ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics 2024 ) ಗುರುವಾರ ಭಾರತಕ್ಕೆ ನಿರಾಶಾದಾಯಕ ದಿನವಾಗಿತ್ತು. ರಾತ್ರಿ ನಡೆದ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ನಲ್ಲಿ ಪಿವಿ ಸಿಂಧೂ ಸೋಲುವ ಮೂಲಕ ದೊಡ್ಡ ಆಘಾತವಾಗಿದ್ದರೆ, ಪದಕ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಿದ್ದ ಹಲವು ಸ್ಪರ್ಧಿಗಳು ಆರಂಭಿಕ ಹಂತದಲ್ಲೇ ಸೋಲನ್ನು ಅನುಭವಿಸಿದರು. ಶೂಟಿಂಗ್ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ತಂದುಕೊಟ್ಟರು. ಬಾಕ್ಸಿಂಗ್ಸ್ನಲ್ಲಿ ನಿಖತ್ ಝರೀನ್ ಮತ್ತು ಶೂಟಿಂಗ್ನಲ್ಲಿ ಸಿಫ್ಟ್ ಕೌರ್ ಸಮ್ರಾ ಬರಿಗೈಯಲ್ಲಿ ಬಂದಿರುವುದು ಬೇಸರದ ವಿಷಯವಾಗಿದೆ. ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್ ಫೈನಲ್ಸ್ನಿಂದ ಅಚ್ಚರಿಯ ನಿರ್ಗಮನ ಕಂಡರು.
Terrible Twist of Fates 💔
— Johns (@JohnyBravo183) August 1, 2024
1 August 2021: PV Sindhu defeated He Bing Jiao in Bronze Medal match in Tokyo Olympics.
1 August 2024: He Bing Jiao defeated PV Sindhu in Round of 16 match in Paris Olympics.#Badminton pic.twitter.com/FY1WRnJ7L2
ಸ್ವಪ್ನಿಲ್ ಕುಸಾಲೆ 2024 ರ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೂರನೇ ಪದಕ ಗೆಲ್ಲುವ ಮೂಲಕ ದಿನದ ಅತ್ಯುತ್ತಮ ಆರಂಭ ನೀಡಿದರು. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆದ್ದರು. ಅಥ್ಲೆಟಿಕ್ಸ್, ಶೂಟಿಂಗ್ ಮತ್ತು ಬಿಲ್ಲುಗಾರಿಕೆಯಲ್ಲಿ ಇನ್ನೂ ಹೆಚ್ಚಿನ ರೋಮಾಂಚಕಾರಿ ಆಟ ಉಳಿದಿರುವುದರಿಂದ ಭಾರತೀಯ ತಂಡವು ನಿರಾಶೆಯನ್ನು ಮರೆಯಬಹುದು. ಏಷ್ಯನ್ ಪದಕ ವಿಜೇತರಾದ ತಜಿಂದರ್ ಪಾಲ್ ಸಿಂಗ್ ತೂರ್ ಮತ್ತು ಪಾರುಲ್ ಚೌಧರಿ ನಾಳೆ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ. ಹೀಗೆ ಆಗಸ್ಟ್ 2ರಂದು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ.
ಆರ್ಚರಿ
ಆರ್ಚರಿ ಮಿಶ್ರ ತಂಡ ಆರ್ 16 : ಭಾರತ ವಿರುದ್ಧ ಇಂಡೋನೇಷ್ಯಾ – ಮಧ್ಯಾಹ್ನ 1:19ಕ್ಕೆ
ಮಿಶ್ರ ತಂಡ ಕ್ವಾರ್ಟರ್ ಫೈನಲ್ : ಸಂಜೆ 5:45ಕ್ಕೆ
ಮಿಶ್ರ ತಂಡ ಸೆಮಿಫೈನಲ್ – ಸಂಜೆ 7:00ಕ್ಕೆ
ಮಿಶ್ರ ತಂಡ ಪದಕ ಪಂದ್ಯಗಳು – 7:54ಕ್ಕೆ
ಅಥ್ಲೆಟಿಕ್ಸ್
ಮಹಿಳೆಯರ 5000 ಓಟ: ಮೀಟರ್ ರೌಂಡ್ -1 – ಪಾರುಲ್ ಚೌಧರಿ, ಅಂಕಿತಾ ಧ್ಯಾನಿ – ರಾತ್ರಿ 9:40
ಪುರುಷರ ಶಾಟ್ ಪುಟ್ ಅರ್ಹತಾ ಸುತ್ತು: ತಜಿಂದರ್ ಪಾಲ್ ಸಿಂಗ್ ತೂರ್ – 11:40 PM
ಬ್ಯಾಡ್ಮಿಂಟನ್
ಪುರುಷರ ಸಿಂಗಲ್ಸ್ : ಲಕ್ಷ್ಯ ಸೇನ್, 11 :40ಕ್ಕೆ
ಗಾಲ್ಫ್
ಗಾಲ್ಫ್ ಪುರುಷರ ವೈಯಕ್ತಿಕ ಸುತ್ತು 2 : ಮಧ್ಯಾಹ್ನ 12:30
ಹಾಕಿ
ಭಾರತೀಯ ಪುರುಷರ ತಂಡದ ವಿರುದ್ಧ ಆಸ್ಟ್ರೇಲಿಯಾ. ಸಂಜೆ 4:45
ಜೂಡೋ
ಮಹಿಳೆಯರ 78+ ಕೆ.ಜಿ ವಿಭಾಗದ 32ನೇ ಸುತ್ತು; ತುಲಿಕಾ ಮಾನ್ ವಿರುದ್ಧ ಇಡಾಲಿಸ್ ಒರ್ಟಿಜ್
ರೋಯಿಂಗ್
ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್ – ಮಧ್ಯಾಹ್ನ 1:48
ಸೇಲಿಂಗ್ ಮಹಿಳಾ ಡಿಂಗಿ ರೇಸ್ (3,4) – ಮಧ್ಯಾಹ್ನ 3:45ಕ್ಕೆ
ಮಧ್ಯಾಹ್ನ ಪುರುಷರ ಡಿಂಗಿ ರೇಸ್ (3,4) – 7:05 ಸಂಜೆ ಕ್ಕೆ
ಶೂಟಿಂಗ್
ಮಹಿಳೆಯರ 25 ಮೀಟರ್ ಪಿಸ್ತೂಲ್ ಮಹಿಳಾ ಅರ್ಹತಾ ಸುತ್ತು : ಮಧ್ಯಾಹ್ನ 12:30
ಪುರುಷರ ಸ್ಕೀಟ್ ಅರ್ಹತಾ ದಿನ 1 – ಮಧ್ಯಾಹ್ನ 1:00 ಗಂಟೆಗೆ
ಮಹಿಳೆಯರ 25 ಮೀಟರ್ ಪಿಸ್ತೂಲ್, ಅರ್ಹತಾ; ಮಧ್ಯಾಹ್ನ 3:30ಕ್ಕೆ