ನಾಗ್ಪುರ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ 52.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವ (Weather Report) ಎರಡು ದಿನಗಳ ನಂತರ ಮಹಾರಾಷ್ಟ್ರದ ನಾಗ್ಪುರದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಮೀರಿದೆ. ಗುರುವಾರ ಇದು 56 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ನಾಗ್ಪುರದಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸ್ಥಾಪಿಸಿದ ನಾಲ್ಕು ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ (ಎಡಬ್ಲ್ಯುಎಸ್) ಎರಡರಲ್ಲಿ ಇದುವರೆಗಿನ ಗರಿಷ್ಠ ತಾಪಮಾನ ದಾಖಲಾಗಿದ್ದು 50 ಡಿಗ್ರಿ ಸೆಲ್ಸಿಯಸ್ ಮೀರಿದೆ, ಇದು ವಾಯುವ್ಯ ದೆಹಲಿಯ ಮುಂಗೇಶ್ವರ ಎಡಬ್ಲ್ಯೂಎಸ್ ಪ್ರದೇಶವನ್ನೂ ಕೂಡ ಮೀರಿಸಿದೆ.
ಮಹಾರಾಷ್ಟ್ರದ ಉತ್ತರ ಅಂಬಾಜಾರಿ ರಸ್ತೆಯ ರಾಮದಾಸ್ಪೇಟ್ನ ಪಿಡಿಕೆವಿಯಲ್ಲಿರುವ 24 ಹೆಕ್ಟೇರ್ ತೆರೆದ ಕೃಷಿ ಕ್ಷೇತ್ರದಲ್ಲಿರುವ ಹವಾಮಾನ ಕೇಂದ್ರದಲ್ಲಿ 56 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸೋನೆಗಾಂವ್ನ ಪ್ರಾದೇಶಿಕ ಹವಾಮಾನ ಕೇಂದ್ರದಲ್ಲಿ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದೆ. ವಾರ್ಧಾ ರಸ್ತೆಯ ಖಾಪ್ರಿಯಲ್ಲಿರುವ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕಾಟನ್ ರಿಸರ್ಚ್ ಪ್ರದೇಶದ ಹೊಲಗಳಲ್ಲಿನ ಅಂಗನವಾಡಿ ಕೇಂದ್ರವು 44 ಡಿಗ್ರಿ ಸೆಲ್ಸಿಯಸ್ ಮತ್ತು ರಾಮ್ಟೆಕ್ ಎಡಬ್ಲ್ಯೂಎಸ್ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ.
ದೆಹಲಿಯಲ್ಲಿ ದಾಖಲೆ ಮುರಿದ ಬಿಸಿಗಾಳಿ
ಐತಿಹಾಸಿಕ 52.9 ಡಿಗ್ರಿ ಸೆಲ್ಸಿಯಸ್ ದಾಖಲಿಸಿದ ನಂತರ ದೆಹಲಿ ಸುದ್ದಿಗೆ ಗ್ರಾಸವಾಯಿತು. ಹೀಗಾಗಿ ಮುಂಗೇಶ್ವರ ಅಂಕಿ ಅಂಶಗಳನ್ನು ಮರುಪರಿಶೀಲನೆ ಮಾಡಲು ಮುಂದಾಗಿದೆ. ದೆಹಲಿಯ ಹೊರಗಿನ ಪ್ರದೇಶಗಳಲ್ಲಿನ ತನ್ನ ಮೂರು ಹವಾಮಾನ ಕೇಂದ್ರಗಳಲ್ಲಿ ಸುಮಾರು 50 ಡಿಗ್ರಿ ಸೆಲ್ಸಿಯಸ್ ತಲುಪಿದ ಒಂದು ದಿನದ ನಂತರ ತಾಪಮಾನದಲ್ಲಿ ದಿಢೀರ್ ಏರಿಕೆ ಕಂಡಿದೆ. ಮುಂಗೇಶ್ಪುರ, ನರೇಲಾ ಮತ್ತು ನಜಾಫ್ಗಡ ಹವಾಮಾನ ಕಚೇರಿಗಳು ಇತ್ತೀಚೆಗೆ ತೀವ್ರ ತಾಪಮಾನ ವರದಿ ಮಾಡುತ್ತಿವೆ. ಈ ಹಿಂದೆ ರಾಜಸ್ಥಾನದ ಚುರುವಿನಲ್ಲಿ 50.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಗರಿಷ್ಠವಾಗಿತ್ತು.
ದೆಹಲಿಯ ತೀವ್ರ ತಾಪಮಾನಕ್ಕೆ ರಾಜಸ್ಥಾನದಿಂದ ಬರುವ ಬಿಸಿಗಾಳಿ ಪ್ರಮುಖ ಕಾರಣ ಎಂದು ತಜ್ಞರು ಹೇಳಿದ್ದಾರೆ. ಸ್ಕೈಮೇಟ್ ವೆದರ್ನ ಉಪಾಧ್ಯಕ್ಷ ಮಹೇಶ್ ಪಲಾವತ್ ಮಾತನಾಡಿ “ಖಾಲಿ ಭೂಮಿ ಇರುವ ತೆರೆದ ಪ್ರದೇಶಗಳಲ್ಲಿ ವಿಕಿರಣ ಹೆಚ್ಚಾಗಿದೆ. ನೇರ ಸೂರ್ಯನ ಬೆಳಕು ಮತ್ತು ನೆರಳಿನ ಕೊರತೆಯು ಈ ಪ್ರದೇಶಗಳನ್ನು ಮಿತಿಮೀರಿ ಬಿಸಿಯಾಗಿಸುತ್ತದೆ.
ಇದನ್ನೂ ಓದಿ: Money Guide: ವೇತನದ ಜತೆಗೆ ಮಾಸಿಕವಾಗಿ 9,250 ರೂ. ಆದಾಯ ಬೇಕೆ? ಈ ಯೋಜನೆಯಲ್ಲಿ ಹೂಡಿಕೆ ಮಾಡಿ
ಒಂದು ಪ್ರದೇಶದ ಗರಿಷ್ಠ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿದ್ದಾಗ ಅಲ್ಲಿ ಉಷ್ಣ ಮಾರುತದ ಪ್ರಭಾವ ಎಂದು ಗುರುತಿಸಲಾಗುತ್ತದೆ. ಹವಾಮಾನ ಇಲಾಖೆ ಪ್ರಕಾರ ಎರಡು ಅಥವಾ ಅದಕ್ಕಿಂತ ಹೆಚ್ಚು ದಿನಗಳವರೆಗೆ ಗರಿಷ್ಠ ತಾಪಮಾನವು ಬಯಲು ಪ್ರದೇಶಗಳಿಗೆ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್. ಕರಾವಳಿ ಪ್ರದೇಶಗಳಲ್ಲಿ 37 ಡಿಗ್ರಿ ಸೆಲ್ಸಿಯಸ್ ಅಥವಾ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ದಾಖಲಾದರೆ ಅದನ್ನು ಉಷ್ಣ ಮಾರುತ ಎನ್ನಲಾಗುತ್ತದೆ
ಮಳೆಯೇ ಪರಿಹಾರ
ಗುರುವಾರ, ನೈಋತ್ಯ ಮಾನ್ಸೂನ್ ಕೇರಳ ಕರಾವಳಿ ಮತ್ತು ಈಶಾನ್ಯದ ಕೆಲವು ಭಾಗಗಳಿಗೆ ನಿರೀಕ್ಷೆಗಿಂತ ಮುಂಚಿತವಾಗಿ ಆಗಮಿಸಿದೆ. ಭಾರತದಾದ್ಯಂತ ತನ್ನ ನಾಲ್ಕು ತಿಂಗಳ ಪ್ರಯಾಣದ ಪ್ರಾರಂಭವಾಗಿದೆ. ಕೇರಳದಲ್ಲಿ ಸಾಮಾನ್ಯವಾಗಿ ಜೂನ್ 1 ರಂದು ಮಾನ್ಸೂನ್ ಪ್ರಾರಂಭವಾಗುತ್ತದೆ ಮತ್ತು ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿ ಜೂನ್ 5 ರಂದು ಮಾನ್ಸೂನ್ ಪ್ರಾರಂಭವಾಗುತ್ತದೆ.
ಭಾನುವಾರ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ರೆಮಲ್ ಚಂಡಮಾರುತವು ಮಾನ್ಸೂನ್ ಬಂಗಾಳ ಕೊಲ್ಲಿಯ ಕಡೆಗೆ ತಿರುಗುತ್ತದೆ. ಹವಾಮಾನ ಕಚೇರಿಯ ಅಂಕಿಅಂಶಗಳ ಪ್ರಕಾರ, ಮೇ 31 ರೊಳಗೆ ಕೇರಳದಲ್ಲಿ ಮಾನ್ಸೂನ್ ಆಗಮನವಾಗಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿತ್ತು. ಇದು ಈ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯೊಂದಿಗೆ ಹೊಂದಿಕೆಯಾಗಿದೆ, ಇದರ ಪರಿಣಾಮವಾಗಿ ಮೇ ತಿಂಗಳಲ್ಲಿ ಹೆಚ್ಚುವರಿ ಮಳೆಯಾಗಿದೆ.