Site icon Vistara News

Manu Bhaker : ಭಾರತಕ್ಕೆ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಪದಕ ತಂದುಕೊಟ್ಟ ಮನು ಭಾಕರ್ ಯಾರು? ಅವರ ಹಿನ್ನೆಲೆಯೇನು?

Manu Bhaker

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್​ನಲ್ಲಿ 22 ವರ್ಷದ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಖಾತೆ ತೆರೆದಿದ್ದಾರೆ. ಭಾರತದ ಅತಿದೊಡ್ಡ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಭಾಕರ್​ ನಿರೀಕ್ಷೆಯಂತೆ ಪದಕ ಗೆದ್ದಿದ್ದು, ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ಅಲ್ಲದೆ 2016 ಮತ್ತು 2020ರ ರಿಯೋ ಒಲಿಂಪಿಕ್ಸ್​ನಲ್ಲಿ ಭಾರತ ಶೂಟಿಂಗ್​ನಲ್ಲಿ ಪದಕ ಗೆಲ್ಲದ ಕಾರಣ ದೊಡ್ಡ ಕೊರತೆಯನ್ನು ನೀಗಿಸಿದ್ದಾರೆ.

ಮನು ಭಾಕರ್​ 221.7 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದು ಸಂಭ್ರಮಿಸಿದ್ದಾರೆ. ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ 4ನೇ ಸ್ಥಾನ ಪಡೆದ ಬಳಿಕ ಅವರು ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಒಲಿಂಪಿಕ್ಸ್ ಪ್ರಾರಂಭವಾದ ದಿನದಿಂದ ಎಲ್ಲರ ಕಣ್ಣುಗಳು ಭಾಕರ್ ಮೇಲೆ ನೆಟ್ಟಿದ್ದವು. ಪಿ.ವಿ.ಸಿಂಧು, ಶ್ರೀಜಾ ಅಕುಲಾ ಮತ್ತು ನಿಖಾತ್ ಝರೀನ್ ಎರಡನೇ ದಿನ ಮೇಲುಗೈ ಸಾಧಿಸಿದರೂ ಭಾಕರ್​ ಪದಕವನ್ನೇ ಗೆದ್ದರು.

ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್​​ನಲ್ಲಿ ಅರ್ಹತಾ ಸುತ್ತಿನಲ್ಲಿ ಬಂದೂಕು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಮನು ಬೇಸರಗೊಂಡಿದ್ದರು. ನಿರಾಶೆಯಿಂದ ಹೊರಬರಲು ಮನುವಿಗೆ ಸಾಕಷ್ಟು ಸಮಯ ಬೇಕಾಗಿತ್ತು. ಇದೀಗ ಖುಷಿ ಹೆಚ್ಚಿಸಿಕೊಂಡಿದ್ದಾರೆ.

ಸ್ಪರ್ಧೆ ನಡೆಯುವ ವೇಳೆ ಮನು ಬೆಳ್ಳಿಯ ಪದಕದ ಸನಿಹವೇ ಇದ್ದರು. ಕೊನೆಯ ಐದು ಸುತ್ತುಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಅವರು ಎರಡನೇ ಸ್ಥಾನಕ್ಕೆ ಏರಿದ್ದರು. ಆದರೆ ಆದರೆ, ಅಂತಿ ಸುತ್ತಿನಲ್ಲಿ ಕೊರಿಯಾದ ಯೆಗಿ 10.5 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರು. ಕೊರಿಯಾದ ಓಹ್ ಯೆ ಜಿನ್ 243.2 ಅಂಕಗಳ ಮೂಲಕ ಚಿನ್ನದ ಪದಕ ಗೆದ್ದರು.

ಮನು ಭಾಕರ್ ಯಾರು ಮತ್ತು ಅವರ ಪ್ರಯಾಣ ಹೇಗಿತ್ತು?

ಭಾರತದಲ್ಲಿ ಅತಿ ಹೆಚ್ಚು ಕ್ರೀಡಾಪಟುಗಳನ್ನು ಹೊಂದಿರುವ ರಾಜ್ಯವಾದ ಹರಿಯಾಣದ ಮೂಲದ ಮನು ಶೂಟಿಂಗ್ ನಲ್ಲಿ ಪಾರಮ್ಯ ಮೆರೆದಿದಿದ್ದಾರೆ. ಅವರ ತವರು ರಾಜ್ಯವು ಬಾಕ್ಸರ್​ಗಳು ಮತ್ತು ಕುಸ್ತಿಪಟುಗಳನ್ನು ಉತ್ಪಾದಿಸುವಲ್ಲಿ ಹೆಸರುವಾಸಿಯಾಗಿದ್ದರೂ, ಭಾಕರ್ ತಮ್ಮ ಗಮನವನ್ನು ಶೂಟಿಂಗ್ ರೇಂಜ್​​ ಕಡೆಗೆ ಇಟ್ಟರು.

ಭಾಕರ್ ಅವರ ಪ್ರಯಾಣವು ಪಿಸ್ತೂಲ್ ನ ಗುರಿಯೊಂದಿಗೆ ಆರಂಭಗೊಂಡರೂ ಅವರು ಬಹುಮುಖ ಪ್ರತಿಭೆ. ಟೆನಿಸ್, ಸ್ಕೇಟಿಂಗ್ ಮತ್ತು ಥಂಗ್ ಮುಂತಾದ ಸಮರ ಕಲೆಯಲ್ಲಿ ತೊಡಗಿಸಿಕೊಂಡರು. ಆ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಂಸೆಗಳನ್ನು ಗಳಿಸಿದರು. 2016 ರ ರಿಯೋ ಒಲಿಂಪಿಕ್ಸ್​ ವೇಳೆಯ ಪ್ರೇರಣೆಯಿಂದ ಅವರು ಶೂಟಿಂಗ್ ಕಡೆಗೆ ಹೊರಳಿದರು.

ಇದನ್ನೂ ಓದಿ: Manu Bhaker: ಭಾರತದ ಹೆಮ್ಮೆಯ ಪುತ್ರಿ ; ಮನು ಭಾಕರ್​ಗೆ ಪದಕ ಗೆಲ್ಲಲು ಭಗವದ್ಗೀತೆಯೇ ಪ್ರೇರಣೆ

ಕೇವಲ ಹದಿನಾಲ್ಕು ವರ್ಷದವಳಾಗಿದ್ದಾಗ ಭಾಕರ್ ಶೂಟಿಂಗ್ ಅಭ್ಯಾಸ ಆರಂಭಿಸಿದ್ದರು. ತಂದೆಯ ಮನವೊಲಿಸಿದ ಅವರು ಶೂಟಿಂಗ್ ಕ್ಷೇತ್ರಕ್ಕೆ ಪ್ರವೇಶ ಪಡದರು. ರಾಷ್ಟ್ರೀಯ ಚಾಂಪಿಯನ್​​ಶಿಪ್​​ನಲ್ಲಿ ಅನುಭವಿ ಒಲಿಂಪಿಯನ್ ಹೀನಾ ಸಿಧು ವಿರುದ್ಧ ಅದ್ಭುತ ಗೆಲುವು ಗಳಿಸಿದಾಗ ಅವರು ಶೂಟಿಂಗ್​ ಕ್ಷೇತ್ರವು ಅವರ ಕಡೆಗೆ ಗಮನ ಸೆಳೆಯಿತು.

ಅವರಿಗೆ ಅಂತರರಾಷ್ಟ್ರೀಯ ಮೆಚ್ಚುಗೆಯು ತ್ವರಿತವಾಗಿ ಬಂತು. ಏಷ್ಯನ್ ಜೂನಿಯರ್ ಚಾಂಪಿಯನ್​ಶಿಪ್​ನಲ್ಲಿ ಅವರು ಬೆಳ್ಳಿ ಗೆದ್ದರು. ಅವರ ಶೂಟಿಂಗ್​ ಅವರ ಪ್ರಯಾಣವು ಗೆಲುವುಗಳು ಮತ್ತು ಆಘಾತಗಳಿಂದಲೂ ಕೂಡಿದೆ. ಆದಾಗ್ಯೂ ಯೂತ್ ಒಲಿಂಪಿಕ್ಸ್​ನಲ್ಲಿ ಅವರ ಚಿನ್ನದ ಕ್ಷಣವು ಅವರ ಸ್ಥಾನಮಾನವನ್ನು ಗಟ್ಟಿಗೊಳಿಸಿತು. ಹದಿನಾರನೇ ವಯಸ್ಸಿನಲ್ಲಿ, ಅವರು ಶೂಟಿಂಗ್​ನಲ್ಲಿ ಮಿಂಚಿದರು.

ಅನುಭವಿ ಕೋಚ್​​ ಜಸ್ಪಾಲ್ ರಾಣಾ ಅವರ ಮಾರ್ಗದರ್ಶನದಲ್ಲಿ, ಭಾಕರ್ ಅವರ ಪ್ರಯಾಣ ಗಟ್ಟಿಯಾಯಿತು. ಒಲಿಂಪಿಕ್ ಆಯ್ಕೆ ಟ್ರಯಲ್ಸ್​ನಲ್ಲಿ ಪ್ರಬಲ ಪ್ರದರ್ಶನವು ಭಾರತೀಯ ಶೂಟಿಂಗ್ ತಂಡದಲ್ಲಿ ಅವರ ಸ್ಥಾನ ಭದ್ರಪಡಿಸಿತು.

Exit mobile version