Site icon Vistara News

Paris Olympics 2024 : ಟೋಕಿಯೊದಲ್ಲಿ ನಡೆದ 2020ರ ಒಲಿಂಪಿಕ್ಸ್​ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Paris Olympics 2024

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​​ 2024 (Paris Olympics 2024) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಭಾರತದ ನಿಯೋಗ ಪ್ಯಾರಿಸ್​ ತಲುಪಿ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಅಭ್ಯಾಸ ಆರಂಭಿಸಿದ್ದಾರೆ. ಭಾರತೀಯ ಕ್ರೀಡಾಭಿಮಾನಿಗಳು ಭಾರತ ಈ ಬಾರಿ ಹೆಚ್ಚು ಪದಕಗಳನ್ನು ಗೆಲ್ಲಬೇಕು ಎಂದು ಹಾರೈಸುತ್ತಿದ್ದಾರೆ. 33ನೇ ಒಲಿಂಪಿಕ್ಸ್ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಪ್ರಮುಖ ಆತಿಥೇಯ ನಗರವಾಗಿದ್ದರೂ, ಫ್ರಾನ್ಸ್ ನಾದ್ಯಂತ ಇತರ 16 ನಗರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಮುಂಚೂಣಿಯಲ್ಲಿದ್ದು, ಭಾರತೀಯ ತಂಡ ಸಾಕಷ್ಟು ಬಲಿಷ್ಠವಾಗಿದೆ. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಶರತ್ ಕಮಲ್ ಧ್ವಜಧಾರಿಗಳಾಗಲಿದ್ದು, ಶೂಟರ್ ಗಗನ್ ನಾರಂಗ್ ಭಾರತದ ಚೆಫ್-ಡಿ-ಮಿಷನ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

2022ರ ಏಷ್ಯನ್ ಗೇಮ್ಸ್​​ನಲ್ಲಿ 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ಭಾರತ, ಭಾಗವಹಿಸುತ್ತಿರುವ ಎಲ್ಲ ಸ್ಪರ್ಧೆಗಳಲ್ಲಿ ಕಠಿಣ ಹೋರಾಟ ನೀಡುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಅವರು ಭಾರತೀಯ ತಂಡಕ್ಕೆ ಉತ್ಸಾಹ ಭರಿತ ಮಾತಿನ ಪ್ರೋತ್ಸಾಹವನ್ನೂ ನೀಡಿದ್ದಾರೆ. ಹೀಗಾಗಿ ಪದಕಗಳ ನಿರೀಕ್ಷೆ ಹೆಚ್ಚಾಗಿದೆ. ಏತನ್ಮಧ್ಯೆ 2021ರಲ್ಲಿ ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆದ 2020ರ ಆವೃತ್ತಿಯ ಒಲಿಂಪಿಕ್ಸ್​ನಲ್ಲಿ ಭಾರತ ಸಾಧನೆಯ ಬಗ್ಗೆ ಒಂದು ಪಕ್ಷಿ ನೋಟ ಹರಿಸೋಣ.

ಎಷ್ಟು ಪದಕಗಳು ಬಂದಿದ್ದವು?

202ರ ಒಲಿಂಪಿಕ್ಸ್​ನಲ್ಲಿ ಭಾರತ ಒಟ್ಟು 7 ಪದಕಗಳನ್ನು ಗೆದ್ದುಕೊಂಡಿತ್ತು. ಅದರಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳು ಇದ್ದವು. ಜಾವೆಲಿನ್ ಎಸೆತಗಾಗ ನೀರಜ್ ಚೋಪ್ರಾ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಎನಿಸಿಕೊಂಡರು. ಪಿ.ವಿ.ಸಿಂಧು ತಮ್ಮ ಎರಡನೇ ಒಲಿಂಪಿಕ್ ಪದಕ (ಬೆಳ್ಳಿ) ಗೆದ್ದರೆ, ಪುರುಷರ ಹಾಕಿ ತಂಡವು 41 ವರ್ಷಗಳ ನಂತರ ಒಲಿಂಪಿಕ್ ಪದಕವನ್ನು (ಕಂಚು) ಗೆದ್ದು ಸಾಧನೆ ಮಾಡಿತು.

ಚಿನ್ನ ಗೆದ್ದ ನೀರಜ್ ಚೋಪ್ರಾ

ಭಾರತದ ಒಲಿಂಪಿಕ್ಸ್​ ಇತಿಹಾಸದಲ್ಲಿ ಅಥ್ಲೆಟಿಕ್ಸ್​ನಲ್ಲಿ ನೀರಜ್ ಚೋಪ್ರಾ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. 2020 ರಲ್ಲಿ ಟೋಕಿಯೊದಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್​ನಲ್ಲಿ ಅವರು ಜಾವೆಲಿನ್ ಎಸೆತದಲ್ಲಿ 87.58 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ಚಿನ್ನದ ಪದಕ ಗೆದ್ದರು. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ಚ್ ಎರಡನೇ ಸ್ಥಾನ ಪಡೆದರೆ, ವಿಟೆಜ್ಸ್ಲಾವ್ ವೆಸೆಲಿ ಕಂಚಿನ ಪದಕ ಗೆದ್ದರು. ಬೀಜಿಂಗ್​ನಲ್ಲಿ ನಡೆದ 2008 ರ ಬೇಸಿಗೆ ಒಲಿಂಪಿಕ್ಸ್​​ನಲ್ಲಿ ಶೂಟರ್​ ಅಭಿನವ್ ಬಿಂದ್ರಾ ಅವರ ಯಶಸ್ಸಿನ ನಂತರ ಒಲಿಂಪಿಕ್ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್​ ನೀರಜ್ ಚೋಪ್ರಾ.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಡಿಮೆ ಪದಕಗಳು ಸಿಗುವುದು ಯಾಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ

ಮೀರಾಬಾಯಿ ಚಾನು- ಬೆಳ್ಳಿ ಪದಕ

ಟೋಕಿಯೋ ಒಲಿಂಪಿಕ್ಸ್​​ನ ಮಹಿಳೆಯರ 49 ಕೆ.ಜಿ ವೇಟ್​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಮೀರಾಬಾಯಿ ಚಾನು ಭಾರತಕ್ಕೆ ಪದಕದ ಖಾತೆ ತೆರೆದಿದಿದ್ದರು. 2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದ ಬಳಿಕ ಇದು ಭಾರತದ ಎರಡನೇ ವೇಟ್ ಲಿಫ್ಟಿಂಗ್ ಒಲಿಂಪಿಕ್ ಪದಕವಾಗಿದೆ.

ಪಿ.ವಿ.ಸಿಂಧೂ- ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್​ನಲ್ಲಿ ಕಂಚಿನ ಪದಕ

ಬ್ಯಾಡ್ಮಿಂಟನ್ ಕ್ವೀನ್ ಪಿ.ವಿ.ಸಿಂಧು ಸುಶೀಲ್ ಕುಮಾರ್ ನಂತರ ಎರಡು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಎರಡನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮಹಿಳೆಯರ ಬ್ಯಾಡ್ಮಿಂಟನ್​ ಸಿಂಗಲ್ಸ್​ನಲ್ಲಿ ಪಿ.ವಿ.ಸಿಂಧು ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ 21-13, 21-15 ಅಂತರದಿಂದ ಸೋತಿದ್ದರು.

ರವಿ ಕುಮಾರ್ ದಹಿಯಾ: ಕುಸ್ತಿಯಲ್ಲಿ ಬೆಳ್ಳಿ ಪದಕ

ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿಯ ಫೈನಲ್​ನಲ್ಲಿ 23 ವರ್ಷದ ರವಿ ಕುಮಾರ್ ದಹಿಯಾ ಎರಡು ವಿಶ್ವ ಚಾಂಪಿಯನ್ ರಷ್ಯಾದ ಜಾವೂರ್ ಉಗೆವ್ ವಿರುದ್ಧ ಫೈನಲ್​ನಲ್ಲಿ ಸೋತು ಬೆಳ್ಳಿ ಪದಕ ಗೆದ್ದರು. ಇದು ಒಲಿಂಪಿಕ್ ಇತಿಹಾಸದಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಒಂಬತ್ತನೇ ಬೆಳ್ಳಿ ಪದಕ. 2012 ರ ಲಂಡನ್​​ನಲ್ಲಿ ಸುಶೀಲ್ ಕುಮಾರ್ ನಂತರ ಕುಸ್ತಿಯಲ್ಲಿ ಎರಡನೇ ಬೆಳ್ಳಿ ಪದಕ. ರವಿ ಕುಮಾರ್ ದಹಿಯಾ ಅವರು ಸೆಮಿಫೈನಲ್​​ನಲ್ಲಿ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ಅವರನ್ನು ಸೋಲಿಸುವ ಮೂಲಕ ಒಲಿಂಪಿಕ್ ಪದಕ ಖಚಿತಪಡಿಸಿಕೊಂಡಿದ್ದರು.

ಬಜರಂಗ್ ಪೂನಿಯಾ; ಕುಸ್ತಿಯಲ್ಲಿ ಕಂಚಿನ ಪದಕ

ಕುಸ್ತಿಪಟು ಬಜರಂಗ್ ಪೂನಿಯಾ ಟೋಕಿಯೊ 2020ರಲ್ಲಿ ಪದಕ ಗೆದ್ದ ಮೂರನೇ ಭಾರತೀಯ. ಪುರುಷರ 65 ಕೆ.ಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಜಕಿಸ್ತಾನದ ದೌಲೆಟ್ ನಿಯಾಜ್ಬೆಕೊವ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದರು.

ಲವ್ಲಿನಾ ಬೊರ್ಗೊಹೈನ್ – ಬಾಕ್ಸಿಂಗ್​ನಲ್ಲಿ ಕಂಚಿನ ಪದಕ (64-69 ಕೆಜಿ)

ಮಹಿಳೆಯರ 69 ಕೆಜಿ ವಿಭಾಗದಲ್ಲಿ ಟರ್ಕಿಯ ಅಗ್ರ ಶ್ರೇಯಾಂಕದ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸೆಮಿಫೈನಲ್​​ನಲ್ಲಿ ಸೋತ ನಂತರ ಲೊವ್ಲಿನಾ ಬೊರ್ಗೊಹೈನ್ ಟೋಕಿಯೊ 2020 ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಲೊವ್ಲಿನಾ ಬೊರ್ಗೊಹೈನ್ ಕ್ವಾರ್ಟರ್ ಫೈನಲ್​ನಲ್ಲಿ ಚೈನೀಸ್ ತೈಪೆಯ ನಿಯೆನ್-ಚಿನ್ ಚೆನ್ ಅವರನ್ನು ಸೋಲಿಸಿ ಪದಕದ ಭರವಸೆ ಮೂಡಿಸಿದ್ದರು.

ಪುರುಷರ ಹಾಕಿ ತಂಡ ; ಕಂಚಿನ ಪದಕ

1980ರ ಮಾಸ್ಕೋ ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದ ನಂತರ ಭಾರತೀಯ ಪುರುಷರ ಹಾಕಿ ತಂಡವು 41 ವರ್ಷಗಳ ಕಾಲ ಪದಕವೇ ಗೆದ್ದಿರಲಿಲ್ಲ. ಕೊನೆಗೂ 2020ರಲ್ಲಿ ಕಂಚಿನ ಪದಕ ಗೆದ್ದಿತು. ಮೂರನೇ ಸ್ಥಾನ ಪಂದ್ಯದ ಒಂದು ಹಂತದಲ್ಲಿ 3-1ರಿಂದ ಹಿನ್ನಡೆ ಅನುಭವಿಸಿದ್ದ ಭಾರತ, ಜರ್ಮನಿಯನ್ನು 5-4 ಅಂತರದಿಂದ ಮಣಿಸಿತ್ತು. 1968 ಮತ್ತು 1972ರ ಒಲಿಂಪಿಕ್ಸ್ ಬಳಿಕ ಇದು ಅವರ ಮೂರನೇ ಒಲಿಂಪಿಕ್ ಕಂಚಿನ ಪದಕ.

Exit mobile version