ಗಳೂರು: ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಶನಿವಾರ 10ನೇ ದಿನ ಸ್ಪರ್ಧೆಗಳು ನಡೆಯಲಿವೆ. ಆ ದಿನ ಭಾರತಕ್ಕೆ ಹೆಚ್ಚಿನ ಸ್ಪರ್ಧೆಗಳು ಇಲ್ಲ. ಗಾಲ್ಫ್ ಹಾಗೂ ಫ್ರೀಸ್ಟೈಲ್ ಕುಸ್ತಿ ಬಿಟ್ಟರೆ ಬೇರೆ ಯಾವುದೇ ಸ್ಪರ್ಧೆಯಲ್ಲಿ ಭಾರತೀಯರು ಇಲ್ಲ. 14ನೇ ದಿನವಾದ ಶುಕ್ರವಾರ ಸಂಜೆಯ ತನಕವೂ ಭಾರತಕ್ಕೆ ಹೆಚ್ಚಿನ ಲಾಭವೇನೂ ಆಗಿಲ್ಲ. ಆದರೆ, ಜಾವೆಲಿನ್ ಎಸೆತದಲ್ಲಿ ಬೆಳ್ಳಿಯ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರ ಬಗ್ಗೆಯೇ ದಿನವಿಡೀ ಚರ್ಚೆಗಳು ನಡೆದಿವೆ.
At 21, India's Aman Sehrawat is the youngest Indian to win an individual medal at the Olympics 🇮🇳🥉#Paris2024 pic.twitter.com/W9UYDWX9aI
— Olympic Khel (@OlympicKhel) August 9, 2024
ಶುಕ್ರವಾರ ಪುರುಷರ ಕುಸ್ತಿಯ 57 ಕೆ.ಜಿ ವಿಭಾಗದಲ್ಲಿ ಅಮನ್ ಗೆದ್ದ ಕಂಚಿನ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿದೆ. ಅದರಲ್ಲಿ 5 ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ. ಬೆಳ್ಳಿಯನ್ನು ನೀರಜ್ ಗೆದ್ದಿದ್ದರೆ, ಶೂಟರ್ ಮನು ಭಾಕರ್ ಎರಡು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೊಂದು ಮಿಶ್ರ ತಂಡದಲ್ಲಿ ಸರಬ್ಜೋತ್ ಸಿಂಗ್ ಜತೆಗೆ. ಪುರುಷರ ಶೂಟಿಂಗ್ನಲ್ಲಿ ಸ್ವಪ್ನಿಲ್ ಕುಸಾಳೆ ಮತ್ತೊಂದು ಪದಕ ಗೆದ್ದಿದ್ದರು. ಮತ್ತೊಂದು ಕಂಚಿನ ಪದಕ ಹಾಕಿ ತಂಡದ ಮೂಲಕ ದೊರಕಿದೆ. ಇದೀಗ ಅಮನ್ ಒಂದು ಪದಕ ಗೆದ್ದಿದ್ದಾರೆ.
ಇನ್ನು ಶುಕ್ರವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು 4×400 ಮೀಟರ್ ರಿಲೇಯ ಫೈನಲ್ಗೆ ಅರ್ಹತೆ ಪಡೆಯಲು ವಿಫಲವಾಗಿವೆ. ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿಥ್ಯಾ ರಾಮರಾಜ್, ಎಂ.ಆರ್.ಪೂವಮ್ಮ ಮತ್ತು ಪ್ರಾಚಿ ಅವರನ್ನೊಳಗೊಂಡ ಮಹಿಳಾ ತಂಡ 16 ತಂಡಗಳ ಪೈಕಿ 3:32:51 ಸಮಯದೊಂದಿಗೆ 15ನೇ ಸ್ಥಾನ ಪಡೆಯಿತು.
ಕ್ಯೂಬಾ ಮಾತ್ರ 3:33:99 ಸಮಯದೊಂದಿಗೆ ಅವರಿಗಿಂತ ಕೆಳಗಿತ್ತು. ಭಾರತವು ಆರಂಭದಿಂದಲೂ ಹಿಂದೆ ಬಿದ್ದಿತು, ನಂತರ ಅವರು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುನೈಟೆಡ್ ಸ್ಟೇಟ್ಸ್ 3: 21:44 ಸಮಯದೊಂದಿಗೆ ಅಗ್ರಸ್ಥಾನವನ್ನು ಗಳಿಸಿತು, ಇದು ಅವರ ಋತುವಿನ ಅತ್ಯುತ್ತಮ ಸಮಯವಾಗಿದೆ. ಗ್ರೇಟ್ ಬ್ರಿಟನ್ ಕೂಡ 3:24:72 ಸಮಯದೊಂದಿಗೆ ತಮ್ಮ ಋತುವಿನ ಅತ್ಯುತ್ತಮ ಪ್ರದರ್ಶನವನ್ನು ನೀಡಿತು.
ಫ್ರಾನ್ಸ್ (3:24:73), ಜಮೈಕಾ (3:24:92), ಬೆಲ್ಜಿಯಂ (3:24:92), ನೆದರ್ಲ್ಯಾಂಡ್ಸ್ (3:25:03), ಐರ್ಲೆಂಡ್ (3:25:05) ಮತ್ತು ಕೆನಡಾ (3:25:77) ಮಹಿಳಾ ರಿಲೇ ಸ್ಪರ್ಧೆಯ ಫೈನಲ್ಗೆ ಪ್ರವೇಶಿಸಿದ ಇತರ ತಂಡಗಳು.
ಇದನ್ನೂ ಓದಿ: Neeraj Chopra : ವಿನೇಶ್ ಪೋಗಟ್ಗೆ ಅನರ್ಹತೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ; ಏನಂದ್ರು ಅವರು?
ಭಾರತದ ಪುರುಷರಿಗೂ ಹಿನ್ನಡೆ
ಅಮೋಲ್ ಜಾಕೋಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್, ಮುಹಮ್ಮದ್ ಅಜ್ಮಲ್ ಮತ್ತು ಮುಹಮ್ಮದ್ ಅನಾಸ್ ಅವರನ್ನೊಳಗೊಂಡ ಪುರುಷರ ತಂಡವು ಕಠಿಣ ಹೋರಾಟ ನಡೆಸಿತು. ಆದರೆ 3: 00.58 ಸಮಯದೊಂದಿಗೆ 10 ನೇ ಸ್ಥಾನ ಪಡೆದ ನಂತರ ಸ್ಪರ್ಧೆಯಿಂದ ಹೊರಬಿದ್ದಿತು. ಅರ್ಹತಾ ಸುತ್ತಿನಲ್ಲಿ ಬೋಟ್ಸಾನಾ 2:57:76 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆಯಿತು.
ಪುರುಷರ 4*400 ಮೀಟರ್ ರಿಲೇ ಫೈನಲ್ನಲ್ಲಿ ಗ್ರೇಟ್ ಬ್ರಿಟನ್ (2:58:88), ಯುನೈಟೆಡ್ ಸ್ಟೇಟ್ಸ್ (2:59:15), ಜಪಾನ್ (2:59:48), ಫ್ರಾನ್ಸ್ (2:59:53), ಬೆಲ್ಜಿಯಂ (2:59:84), ಜಾಂಬಿಯಾ (3:00:08) ಮತ್ತು ಇಟಲಿ (3:00:26) ತಂಡಗಳು ಫೈನಲ್ಗೇರಿವೆ.
ಆಗಸ್ಟ್ 10ರಂದು ಭಾರತದ ಸ್ಪರ್ಧೆಗಳು ಈ ರೀತಿ ಇವೆ
ಗಾಲ್ಫ್ 12:30ಕ್ಕೆ: ಮಹಿಳಾ ರೌಂಡ್ 4 (ಪದಕದ ಸ್ಪರ್ಧೆ)
ಕುಸ್ತಿ 03:00: ಮಹಿಳಾ ಫ್ರೀಸ್ಟೈಲ್ 76 ಕೆಜಿ 1/8 ಫೈನಲ್. ರೀತಿಕಾ ಹೂಡಾ