮಾ ಅವರ ಫಾರ್ಮ್ ಮತ್ತು ಅವರು ಔಟಾಗುತ್ತಿರುವ ವಿಧಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅನುಭವಿ ಆರಂಭಿಕ ಆಟಗಾರ ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಎಡಗೈ ವೇಗಿಗಳಿಂದ ಆಗಾಗ್ಗೆ ತೊಂದರೆಗೀಡಾಗಿದ್ದಾರೆ. ಟ್ರೆಂಟ್ ಬೌಲ್ಟ್ ಎರಡು ಬಾರಿ ವಿಕೆಟ್ ಪಡೆದರೆ, ರೋಹಿತ್ ಶರ್ಮಾ ಅವರನ್ನು ಸ್ಯಾಮ್ ಕರ್ರನ್, ಖಲೀಲ್ ಅಹ್ಮದ್ ಮತ್ತು ಮೊಹ್ಸಿನ್ ಖಾನ್ ತಲಾ ಒಂದು ಬಾರಿ ಔಟ್ ಮಾಡಿದ್ದಾರೆ.

ಮುಂಬರುವ ಟಿ 20 ವಿಶ್ವಕಪ್​​ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ ಮತ್ತು ಸಾಂಪ್ರದಾಯಿಕ ಎದುರಾಳಿ ತಂಡ ವಿಶ್ವದ ಅಗ್ರ ಎಡಗೈ ವೇಗಿಗಳಲ್ಲಿ ಒಬ್ಬರಾದ ಶಾಹೀನ್ ಅಫ್ರಿದಿ ಅವರನ್ನು ಹೊಂದಿದ್ದಾರೆ. ಇದಲ್ಲದೆ ಇತರ ನುರಿತ ಎಡಗೈ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಕೆಕೆಆರ್ ವಿರುದ್ಧದ ಮುಂಬೈ ಇಂಡಿಯನ್ಸ್ನ ಮುಂದಿನ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ಮಾಜಿ ಬ್ಯಾಟ್ಸ್ಮನ್ ವಾಸಿಮ್ ಜಾಫರ್ ಎಡಗೈ ವೇಗದ ಬೌಲರ್​ಗಳ ವಿರುದ್ಧ ರೋಹಿತ್ ಶರ್ಮಾ ಯಾಕೆ ವೈಫಲ್ಯ ಹೊಂದುತ್ತಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ.

ಎಡಗೈ ವೇಗಿಗಳ ವಿರುದ್ಧ ಅವರು ಸಾಖಷ್ಟು ಸಮಸ್ಯೆ ಹೊಂದಿದ್ದಾರೆ. ಅವರು ತನ್ನ ಮುಂಭಾಗದ ಕಾಲನ್ನು ಇಡುವ ರೀತಿಯಿಂದಲೇ ತೊಂದರೆಯಾಗುತ್ತಿದೆ. ಎಲ್ಲರಿಗೂ ಅದು ಅರ್ಥವಾಗಿದೆ. ಬಲಗೈ ಬೌಲರ್​ಗಳ ಸಹ ಅವರನ್ನು ಔಟ್ ಮಾಡಲು ಒಂದು ಮಾರ್ಗ ಕಂಡುಕೊಂಡಿದ್ದಾರೆ. ಆದರೆ ಎಡಗೈ ಆಟಗಾರರು ಕೋನವನ್ನು ಸೃಷ್ಟಿಸಿ ಬೌಲಿಂಗ್ ಮಾಡುತ್ತಾರೆ. ಅದು ಅವರಿಗೆ ಕಷ್ಟಕರವಾಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅವರು ಅವರ ಹಿಂದಕ್ಕೆ ಹೋಗಿ ಚೆಂಡನ್ನು ಎದುರಿಸುತ್ತಾರೆ. ಕೆಲವೊಮ್ಮೆ ಸ್ವಿಂಗ್ ಆಗುವುದನ್ನು ತಪ್ಪಿಸಲು ಮುಂದಕ್ಕೆ ನಡೆಯುತ್ತಾರೆ,” ಎಂದು ಜಾಫರ್ ಹೇಳಿದ್ದಾರೆ.

ಇದನ್ನೂ ಓದಿ: Rohit Sharm : ರೋಹಿತ್ ಶರ್ಮಾ ದೌರ್ಬಲ್ಯವನ್ನು ಬೊಟ್ಟು ಮಾಡಿ ತೋರಿಸಿದ ವಾಸಿಮ್​ ಜಾಫರ್​

ರೋಹಿತ್​ಗೆ ತನ್ನದೇ ಆದ ಸಮಸ್ಯೆಗಳಿದ್ದವು. ಟ್ರೆಂಟ್ ಬೌಲ್ಟ್ ಅವರನ್ನು ಲಾಂಗ್ ಸ್ವಿಂಗ್​ನೊಂದಿಗೆ ಔಟ್ ಮಾಡುತ್ತಾರೆ. ಖಲೀಲ್ ವಿರುದ್ಧವೂ ತನ್ನ ಚಲನೆಯನ್ನು ತಪ್ಪಾಗಿ ಮಾಡಿದರು. ನಾನು ಇದನ್ನು ಯೋಜಿತ ವಿಕೆಟ್​ ಎಂದು ಕರೆಯುವುದಿಲ್ಲ. ಆದರೂ ಅವರ ಆಟದಲ್ಲಿ ಒಂದು ಲೋಪದೋಷವಿದೆ. ಅದು ರೋಹಿತ್​ಗೆ ತಿಳಿದಿದೆ. ಅವರು ಪ್ರತಿದಾಳಿ ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ಆಕ್ರಮಣಕಾರಿ ಕೌಶಲ್ಯದ ಮೂಲಕ ಸಮಸ್ಯೆಯನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ, “ಎಂದು ಜಾಫರ್ ಹೇಳಿದ್ದಾರೆ.

ಸಲಹೆ ನೀಡಿದ ಜಾಫರ್​

ಇದೇ ವೇಳೆ ಜಾಫರ್​ ಬ್ಯಾಟಿಂಗ್ ಸಲಹೆಯನ್ನೂ ನೀಡಿದ್ದಾರೆ. ಆಕ್ರಮಣಕಾರಿ ಮಾರ್ಗವನ್ನು ತೆಗೆದುಕೊಳ್ಳಬಾರದು. ಬದಲಿಗೆ ಮೊದಲ ಎರಡು ಓವರ್​ಗಳಲ್ಲಿ ಚೆಂಡನ್ನು ಟೈಮಿಂಗ್ ಮಾಡುವತ್ತ ಗಮನ ಹರಿಸಬೇಕು ಎಂದು ಜಾಫರ್ ರೋಹಿತ್ಗೆ ಸಲಹೆ ನೀಡಿದರು.

ರೋಹಿತ್ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ತಮ್ಮ ಇನ್ನಿಂಗ್ಸ್ ನ ಆರಂಭದಲ್ಲಿಯೇ ಚೆಂಡನ್ನು ಬಾರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಚೆಂಡನ್ನು ತುಂಬಾ ಜೋರಾಇ ಹೊಡೆಯಲು ಪ್ರಯತ್ನಿಸುವ ಬದಲು ಒಂದೆರಡು ಓವರ್​ಗಳನ್ನು ತೆಗೆದುಕೊಳ್ಳಬಹುದು ಮತ್ತು ಸಮಯವನ್ನು ನೋಡಬಹುದು. “ಎಂದು ಅವರು ಹೇಳಿದರು.

Exit mobile version