Site icon Vistara News

Rohit Sharma : ರೋಹಿತ್​​ಗೂ ಫೈಟರ್​ ಹೃತಿಕ್​ಗೂ ಏನು ಸಂಬಂಧ? ಹಾಗಾದರೆ ಈ ಪೋಸ್ಟರ್ ಯಾಕೆ?

Rohit Sharma

ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಧಿಕೃತ ಪ್ರಸಾರಕರು ಭಾರತೀಯ ನಾಯಕ ರೋಹಿತ್ ಶರ್ಮಾ (Rohith Sharma) ಅವರನ್ನು 2024 ರ ಬಾಲಿವುಡ್ ಆ್ಯಕ್ಷನ್ ಚಿತ್ರ ‘ಫೈಟರ್’ ನ ಹೃತಿಕ್ ರೋಷನ್ ಅವರ ಪ್ರಮುಖ ಪಾತ್ರಕ್ಕೆ ಹೋಲಿಸಿದ್ದಾರೆ. ಪ್ರಸಾರಕರು ತಮ್ಮ ಸಾಮಾಜಿಕ ಮಾಧ್ಯಮ ಫ್ಲ್ಯಾಟ್​ಫಾರ್ಮ್​ಗಳಲ್ಲಿ ‘ಸ್ಕ್ವಾಡ್ರನ್ ಲೀಡರ್’ ಶರ್ಮಾ ಅವರ ಎಐ-ರಚಿಸಿದ ಚಿತ್ರವನ್ನುರೋಹಿತ್​ಗೆ ಹೋಲಿಕೆ ಮಾಡಿ ಹಂಚಿಕೊಂಡಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ನಾಯಕ ಮತ್ತು ಬಾಲಿವುಡ್ ಚಿತ್ರದ ಪ್ರಮುಖ ಪಾತ್ರದ ನಡುವೆ ಆಸಕ್ತಿದಾಯಕ ಹೋಲಿಕೆಯನ್ನು ಮಾಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ಭಾರತದ ತವರು ಸರಣಿಯ ಆರಂಭಿಕ ದಿನ ಮತ್ತು ಬಾಲಿವುಡ್ ಚಿತ್ರ ‘ಫೈಟರ್’ ಬಿಡುಗಡೆಯ ನೆನಪಿಗಾಗಿ ಜಿಯೋ ಸಿನೆಮಾ ಆಸಕ್ತಿದಾಯಕ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಅಲ್ಲಿ ಅವರು ಭಾರತೀಯ ನಾಯಕ ರೋಹಿತ್ ಶರ್ಮಾ ಅವರನ್ನು ಚಿತ್ರದ ಪ್ರಮುಖ ಪಾತ್ರವಾಗಿ ತೋರಿಸಿದೆ.

ಏರ್ ಇಂಡಿಯಾ ರಚಿಸಿದ ಚಿತ್ರದಲ್ಲಿ ರೋಹಿತ್​ ಶರ್ಮಾ, ಸ್ಕ್ವಾಡ್ರನ್ ಲೀಡರ್​ ಸಮವಸ್ತ್ರವನ್ನು ಧರಿಸಿರುವುದನ್ನು ಕಾಣಬಹುದು. ಇದು ಹೃತಿಕ್ ರೋಷನ್ ಅವರ ಭಾರತೀಯ ವಾಯುಪಡೆ ಆಧಾರಿತ ಚಿತ್ರದ ಪ್ರಮುಖ ಪಾತ್ರವಾಗಿದೆ.

ಅದೇ ದಿನ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಪ್ರವಾಸಿ ಇಂಗ್ಲೆಂಡ್ ತಂಡವನ್ನು 64.3 ಓವರ್​ಗಳಲ್ಲಿ ಕೇವಲ 246 ರನ್​​ಗಳಿಗೆ ಆಲೌಟ್ ಮಾಡಿತು. ಸ್ಪಿನ್ನರ್​ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮತ್ತೊಮ್ಮೆ ಪ್ರವಾಸಿತ ತಂಡ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು. ಅಕ್ಷರ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಸಮಯೋಚಿತ ಪ್ರದರ್ಶನ ನೀಡಿದರು.

ಇದನ್ನೂ ಓದಿ : Shoaib Malik: ಮ್ಯಾಚ್​ ಫಿಕ್ಸಿಂಗ್​ ಮಾಡಿದರೇ ಶೋಯೆಬ್ ಮಲಿಕ್?; ತಂಡದ ಮಾಲೀಕನ ಸ್ಪಷ್ಟನೆ ಏನು?

ರೋಹಿತ್ ಶರ್ಮಾ 24 ರನ್ ಗಳಿಸಿ ಯುವ ಜೊತೆಗಾರ ಯಶಸ್ವಿ ಜೈಸ್ವಾಲ್ ಜೊತೆಗೂಡಿ 80 ರನ್​ಗಳ ಜೊತೆಯಾಟವಾಡಿದರು. ಜ್ಯಾಕ್ ಲೀಚ್​​ ಎಸೆತಕ್ಕೆ ಬೆನ್ ಸ್ಟೋಕ್ಸ್ ಕ್ಯಾಚ್ ನೀಡಿ ಶರ್ಮಾ ಔಟ್ ಆದರು.

ರೋಹಿತ್​ ಕಾಲಿಗೆ ಬಿದ್ದ ವಿರಾಟ್ ಕೊಹ್ಲಿ​ ಅಭಿಮಾನಿ; ವಿಡಿಯೊ ವೈರಲ್​

ಹೈದರಾಬಾದ್: ಭಾರತ ಹಾಗೂ ಇಂಗ್ಲೆಂಡ್(India vs England 1st Test) ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್​ ಶರ್ಮ(Rohit Sharma) ಅವರ ಕಾಲಿಗೆ ಬಿದ್ದಿದ್ದಾನೆ. ಅಚ್ಚರಿ ಎಂದರೆ ಆತ ವಿರಾಟ್​ ಕೊಹ್ಲಿಯ(Virat Kohli) ಜೆರ್ಸಿ ಧರಿಸಿ ರೋಹಿತ್ ಕಾಲಿಗೆ ಬಿದ್ದದ್ದು. ಈ ವಿಡಿಯೊ ವೈರಲ್(Viral Video)​ ಆಗಿದೆ.​

ಭಾರತ ತಂಡದ ಬ್ಯಾಟಿಂಗ್​ ಇನಿಂಗ್ಸ್​ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಈ ಅಭಿಮಾನಿ ಮೈದಾನಕ್ಕೆ ನೇರವಾಗಿ ನುಗ್ಗಿದ್ದಾನೆ. ಬ್ಯಾಟಿಂಗ್​ ನಡೆಸುತ್ತಿದ್ದ ರೋಹಿತ್​ ಶರ್ಮ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾನೆ. ಬಳಿಕ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ. ಅಲ್ಲದೆ ಆತನ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ದಾರೆ. ಈ ಅಭಿಮಾನಿ ರೋಹಿತ್​ ಪಾದಕ್ಕೆರಗಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಅಚ್ಚರಿ ಎಂದರೆ ಆತ ವಿರಾಟ್​ ಕೊಹ್ಲಿಯ ಅಭಿಮಾನಿಯಂತೆ ಕಾಣುತ್ತಿದ್ದ. ಏಕೆಂದರೆ ಆತ ವಿರಾಟ್​ ಕೊಹ್ಲಿಯ ಜೆರ್ಸಿಯನ್ನು ಹಾಕಿದ್ದ. ವಿರಾಟ್​ ಕೊಹ್ಲಿಯ ಆಟ ನೋಡಲೆಂದೇ ಆತ ಬಂದಿದ್ದ ಎನಿಸುತ್ತದೆ. ಆದರೆ, ಕೊಹ್ಲಿ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ರೋಹಿತ್​ ಶರ್ಮ ಅವರು ಈ ಪಂದ್ಯದಲ್ಲಿ ಮೂರು ಬೌಂಡರಿ ನೆರವಿನಿಂದ 24 ರನ್​ ಬಾರಿಸಿ ಜಾಕ್​ ಲೀಚ್​ಗೆ ವಿಕೆಟ್​ ಒಪ್ಪಿಸಿದರು.

Exit mobile version