Site icon Vistara News

Paris Olympics 2024 : ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಕಡಿಮೆ ಪದಕಗಳು ಸಿಗುವುದು ಯಾಕೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ

Paris Olympics 2024

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ ಜುಲೈ 26ರಂದು ಆರಂಭಗೊಂಡು ಆಗಸ್ಟ್​ 11ರವರೆಗೆ ನಡೆಯಲಿದ್ದು ಅದಕ್ಕಾಗಿನ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಎಲ್ಲ ದೇಶಗಳು ಕ್ರೀಡಾಪಟುಗಳು ಫ್ರಾನ್ಸ್​ನಲ್ಲಿ ಜಮಾಯಿಸಿದ್ದು ಅಲ್ಲಿನ ಪರಿಸರಕ್ಕೆ ಹೊಂದಿಕೊಂಡಂತೆ ಅಭ್ಯಾಸ ಆರಂಭಿಸಿದ್ದಾರೆ. ಜುಲೈ 26ರಂದು ಐಫೆಲ್ ಟವರ್ ಬಳಿಯ ಸೀನ್ ನದಿಯಲ್ಲಿ ಉದ್ಘಾಟನಾ ಮೆರವಣಿಗೆ ನಡೆಯಲಿದ್ದು ಒಲಿಂಪಿಕ್ಸ್ ಇತಿಹಾಸದಲ್ಲಿಯೇ ವಿಶೇಷ ಎನಿಸಲಿದೆ. ಭಾರತದ ಕ್ರೀಡಾಳುಗಳು ನಿಯೋಗವೂ ಫ್ರಾನ್ಸ್ ತಲುಪಿದ್ದು ಪದಕ ಗೆಲ್ಲುವುದಕ್ಕಾಗಿ ಅಲ್ಲಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.

ಒಲಿಂಪಿಕ್ಸ್ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಪದಕಗಳ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಪ್ರಮುಖವಾಗಿ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಯಾಕೆ ಕಡಿಮೆ ಪದಕಗಳು ಬರುತ್ತಿವೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಈ ಕೆಳಗೆ ಉತ್ತರ ನೀಡಲಾಗಿದೆ. ಹಿಂದಿಯಲ್ಲಿ ಒಲಿಂಪಿಕ್ಸ್​​ “ಖೇಲೋ ಕಾ ಮಹಾಕುಂಭ” ಎಂದು ಕರೆಯಲಾಗುತ್ತದೆ. ಯಾಕೆಂದರೆ ಇದು ಜಾಗತಿಕವಾಗಿ ನಡೆಯುವ ಅತಿ ದೊಡ್ಡ ಕ್ರೀಡಾ ಉತ್ಸವ. ಹೀಗಾಗಿ ಸ್ಪರ್ಧೆಗಳ ಮಟ್ಟವು ಗರಿಷ್ಠ ಪ್ರಮಾಣದಲ್ಲಿರುತ್ತವೆ. ಹೀಗಾಗಿ ಇಲ್ಲಿ ಪದಕ ಗೆಲ್ಲುವುದು ಸುಲಭವಲ್ಲ. ಅದಕ್ಕಾಗಿ ಜೀವನಪೂರ್ತಿ ಕಾಯಬೇಕಾಗುತ್ತದೆ. ಅನೇಕ ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲು ತಮ್ಮ ಇಡೀ ಜೀವನ ಸವೆಸುತ್ತಾರೆ. ಹೀಗಾಗಿ ಇಲ್ಲಿ ಕ್ರೀಡೆಗೆ ಹೆಚ್ಚು ಪ್ರಾಧಾನ್ಯತೆ ಇಲ್ಲದ ಭಾರತಕ್ಕೆ ಹೆಚ್ಚು ಪದಕಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ.

ಒಲಿಂಪಿಕ್ಸ್ ಅರ್ಹತೆ

ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯುವುದೇ ದೊಡ್ಡ ಸಾಹಸ. ಅರ್ಹತಾ ಕೂಟಗಳ ಸ್ಪರ್ಧೆಯ ಮಟ್ಟವು ಉತ್ತಮವಾಗಿರುತ್ತದೆ. ಹೀಗಾಗಿ ಅನೇಕ ಭಾರತೀಯ ಕ್ರೀಡಾಪಟುಗಳು ಅರ್ಹತೆ ಪಡೆಯಲು ವಿಫಲರಾಗುತ್ತಾರೆ. ಭಾರತೀಯರು ಜಮೈಕಾದ ಸ್ಪರ್ಧಿಗಳಂತೆ ಉತ್ತಮ ಓಟಗಾರರು ಅಥವಾ ಆಸ್ಟ್ರೇಲಿಯಾ ಅಥವಾ ಅಮೆರಿಕದ ಜನರಂತೆ ಉತ್ತಮ ಈಜುಗಾರರಲ್ಲ. ಅಥ್ಲೆಟಿಕ್ಸ್​ನಲ್ಲಿ ಹೆಚ್ಚು ಬಹುಮಾನ ಗೆಲ್ಲುವ ದೇಶಗಳು ಒಲಿಂಪಿಕ್ಸ್​ನಲ್ಲಿ ಪಾರಮ್ಯ ಮೆರೆಯುತ್ತವೆ. ಇದಕ್ಕೆ ಒಬ್ಬೊಬ್ಬರು ಉತ್ತಮವಾಗಿದ್ದರೆ ಸಾಲದು. ಇಡೀ ತಂಡವೇ ಉತ್ತಮವಾಗಿರಬೇಕು. ಭಾರತದಲ್ಲಿ ಇಂಥ ಸ್ಪರ್ಧಿಗಳ ಸಂಖ್ಯೆ ಕಡಿಮೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಪರ್ಧಾ ಪಟ್ಟಿಯಲ್ಲಿರುವ ಕ್ರೀಡೆಗಳು ಯಾವುವು? ಇವುಗಳಲ್ಲಿ ಅತ್ಯಂತ ಪ್ರಾಚೀನ ಕ್ರೀಡೆಗಳು ಯಾವುದೆಲ್ಲ?

ಭಾರತದಲ್ಲಿ ಕೆಲವೇ ಕೆಲವು ಕೆಲವರು ಪದಕ ಗೆಲ್ಲುವಷ್ಟು ಸ್ಪರ್ಧಾತ್ಮಕರಾಗಿದ್ದಾರೆ. ಭಾರತೀಯರು ಸ್ವಾಭಾವಿಕವಾಗಿ ಉತ್ತಮ ಪ್ರದರ್ಶನ ನೀಡಬಲ್ಲ ಕ್ರಿಕೆಟ್, ಕಬಡ್ಡಿಯಂತಹ ಕ್ರೀಡೆಗಳು ಒಲಿಂಪಿಕ್ಸ್​​ನ ಭಾಗವಲ್ಲ. ಭಾರತೀಯರು ಅಥ್ಲೆಟಿಕ್ಸ್, ಈಜು, ಜಿಮ್ನಾಸ್ಟಿಕ್ಸ್, ಜೂಡೋ, ರೋಯಿಂಗ್​ನಲ್ಲಿ ಇನ್ನೂ ಗರಿಷ್ಠ ಸಾಧನೆ ಮಾಡಿಲ್ಲ. ಇವು ಸ್ಪರ್ಧೆಗಳು ಮತ್ತು ಪದಕಗಳಲ್ಲಿ ಹೆಚ್ಚಿನ ಭಾಗವನ್ನು ಹೊಂದಿವೆ.

ಕಾಮನ್ವೆಲ್ತ್​ನಲ್ಲಿ ಯಾಕೆ ಗೆಲ್ಲುತ್ತದೆ?

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದಲ್ಲಿ ಹೆಚ್ಚು ಪದಕಗಳನ್ನು ಯಾಕೆ ಗೆಲ್ಲುತ್ತದೆ ಎಂಬ ಪ್ರಶ್ನೆಯೂ ಇದೆ. ಯಾಕೆಂದೆರ ಈ ಕೂಟವು ಕಡಿಮೆ ಸ್ಪರ್ಧಾತ್ಮಕವಾಗಿದೆ. ಕೇವಲ ವಸಾಹತುಶಾಹಿ ದೇಶಗಳು ಮಾತ್ರ ಇದರಲ್ಲಿ ಭಾಗವಹಿಸುತ್ತವೆ. ಇನ್ನು ಕ್ರೀಡೆಯಲ್ಲಿ ಸೂಪರ್ ಪವರ್ ಆಗಿರುವ ಚೀನಾ, ಅಮೆರಿಕ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದ ಭಾರತಕ್ಕೆ ಹೆಚ್ಚು ಪದಕ ಸಿಗುತ್ತದೆ.

ಕ್ರೀಡಾ ಸಂಸ್ಕೃತಿಯ ಕೊರತೆ

ಭಾರತದಲ್ಲಿ ಕ್ರೀಡಾ ಸಂಸ್ಕೃತಿ ಉತ್ತಮವಾಗಿಲ್ಲ. ಭ್ರಷ್ಟಾಚಾರ ಮತ್ತು ರಾಜಕೀಯ ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಮಕ್ಕಳನ್ನು ಹೆಚ್ಚು ಪ್ರೋತ್ಸಾಹಿಸಲಾಗುವುದಿಲ್ಲ. ಅಲ್ಲದೆ ಮೂಲಸೌಕರ್ಯಗಳು ವಿಶ್ವ ದರ್ಜೆಯದ್ದಲ್ಲದೆ. ಕ್ರೀಡಾ ಸೌಕರ್ಯ ಎಲ್ಲರಿಗೂ ಲಭ್ಯವಿಲ್ಲ. ಸಂತಸದ ಸಂಗತಿ ಎಂದರೆ ಇತ್ತೀಚಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚುತ್ತಿದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹತೆ ಪಡೆಯುತ್ತಾರೆ ಮತ್ತು ಒಲಿಂಪಿಕ್ಸ್ ನಲ್ಲಿ ಸಾಧನೆ ಮಾಡುವ ಹಾದಿಯಲ್ಲಿ ಸಾಗುತ್ತಿದ್ದಾರೆ.

ಕ್ರೀಡಾಪಟುಗಳ ಸಂಖ್ಯೆ ಕಡಿಮೆಯೇನಿಲ್ಲ

ವಾಸ್ತವವಾಗಿ ಭಾರತವು ಒಲಿಂಪಿಕ್ಸ್ ಗೆ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳನ್ನು ಕಳುಹಿಸುವ ದೇಶಗಳಲ್ಲಿ ಒಂದಾಗಿದೆ. 2016ರಲ್ಲಿ ಭಾರತವು 117 ಅಥ್ಲೀಟ್​ಗಳನ್ನು (63 ಪುರುಷರು ಮತ್ತು 54 ಮಹಿಳೆಯರು) ಒಲಿಂಪಿಕ್ಸ್​ಗೆ ಕಳುಹಿಸಿತ್ತು. ಆದರೂ ಕೇವಲ 2 ಪದಕಗಳನ್ನು ಪಡೆಯಿತು. 2012ರಲ್ಲಿ ಭಾರತ 83 ಅಥ್ಲೀಟ್ಸ್​ಗಳನ್ನು ಕಳುಹಿಸಿತ್ತು. ಆದರೆ 6 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿತು. ಇಲ್ಲಿ ಚಿನ್ನ ಇರಲಿಲ್ಲ. 2 ಬೆಳ್ಳಿ ಹಾಗೂ 4 ಕಂಚಿನ ಪದಕವಿತ್ತು.

202ರ ಟೋಕಿಯೊ ಒಲಿಂಪಿಕ್ಸ್​ಗೆ ಇದುವರೆಗಿನ ಗರಿಷ್ಠ 124 ಅಥ್ಲೀಟ್​ಗಳು ಹೋಗಿದ್ದರು. ಅಲ್ಲದೆ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಗರಿಷ್ಠ (1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು) ಸಾಧನೆ ಮಾಡಿದ್ದರು. ಭಾರತದಲ್ಲಿ ಹೆಚ್ಚಿನ ಜನರು ಕ್ರೀಡೆಯನ್ನು ವೃತ್ತಿಯಾಗಿ ಪರಿಗಣಿಸಲು ಆರಂಭಿಸಿದ ಬಳಿಕ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕ್ರೀಡೆಯಲ್ಲಿ ಭಾರತಕ್ಕೆ ಇನ್ನೂ ಹಿಡಿತ ಸಿಕ್ಕಿಲ್ಲ. ಹೀಗಾಗಿ ಪದಕಗಳನ್ನು ಗೆಲ್ಲುವುದು ಸುಲಭವಲ್ಲ.

ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್​​ಗೆ 16 ಕ್ರೀಡಾ ವಿಭಾಗಗಳಲ್ಲಿ 48 ಮಹಿಳಾ ಕ್ರೀಡಾಪಟುಗಳು ಸೇರಿದಂತೆ ಒಟ್ಟು 118 ಭಾರತದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪ್ಯಾರಿಸ್​​ಗೆ ತೆರಳುವ ಒಟ್ಟು 118 ಕ್ರೀಡಾಪಟುಗಳಲ್ಲಿ 26 ಖೇಲೋ ಇಂಡಿಯಾ ಕ್ರೀಡಾಪಟುಗಳು ಮತ್ತು 72 ಕ್ರೀಡಾಪಟುಗಳು ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದವರಾಗಿದ್ದಾರೆ.

ಮಕ್ಕಳ ಹಂತದಲ್ಲಿಯೇ ತರಬೇತಿ ಅಗತ್ಯ

ಭಾರತವು ಕ್ರೀಡೆಯನ್ನು ಬಾಲ್ಯದಲ್ಲಿಯೇ ಕಲಿಸಲು ವಿಫಲವಾಗಿದೆ. ಏಕೆಂದರೆ ಯುಎಸ್ಎ, ಚೀನಾ ಮತ್ತು ರಷ್ಯಾಗಳಂತೆ ಮಕ್ಕಳಿಗೆ ಬಾಲ್ಯದಿಂದಲೂ ಕ್ರೀಡೆಯನ್ನು ಕಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಲಿಂಪಿಕ್ಸ್​ನಲ್ಲಿ ಫಲಿತಾಂಶ ಸಿಗುವುದಿಲ್ಲ.

ಭಾರತವು ಪ್ರಸ್ತುತ ಕ್ರಿಕೆಟ್​ನಲ್ಲಿ ಅತ್ಯುತ್ತಮ ದೇಶ. (ಬಹುಶಃ ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಪಡೆಯುವ ಏಕೈಕ ಕ್ರೀಡೆ) ಇದು ದೀರ್ಘ ಆಟವಾಗಿರುವುದರಿಂದ ಮತ್ತು ಜಾಗತಿಕ ಕ್ರೀಡಾ ನಿಯಮಗಳಡಿ ಸೇರಲು ಬಿಸಿಸಿಐ ಹಿಂಜರಿಯುತ್ತಿರುವುದರಿಂದ ಜಾಗತಿಕ ಮಾನ್ಯತೆ ಸಿಗುತ್ತಿಲ್ಲ.

Exit mobile version