ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore ) ತಂಡವು ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಅದ್ಭುದ ಸಾಧನೆ ಮಾಡಿದೆ. ಆದಾಗ್ಯೂ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 6 ಸೋಲುಗಳನ್ನು ಅನುಭವಿಸಿರುವ ಫಾಫ್ ಡು ಪ್ಲೆಸಿಸ್ ತಂಡ ಪ್ಲೇಆಫ್ ಹಂತದಿಂದ ಬಹುತೇಕ ಹೊರಕ್ಕೆ ಬಿದ್ದಿದೆ. ಆದರೆ ಕೋಚ್ ಆ್ಯಂ ಡಿ ಫ್ಲವರ್ ಮಾತ್ರ ಪುಟಿದೇಳುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಪಂದ್ಯದಿಂದ ಸಕಾರಾತ್ಮಕ ಅಂಶಗಳನ್ನು ತೋರಿಸುತ್ತೇವೆ ಹಾಗೂ ಬಲವಾಗಿ ಮರಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
288 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್ಗೆ 80 ರನ್ಗಲ ಜೊತೆಯಾಟ ನೀಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಇನ್ನಷ್ಟು ಉತ್ತಮವಾಗಿ ಆಡಿತ್ತು. “ನಾವು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ನೊಂದಿಗೆ ಉತ್ತಮ ಹೋರಾಟ ಸಂಘಟಿಸಿದ್ದೆವು. ಆ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ. ನಾವು ಪಂದ್ಯವನ್ನು ಕಳೆದುಕೊಂಡಿದ್ದೇವೆ. ಆದರೆ ನಾವು ಹೋರಾಡಿದ ರೀತಿ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ “ಎಂದು ಆ್ಯಂಡಿ ಫ್ಲವರ್ ಹೇಳಿದರು.
ಬ್ಯಾಟ್ನೊಂದಿಗೆ ಅಂತಹ ಅದ್ಭುತ ಪ್ರದರ್ಶನದ ನಂತರ ತಂಡವು ಪಂದ್ಯದಿಂದ ಸಾಕಷ್ಟು ವಿಶ್ವಾಸ ಪಡೆದುಕೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಸಕ್ತ ಋತುವಿನ ಪ್ಲೇಆಫ್ಗೆ ಅರ್ಹತೆ ಪಡೆಯುವ ಸಲುವಾಗಿ ಪ್ರತಿ ಪಂದ್ಯವೂ ಈಗ ತಂಡಕ್ಕೆ ನಾಕೌಟ್ ಪಂದ್ಯವಾಗಲಿದೆ ಎಂದು ಮುಖ್ಯ ಕೋಚ್ ಹೇಳಿದ್ದಾರೆ.
ಕಠಿಣ ರಾತ್ರಿ
ಇದು ಮೈದಾನದಲ್ಲಿ ನಿಜವಾಗಿಯೂ ಕಠಿಣ ರಾತ್ರಿಯಾಗಿತ್ತು, ಏಕೆಂದರೆ ಆ ತಂಡ ಸಾಕಷ್ಟು ಪ್ರಬಲವಾಗಿ ಆಡಿತು. ಹೀಗಾಗಿ ನಮ್ಮ ಅವಕಾಶಗಳು ಕ್ಷೀಣಿಸಿದವು. ನಾವು ಯೋಚಿಸುತ್ತೇವೆ ಮತ್ತು ನಾವು ಬಲವಾಗಿ ಹಿಂತಿರುಗುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: IND vs BNG: ಬಾಂಗ್ಲಾ ಟಿ20 ಸರಣಿಗೆ ಆಯ್ಕೆಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್
ಕೇವಲ 35 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಏಳು ಸಿಕ್ಸರ್ಗಳ ಸಹಾಯದಿಂದ 83 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ ಕಾರ್ತಿಕ್ ಅವರಿಗೆ ದೊಡ್ಡ ಮಟ್ಟದ ಪ್ರಶಂಸೆಯನ್ನು ಫ್ಲವರ್ ವ್ಯಕ್ತಪಡಿಸಿದರು. “ದಿನೇಶ್ ಕಾರ್ತಿಕ್ ನಿಜವಾಗಿಯೂ ವಿಶ್ವಕಪ್ ತಂಡಕ್ಕೆ ಸೇರುವಷ್ಟು ಮಟ್ಟಿಗೆ ಉತ್ತೇಜನ ಪಡೆಯುತ್ತಿದ್ದಾರೆ. ಮೈದಾನದಲ್ಲಿ ಇನ್ನಷ್ಟು ಉತ್ತಮಗೊಳ್ಳುತ್ತಿದ್ದಾರೆ” ಎಂದು ಮುಖ್ಯ ಕೋಚ್ ಹೇಳಿದರು.