ರಾಜ್ಕೋಟ್ : ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಶತಕ ಬಾರಿಸಿದ ನಂತರ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal ) ಶನಿವಾರ ಪೆವಿಲಿಯನ್ ಗೆ ಮರಳಿದರು. ಇಂಗ್ಲೆಂಡ್ ಬೌಲರ್ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಆದರೂ ಜೈಸ್ವಾಲ್ ಗಾಯಗೊಂಡು ಪೆವಿಲಿಯನ್ ಗೆ ಮರಳಿದರು. ಇದು ಜೈಸ್ವಾಲ್ ಅವರ ಉತ್ತಮ ಇನಿಂಗ್ಸ್ ಬಳಿಕ ನಡೆದ ನಾಟಕೀಯ ಬೆಳವಣಿಗೆಯಾಯಿತು. ಅವರು ಬೆನ್ನು ನೋವಿನಿಂದ ಮೈದಾನ ತೊರೆಯುವಂತಾಗಿದ್ದು ತಂಡಕ್ಕೆ ಹಿನ್ನಡೆಯಾಯಿತು.
Yashasvi Jaiswal retired hurt….!!!
— Johns. (@CricCrazyJohns) February 17, 2024
What a knock – 104* runs from just 133 balls, dominated England bowling and given a great opportunity to the side to take 2-1 lead in the series. 👏 pic.twitter.com/CzDUlgjysz
ಜೈಸ್ವಾಲ್ 104 ರನ್ ಗಳಿಸಿದ್ದಾಗ ಬೆನ್ನು ನೋವಿನ ಸಮಸ್ಯೆ ಉಂಟಾಯಿತು. ದಿನದಾಟದ 8 ಓವರ್ ಗಳು ಬಾಕಿ ಇರುವಾಗ ಜೈಸ್ವಾಲ್ ಬೆನ್ನುನೋವಿನ ಸಮಸ್ಯೆ ಬಗ್ಗೆ ಹೇಳಿಕೊಂಡರು. ಎಡಗೈ ಆರಂಭಿಕ ಆಟಗಾರ ಉತ್ತಮ ಫಾರ್ಮ್ನಲ್ಲಿದ್ದರು. ಫಿಸಿಯೊ ಅವರಿಗೆ ನೋವು ನಿವಾರಕಗಳನ್ನು ನೀಡಿದರು. ಆದರೆ ಅದು ಪರಿಣಾಮಕಾರಿ ಎಂದು ತೋರಲಿಲ್ಲ.. ಮುಂದಿನ ಓವರ್ ಬಳಿಕ ವಾಪಸ್ ನಡೆದರು.
— Bangladesh vs Sri Lanka (@Hanji_CricDekho) February 17, 2024
ಯಶಸ್ವಿ ರಾಜ್ಕೋಟ್ ಟೆಸ್ಟ್ನಲ್ಲಿ ತಮ್ಮ ಮೂರನೇ ಶತಕದೊಂದಿಗೆ ಭಾರತಕ್ಕೆ ಎದುರಾಳಿ ವಿರುದ್ಧ ಸಂಪೂರ್ಣ ನಿಯಂತ್ರಣ ಸಿಗುವಂತೆ ಮಾಡಿದರು. ಇನ್ನು 2 ದಿನಗಳ ಆಟ ಬಾಕಿ ಉಳಿದಿದ್ದು, ಆತಿಥೇಯರು 322 ರನ್ಗಳ ಮುನ್ನಡೆ ಸಾಧಿಸಿದ್ದಾರೆ. 3ನೇ ದಿನದಾಟದಲ್ಲಿ 133 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿರುವ ಅವರು ನಾಲ್ಕನೇ ದಿನ ಅಬ್ಬರಿಸವುದು ಖಚಿತ.
ಜೈಸ್ವಾಲ್ ಅಬ್ಬರದ ಶತಕ, ಭಾರತಕ್ಕೆ 322 ರನ್ ಮುನ್ನಡೆ
ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashavi Jaiswal) ಅವರ ಅಮೋಘ ಶತಕ (114*) ಮತ್ತು ಶುಭ್ಮನ್ ಗಿಲ್ (Shubman Gill) ಬಾರಿಸಿದ ಅರ್ಧಶತಕದ (65) ನೆರವಿನಿಂದ ಮಿಂಚಿದ ಭಾರತ ತಂಡ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ನಿಧಾನವಾಗಿ ಮೇಲುಗೈ ಸಾಧಿಸುತ್ತಿದೆ. ಶನಿವಾರ ನಡೆದ ಮೂರನೇ ದಿನದಾ ಅಂತ್ಯಕ್ಕೆ ಭಾರತ ದ್ವಿತೀಯ ಇನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 196 ರನ್ ಬಾರಿಸಿದ್ದು, ಒಟ್ಟಾರೆಯಾಗಿ 322 ರನ್ಗಳ ಮುನ್ನಡೆ ಪಡೆದುಕೊಂಡಿದೆ. 126 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮವಾಗಿ ಬ್ಯಾಟ್ ಮಾಡಿ ಪ್ರಾಬಲ್ಯ ಸಾಧಿಸಿದೆ.
ಮೂರನೇ ದಿನದ ಆರಂಭದಲ್ಲಿ 2 ವಿಕೆಟ್ ನಷ್ಟಕ್ಕೆ 207 ರನ್ಗಳಿಂದ ಆಟ ಆರಂಭಿಸಿದ್ದ ಇಂಗ್ಲೆಂಡ್ ಬಳಿಕ ಕುಸಿತ ಕಂಡಿತು. ಬಜ್ಬಾಲ್ ತಂತ್ರ ಕೈಕೊಡುವ ಮೂಲಕ 319 ರನ್ಗಳಿಗೆ ಆಲ್ಔಟ್ ಆಯಿತು. 133 ರನ್ ಗಳಿಸಿ ಕ್ರೀಸ್ನಲ್ಲಿದ್ದ ಬೆನ್ ಡಕೆಟ್ (153) ಕೂಡ ಹೆಚ್ಚು ಹೊತ್ತು ಆಡಲಿಲ್ಲ. ಜೋ ರೂಟ್ 18 ರನ್, ಬೇರ್ಸ್ಟೋವ್0, ಬೆನ್ಫೋಕ್ಸ್ 13, ಬೆನ್ಸ್ಟೋಕ್ಸ್ 43, ರೆಹಾನ್ ಅಹ್ಮದ್ 6, ಟಾಮ್ ಹಾರ್ಟ್ಲೆ 9 ರನ್ ಗಳಿಸಿ ಔಟಾದರು.
ಇದನ್ನೂ ಓದಿ : Ravindra Jadeja : ತವರು ನೆಲದಲ್ಲಿ ಹೊಸ ಮೈಲ್ಲುಗಲ್ಲು ಸ್ಥಾಪಿಸಿದ ರವೀಂದ್ರ ಜಡೇಜಾ
ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 445 ರನ್ ಗಳಿಸಿತ್ತು. ಹೀಗಾಗಿ 126 ರನ್ಗಳ ಮನ್ನಡೆ ಪಡೆಯಿತು. ಅಲ್ಲದೆ, ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಆದಾಗ್ಯೂ ಪ್ರಥಮ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ, ದ್ವಿತೀಯ ಇನ್ನಿಂಗ್ಸ್ನಲ್ಲಿ 19 ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು.
ರೋಹಿತ್ ಪೆವಿಲಿಯನ್ಗೆ ಮರಳುತ್ತಿದ್ದಂತೆ ಜತೆಯಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅಬ್ಬರ ಪ್ರದರ್ಶನ ನೀಡಿದರು. 195 ಎಸೆತಗಳಲ್ಲಿ 155 ರನ್ಗಳ ಜತೆಯಾಟವಾಡಿದರು. ಪ್ರಥಮ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ 10, ಗಿಲ್ ಶೂನ್ಯಕ್ಕೆ ಔಟಾಗಿದ್ದರು. ಆದರೆ, ಎರಡನೇ ಇನಿಂಗ್ಸ್ನಲ್ಲಿ ಪ್ರತಿಕಾರ ತೀರಿಸಿದರು.
ಜೈಸ್ವಾಲ್ ಶತಕ, ಸೆಂಚುರಿಯತ್ತ ಗಿಲ್
ಇಂಗ್ಲೆಂಡ್ ಬೌಲರ್ಗಳನ್ನು ದಂಡಿಸಿದ ಯಶಸ್ವಿ ಜೈಸ್ವಾಲ್ ತನ್ನ ಮೂರನೇ ಟೆಸ್ಟ್ ಶತಕ ಸಿಡಿಸಿದರು. ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ನಡೆಸಿದರೂ ನಂತರ ಬೌಂಡಿ ಸಿಕ್ಸರ್ಗಳನ್ನು ಬಾರಿಸಿದರು. ಹೀಗಾಗಿ 122 ಎಸೆತಗಳಲ್ಲೇ ಮೂರಂಕಿ ಗಡಿ ದಾಟಿದರು. ಸದ್ಯ ಅವರು 133 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಬಾರಿಸಿ 104 ರನ್ ಗಳಿಸಿದ್ದಾರೆ. ಆದರೆ, ಬೆನ್ನು ನೋವಿನ ಕಾರಣಕ್ಕೆ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿದರು. ಈ ಸರಣಿಯಲ್ಲಿ ಜೈಸ್ವಾಲ್ ಅವರ 2ನೇ ಶತಕವಾಗಿದೆ.