Site icon Vistara News

IPL 2024 : ಐಪಿಎಲ್​ ಟಿಕೆಟ್​ ಖರೀದಿ ಹೇಗೆ ಮತ್ತು ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ

When and where to buy IPL 2024 tickets ?

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ರ 17 ನೇ ಆವೃತ್ತಿಯ ಭಾಗಶಃ ವೇಳಾಪಟ್ಟಿ ಬಿಸಿಸಿಐ ಫೆಬ್ರವರಿ 22 ರಂದು ಬಹಿರಂಗಪಡಿಸಿದೆ. ಮುಂಬರುವ ಆವೃತ್ತಿಯು ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 7 ರವರೆಗಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ.

ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಗಳು ಭಾರತದಾದ್ಯಂತ 9 ವಿವಿಧ ಸ್ಥಳಗಳಲ್ಲಿ 17 ದಿನಗಳ ಕಾಲ ನಡೆಯಲಿದೆ. ಪಂದ್ಯಗಳು ಮಾರ್ಚ್ 22 ರಿಂದ ಏಪ್ರಿಲ್ 7 ರವರೆಗೆ ನಡೆಯಲಿದೆ. ಭಾರತದ ಸಾರ್ವತ್ರಿಕ ಚುನಾವಣೆಯ ದಿನಾಂಕಗಳು ಖಚಿತವಾದ ನಂತರ ಐಪಿಎಲ್ 2024 ರ ಉಳಿದ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಳ್ಳಲಿದೆ.

ಮುಂಬರುವ ಆವೃತ್ತಿಯ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ ಮತ್ತು ಟಿಕೆಟ್ ಗಳನ್ನು ಪಡೆಯಲು ಕಾಯುತ್ತಿದ್ದಾರೆ. ಹೀಗಾಗಿ ಐಪಿಎಲ್ 2024 ರ ಟಿಕೆಟ್ ಮಾರಾಟದ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿ ನೀಡಲಾಗಿದೆ.

ಟಿಕೆಟ್ ಗಳು ಆನ್ ಲೈನ್ ನಲ್ಲಿ ಯಾವಾಗ ಮಾರಾಟವಾಗಬಹುದು ?

2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಟಿಕೆಟ್ ಮಾರಾಟವು ಮಾರ್ಚ್ ಮೊದಲ ವಾರದಲ್ಲಿ ಆನ್​ಲೈನ್​ನಲ್ಲಿ ಪ್ರಾರಂಭವಾಗಲಿದೆ ಎಂಬ ಊಹಾಪೋಹಗಳಿವೆ. ಆದಾಗ್ಯೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟಿಕೆಟ್ ಮಾರಾಟದ ಅಧಿಕೃತ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ.

ಹೇಗೆ ಖರೀದಿಸಬಹುದು?

ಐಪಿಎಲ್ 2024 ಪಂದ್ಯಗಳ ಟಿಕೆಟ್​ಗಳನ್ನು ಖರೀದಿಸಲು, ಅಭಿಮಾನಿಗಳು ಅಧಿಕೃತ ಐಪಿಎಲ್ ವೆಬ್​ಸೈಟ್​ ಅಥವಾ ಬುಕ್​​ಮೈ ಶೋ ಅಥವಾ ಪೇಟಿಎಂ ಇನ್​ಸೈಡರ್​ನಂಥ ವಿಶ್ವಾಸಾರ್ಹ ಫ್ಲ್ಯಾಟ್​ಫಾರ್ಮ್​ಗಳೀಗೆ ಭೇಟಿ ನೀಡಬೇಕು. ಏತನ್ಮಧ್ಯೆ, ಬುಕ್ ಮೈ ಶೋ ಕೇವಲ ಮುಂಬೈ ಇಂಡಿಯನ್ಸ್ ತಂಡದ ಆಟಗಳಿಗಾಗಿ ನೋಂದಣಿ ಪೇಜ್​ ಪ್ರಾರಂಭಿಸಿದೆ.

ಇದನ್ನೂ ಓದಿ : Neil Wagner : ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್​​ನ ವೇಗದ ಬೌಲರ್​

ನಿರೀಕ್ಷಿತ ಟಿಕೆಟ್ ಬೆಲೆಗಳು ಎಷ್ಟು ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಟಿಕೆಟ್ ಬೆಲೆಗಳನ್ನು ಸೀಟುಗಳ ಪ್ರಕಾರ, ಪಂದ್ಯದ ಜನಪ್ರಿಯತೆ ಮತ್ತು ಸ್ಥಳದಂತಹ ವಿವಿಧ ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಬೆಲೆಗಳು ಸಾಮಾನ್ಯವಾಗಿ 1000 ರೂಪಾಯಿಗಳಿಂದ ಹಲವಾರು ಸಾವಿರ ರೂಪಾಯಿಗಳವರೆಗೆ ಇರುತ್ತವೆ. ಇದು ವಿಭಿನ್ನ ಆದ್ಯತೆಗಳು ಮತ್ತು ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಒದಗಿಸುತ್ತದೆ.

ಐಪಿಎಲ್ 2024ರ ವೇಳಾಪಟ್ಟಿ ಇಲ್ಲಿದೆ

ಮುಂಬರುವ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಎಂಎಸ್ ಧೋನಿ ಅವರ ಕೊನೆಯ ಸೀಸನ್ ಎಂದು ಹೇಳಲಾಗುತ್ತದೆ. ಪ್ರಸ್ತುತ, ಸಿಎಸ್ಕೆ ಮತ್ತು ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಐದು ಪ್ರಶಸ್ತಿಗಳೊಂದಿಗೆ ಜಂಟಿಯಾಗಿ ಯಶಸ್ವಿ ತಂಡಗಳಾಗಿವೆ.

Exit mobile version