ಬೆಂಗಳೂರು: ಕಾರ್ಮಿಕರು ಯಾವುದೇ ಸಮಾಜ ಅಥವಾ ದೇಶದ ಶಕ್ತಿ. ಅವರಿಂದಲೇ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಕಾರ್ಮಿಕರು ರಾಷ್ಟ್ರೀಯ ಸಂಪತ್ತು. ಹೀಗೆ ಹಲವು ರೀತಿಯಲ್ಲಿ ಸಮಾಜದ ಅಭಿವೃದ್ಧಿಗೆ ನೆರವಾ ಗುವ ಕಾರ್ಮಿಕರಿಗಾಗಿಯೇ ಒಂದು ದಿನವಿದೆ. ಅದುವೇ ಕಾರ್ಮಿಕರ ದಿನ. ಅಂದರೆ ಮೇ1. ಜಗತ್ತಿನ ಹಲವಾರು ದೇಶಗಳಲ್ಲಿ ಕಾರ್ಮಿಕ ದಿನವನ್ನು (Labour Day ) ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಈ ಸಂದರ್ಭವನ್ನು ‘ಮೇ ದಿನ’ ಅಥವಾ ಕಾರ್ಮಿಕರ ದಿನ ಎಂದೂ ಕರೆಯಲಾಗುತ್ತದೆ. ಈ ದಿನವನ್ನು ಕೆಲಸ ಮಾಡುವವರಿಗೆ ವಿಶ್ರಾಂತಿ ದಿನವಾಗಿ ಆಚರಿಸಲಾಗುತ್ತದೆ
ಸಮಾಜಕ್ಕೆ ಕಾರ್ಮಿಕರ ಅಗತ್ಯತೆ ದೊಡ್ಡದು. ಹೀಗಾಗಿ ಅವರ ಹಕ್ಕುಗಳ ಬಗ್ಗೆಯೂ ಗಮನ ಹರಿಸಬೇಕು. ಹೀಗಾಗಿ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 1 ರಂದು ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಪ್ರಪಂಚದಾದ್ಯಂತದ ಕಾರ್ಮಿಕರು ತಮ್ಮ ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ. ಕಾರ್ಮಿಕ ದಿನವನ್ನು ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಈ ವಿಶೇಷ ಸಂದರ್ಭದ ಇತಿಹಾಸ, ಮಹತ್ವ ಅರಿಯೋಣ.
ಅಂತಾರಾಷ್ಟ್ರೀಯ ಕಾರ್ಮಿಕ ದಿನ 2024 ಇತಿಹಾಸ
ಅಂತಾರರಾಷ್ಟ್ರೀಯ ಕಾರ್ಮಿಕ ದಿನದ ಇತಿಹಾಸವು 1889 ರಲ್ಲಿ ಯುರೋಪ್, ಪ್ಯಾರಿಸ್ನಲ್ಲಿ ನಡೆದ ಸೋಶಿಯಲಿಸ್ಟ್ ಪಾರ್ಟಿಗಳ ಮೊದಲ ಸಭೆ (ಇಂಟರ್ನ್ಯಾಷನಲ್ ಕಾಂಗ್ರೆಸ್) ಮೇ 1 ರಂದು ನಡೆಯಿತು. ಅದನ್ನು ಕಾರ್ಮಿಕರಿಗೆ ಸಮರ್ಪಿಸಲು ಮತ್ತು ಅದನ್ನು ಅಂತರರಾಷ್ಟ್ರೀಯ ಕಾರ್ಮಿಕ ದಿನ ಎಂದು ಘೋಷಣೆ ಮಾಡಲಾಯಿತು. 1886 ರಲ್ಲಿ, ಅಮೆರಿಕದ ಕೆಲವು ಭಾಗಗಳಲ್ಲಿ ಕಾರ್ಮಿಕರು ಗರಿಷ್ಠ ಎಂಟು ಗಂಟೆಗಳ ಕೆಲಸದ ದಿನಕ್ಕೆ ಒತ್ತಾಯಿಸಿ ಮುಷ್ಕರ ನಡೆಸಿದ್ದರು. ಮುಷ್ಕರದ ಮೂರನೇ ದಿನ ಚಿಕಾಗೋದಲ್ಲಿ ಹಿಂಸಾಚಾರ ಉಂಟಾಯಿತು. ಈ ಘಟನೆಯನ್ನು ‘ದಿ ಹೇಮಾರ್ಕೆಟ್ ಅಫೇರ್’ ಎಂದು ಕರೆಯಲಾಯಿತು. ಇದು ಅಂತರರಾಷ್ಟ್ರೀಯ ಕಾರ್ಮಿಕ ದಿನದ ಸ್ಥಾಪನೆಗೆ ಕಾರಣವಾಯಿತು.
ಅಂತಾರಾಷ್ಟ್ರೀಯ ಕಾರ್ಮಿಕ ದಿನ 2024 ಮಹತ್ವ
ಕಾರ್ಮಿಕರ ಹೋರಾಟ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸುವುದು, ಅವರ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು ಅವರನ್ನು ಶೋಷಣೆಗೆ ಒಳಗಾಗದಂತೆ ತಡೆಯುವುದು ಕಾರ್ಮಿಕ ದಿನಾಚರಣೆಯ ಉದ್ದೇಶ. ಈ ಸಂದರ್ಭದಲ್ಲಿ, ಕಾರ್ಮಿಕರು ನ್ಯಾಯಯುತ ವೇತನ ಮತ್ತು ಉತ್ತಮ ಕೆಲಸದ ಪರಿಸ್ಥಿತಿಗಳಿಗೆ ಒತ್ತಾಯಿಸಿ ಬೀದಿಗಳಲ್ಲಿ ಜಾಥಾ ನಡೆಸುತ್ತಾರೆ. ಮೇ ದಿನದಿಂದ ಕಾರ್ಮಿಕರು ಮತ್ತು ಕಾರ್ಮಿಕ ಚಳುವಳಿಯು ಮಾಡಿದ ಐತಿಹಾಸಿಕ ಹೋರಾಟಗಳು ಮತ್ತು ಲಾಭಗಳನ್ನು ಸ್ಮರಿಸಲಾಗುತ್ತದೆ.
ಇದನ್ನೂ ಓದಿ: Labour Day 2024: ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳಿವು
ಅಂತಾರಾಷ್ಟ್ರೀಯ ಕಾರ್ಮಿಕ ದಿನ 2024 ಧ್ಯೇಯ
ಪ್ರತಿ ವರ್ಷ, ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಆಚರಣೆಗಾಗಿ ಹೊಸ ಥೀಮ್ ಅನ್ನು ಘೋಷಿಸಲಾಗುತ್ತದೆ. ಬದಲಾಗುತ್ತಿರುವ ಹವಾಮಾನದಲ್ಲಿ ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು ಈ ವರ್ಷದ ಧ್ಯೇಯ.
ಕಾರ್ಮಿಕರ ದಿನದ ಬಗ್ಗೆ ವಾಸ್ತವಾಂಶಗಳು
ಮೊದಲ ಬಾರಿಗೆ ಯುಎಸ್ ಕಾರ್ಮಿಕ ದಿನವನ್ನು ಸೆಪ್ಟೆಂಬರ್ 5, 1882ರ ಮಂಗಳವಾರ ನ್ಯೂಯಾರ್ಕ್ ನಗರದಲ್ಲಿ ಕೇಂದ್ರ ಕಾರ್ಮಿಕ ಒಕ್ಕೂಟವು ಯೋಜಿಸಿತು. ಕಾರ್ಮಿಕ ಚಳುವಳಿಯನ್ನು ಗೌರವಿಸುವ ದಿನವನ್ನು ಆಯೋಜಿಸುವ ಕಲ್ಪನೆ ಕೆನಡಾದಲ್ಲಿ ಹುಟ್ಟಿತು. 1872 ರಲ್ಲಿ ಮುಷ್ಕರ ನಿರತ ಕಾರ್ಮಿಕರಿಗೆ ಬೆಂಬಲವನ್ನು ತೋರಿಸಲು ಅವರು ‘ಒಂಬತ್ತು ಗಂಟೆಗಳ ಚಳುವಳಿ’ ನಡೆಸಿದರು.
ಒರೆಗಾನ್ 1887 ರಲ್ಲಿ ಕಾರ್ಮಿಕ ದಿನವನ್ನು ಕಾನೂನುಬದ್ಧ ರಜಾದಿನವಾಗಿ ಆಚರಿಸಿದ ಮೊದಲ ದೇಶ . 19ನೇ ಶತಮಾನದಲ್ಲಿ ಅಮೆರಿಕನ್ನರು ವಾರದಲ್ಲಿ ಏಳು ದಿನ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ನ್ಯೂಯಾರ್ಕ್ ನಗರದಲ್ಲಿ ಮೊದಲ ಬಾರಿ ಮೆರವಣಿಗೆ ನಡೆಸಿದ ಜಾಗದಲ್ಲಿ ಇನ್ನೂ ಕಾರ್ಮಿಕ ದಿನದ ಮೆರವಣಿಗೆ ಮಾಡಲಾಗುತ್ತದೆ. 1882 ರ ಕಾರ್ಮಿಕ ಮೆರವಣಿಗೆಯ ಉತ್ತರದ 20 ಬ್ಲಾಕ್ಗಳಲ್ಲಿನಡೆಯುತ್ತದೆ.