Site icon Vistara News

Ram Mandir: ಬಾಬರಿ ಮಸೀದಿ ಇದ್ದ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಿಲ್ಲವೇ?

Wasn't a Ram Mandir built on the site of the Babri Masjid?

ನವದೆಹಲಿ: ಬಾಬರಿ ಮಸೀದಿ (Babri Masjid) ಇದ್ದ ಜಾಗದಲ್ಲಿ ರಾಮ ಮಂದಿರ (Ram Mandir) ನಿರ್ಮಾಣವಾಗಿಲ್ಲವೇ? ಹೌದು ಇಂಥದೊಂದು ಪ್ರಶ್ನೆ ಮೂಡಲು ಕಾರಣವಿದೆ. ಉದ್ದವ್ ಠಾಕ್ರೆ ಬಣದ ಸಂಜಯ್ ರಾವುತ್ ಹಾಗೂ ಕಾಂಗ್ರೆಸ್ ಪಕ್ಷದ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವರು ರಾಮ ಮಂದಿರವನ್ನು ಬಾಬರಿ ಮಸೀದಿ ಇದ್ದ ಜಾಗದಿಂದ 2ರಿಂದ 3 ಕಿ.ಮೀ ದೂರದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಷ್ಟು ದೂರದಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿದ್ದರೆ, ಬಾಬರಿ ಮಸೀದಿಯನ್ನು ಏಕೆ ಧ್ವಂಸ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಹಲವರು ಗೂಗಲ್ ಮ್ಯಾಪ್‌ಗಳನ್ನು (Google Map) ಷೇರ್ ಮಾಡಿಕೊಂಡು, ಗೊಂದಲವನ್ನು ಮೂಡಿಸುತ್ತಿದ್ದಾರೆ. ಆದರೆ, ಫ್ಯಾಕ್ಟ್‌ಚೆಕರ್ಸ್ ಪ್ರಕಾರ(Fact Check), ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ.

ಫ್ಯಾಕ್ಟ್ ಚೆಕ್ ಮಾಡುವ ಅಲ್ಟ್ ನ್ಯೂಸ್ ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿದ್ದು, ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದೆ. ಗೂಗಲ್ ಮ್ಯಾಪ್ ಮತ್ತು ಗೂಗಲ್ ಅರ್ಥ್ ಪ್ರೋ ಬಳಸಿಕೊಂಡು ಬಾಬರಿ ಮಸೀದಿ ಜಾಗ ಮತ್ತು ಮಂದಿರ ನಿರ್ಮಾಣ ಆಗುತ್ತಿರುವ ಜಾಗವನ್ನು ಗುರುತಿಸಲಾಗಿದೆ ಮತ್ತು ಮಸೀದಿ ಇದ್ದ ಜಾಗದಲ್ಲೇ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಖಚಿತಪಡಿಸಲಾಗಿದೆ.

ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ, ಅದನ್ನು “ಬಾಬರ್ ಮಸೀದಿ” ಎಂದು ಉಲ್ಲೇಖಿಸಲಾಗಿದೆ ಮತ್ತು “ಬಾಬರಿ ಮಸೀದಿ” ಅಲ್ಲ. ಈಗ, ಗೂಗಲ್ ಮ್ಯಾಪ್‌ನಲ್ಲಿ ಹುಡುಕಿದಾಗ, ಸೀತಾ-ರಾಮ್ ಬಿರ್ಲಾ ದೇವಾಲಯವನ್ನು ರಾಮ ಮಂದಿರ ಎಂದು “ತಪ್ಪಾಗಿ ಗುರುತಿಸಲಾಗಿದೆ” ಎಂದು ಕಂಡುಬಂದಿದೆ. ಅಲ್ಲದೆ, ಈ ಮಸೀದಿಯ ಜಾಗದಲ್ಲಿ ಬಾಬರಿ ಮಸೀದಿಯ ಚಿತ್ರವನ್ನು ಅಪ್‌ಲೋಡ್ ಮಾಡಲಾಗಿದೆ. ನಾನಾ ರೀತಿಗಳಿಂದ ಫ್ಯಾಕ್ಟ್ ಚೆಕ್ ಮಾಡಿರುವ ಫ್ಯಾಕ್ಟ್ ನ್ಯೂಸ್, ಬಾಬರಿ ಮಸೀದಿ ಇದ್ದ ಜಾಗದಲ್ಲೇ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿದೆ.

ನಾಯಕರು ಹೇಳಿದ್ದೇನು?

ಬಾಬರಿ ಮಸೀದಿ ಇದ್ದ ಜಾಗದಿಂದ ಮೂರು ಕಿ.ಮೀ ದೂರದಲ್ಲಿ ಮಂದಿರವನ್ನು ಏಕೆ ನಿರ್ಮಾಣ ಮಾಡಲಾಗುತ್ತಿದೆ? ಹಾಗಿದ್ದರೆ, ಹಿಂದೂ-ಮುಸ್ಲಿಮ್ ನಡುವೆ ದ್ವೇಷವನ್ನು ಏಕೆ ಹರಡಲಾಯಿತು ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಅವರು, ಕೋಮ ವಿವಾದವನ್ನು ಸೃಷ್ಟಿಸುವುದಕ್ಕಾಗಿಯೇ ಮಸೀದಿಯನ್ನು ಧ್ವಂಸ ಮಾಡಲಾಯಿತು. ಬಿಜೆಪಿ, ವಿಎಚ್‌ಪಿ ಮತ್ತು ಆರೆಸ್ಸೆಸ್‌ಗೆ ಮಸೀದಿಯನ್ನು ಧ್ವಂಸ ಮಾಡುವುದಷ್ಟೇ ಬೇಕಾಗಿತ್ತು ಹೊರತು ರಾಮ ಮಂದಿರ ನಿರ್ಮಾಣವಲ್ಲ. ಯಾಕೆಂದರೆ, ಮಸೀದಿಯನ್ನು ಧ್ವಂಸ ಮಾಡದೇ ಹೊರತು ಅದು ಹಿಂದೂ-ಮುಸ್ಲಿಮ್ ವಿವಾದವಾಗಿ ಮಾರ್ಪಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Fact Check: ಅಮುಲ್‌ನಿಂದ ʼಶರಮ್‌ʼ ಹೆಸರಿನ ಚೀಸ್ ಬಿಡುಗಡೆ?

Exit mobile version