ಚಿತ್ರದುರ್ಗ: ಒಂದು ವರ್ಷದ ಹಸುಗೂಸು ಇರುವ ಮಹಿಳಾ ಪೊಲೀಸ್ ಪೇದೆಯೊಬ್ಬರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದ ಕಾರಣ, ತಾಯಿ ಮಗು ಬಿಸಿಲಲ್ಲಿ ಪರಿತಪಿಸಿದ ಪ್ರಸಂಗ ನಡೆದಿದೆ. ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್ ಸಂದರ್ಭದಲ್ಲಿ ಕಂಡು ಬಂದ ದೃಶ್ಯ ಕಂಡು ಬಂದಿದೆ.
ಚುನಾವಣಾ ಕಾರ್ಯಕ್ಕಾಗಿ ಮಹಿಳಾ ಪೊಲೀಸ್ ಚಿತ್ರದುರ್ಗಕ್ಕೆ ಬಂದಿದ್ದರು. ಜತೆಗೆ ಅವರು ಒಂದು ವರ್ಷದ ಮಗುವಿನ ಕರೆತಂದಿದ್ದರು. ಕೋಟೆ ನಾಡಿನ ಬಿಸಿಲಿನ ಬೇಗೆಗೆ ತಾಯಿ, ಮಗು ತತ್ತರಗೊಂಡಿದ್ದರು. ಸುಡು ಬಿಸಿಲು ಹಾಗೂ ಕಾಡುವ ಒಂದು ವರ್ಷದ ಮಗುವಿನಿಂದಾಗಿ ಪರದಾಟ ನಡೆಸಿದ್ದರು.
ಬೀದರ್ ಜಿಲ್ಲೆಯ ಚಿಟಗುಪ್ಪ ಪೊಲೀಸ್ ಠಾಣೆ ಸಿಬ್ಬಂದಿ ಶರಣಮ್ಮ ರದಾಡಿದ ಪೊಲೀಸ್ ಪೇದೆ. ತಮ್ಮ ಒಂದು ವರ್ಷದ ಮಗುವಿನ ಜೊತೆ ಚುನವಣಾ ಕಾರ್ಯಕ್ಕೆ ಹಾಜರಾಗಿದ್ದ ಶರಣಮ್ಮ. ಊಟ ಮಾಡಲೂ ಬಿಡದೇ ತಾಯಿಗೆ ಮಗು ತಾಯಿಗೆ ಕಾಡಿಸುತ್ತಿತ್ತು. ತಾಯಿ, ಮಗುವಿನ ಪರದಾಟ ಕಂಡು ಉಳಿದ ಸಿಬ್ಬಂದಿ ಅವರ ನೆರವಿಗೆ ಬಂದಿದ್ದರು.
ಸ್ಕೂಟರ್‌ನಲ್ಲೇ ಆನ್‌ಲೈನ್ ಮೀಟಿಂಗ್ ನಡೆಸಿದ ಮಹಿಳೆ
ಬೆಂಗಳೂರು: ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ ಸಿಟಿ ಎಂದೆಲ್ಲ ಕರೆಯಿಸಿಕೊಳ್ಳುವ ಬೆಂಗಳೂರು ಬಹುತೇಕ ಎಲ್ಲರಿಗೂ ಪ್ರಿಯ. ಹೀಗೆ ಎಲ್ಲರ ನೆಚ್ಚಿನ ನಮ್ಮ ಬೆಂಗಳೂರು ಬಗ್ಗೆ ಹಲವರ ಆಕ್ಷೇಪ ಇರುವುದು ಟ್ರಾಫಿಕ್ ವಿಚಾರದಲ್ಲಿ. ಟ್ರಾಫಿಕ್ ಸಮಸ್ಯೆ ಬೆಂಗಳೂರಿಗರನ್ನು ಹೆಚ್ಚಿನ ಸಂದರ್ಭಗಳಲ್ಲಿ ಹೈರಾಣಾಗಿಸುತ್ತದೆ (Bengaluru Traffic). ಬೆಂಗಳೂರಿನ ಈ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುವಂತಾಗಿದೆ. ಬೆಂಗಳೂರು ಟ್ರಾಫಿಕ್ ಬಗ್ಗೆ ತಹೇವಾರಿ ಕಥೆ ಹುಟ್ಟಿಕೊಳ್ಳುತ್ತದೆ. ಟ್ರಾಫಿಕ್‌ಗೆ ಸಿಲುಕಿ ಅನೇಕ ವಿಶಿಷ್ಟ ಸಂಗತಿ ಜರಗುತ್ತವೆ. ಅದಕ್ಕೆ ತಕ್ಕ ಉದಾಹರಣೆ ಎನ್ನುವಂತಿದೆ ಈ ವೈರಲ್ ವಿಡಿಯೊ (Viral Video). ಅಷ್ಟಕ್ಕೂ ಈ ವಿಡಿಯೊದಲ್ಲಿ ಏನಿದೆ? ಇಲ್ಲಿದೆ ವಿವರ.
ಇದನ್ನೂ ಓದಿ: khalistan Movement : ಲಂಡನ್ ಭಾರತ ಹೈಕಮಿಷನ್ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿ ಉಗ್ರ ಎನ್ಐಎ ವಶಕ್ಕೆ
ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಅಲ್ಲೇ ಆನ್‌ಲೈನ್ ಮೀಟಿಂಗ್‌ನಲ್ಲಿ ಭಾಗಿಯಾಗುತ್ತಾರೆ. ʼವರ್ಕ್ ಫ್ರಮ್ ಟ್ರಾಫಿಕ್ʼ ಎನ್ನುವ ಶೀರ್ಷಿಕೆಯಡಿ ವಿಡಿಯೊವನ್ನು ಶೇರ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಇದು ಸಾಮಾನ್ಯ ಎಂದೂ ಬರೆಯಲಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ.
ವಿಡಿಯೊದಲ್ಲಿ ಏನಿದೆ?
ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಮಹಿಳೆ ಸ್ಕೂಟರ್ ಅನ್ನು ಒಂದು ಬದಿಗೆ ನಿಲ್ಲಿಸಿ ಆನ್‌ಲೈನ್ ಮೀಟಿಂಗ್‌ಗೆ ಹಾಜರಾಗುತ್ತಾರೆ. ಕ್ಯಾಮೆರಾವನ್ನು ಮಹಿಳೆಯ ಮೊಬೈಲ್‌ಗೆ ಝೂಮ್ ಮಾಡಿದಾಗ ಅವರು ಮೀಟಿಂಗ್‌ನಲ್ಲಿ ಭಾಗವಹಿಸಿರುವುದು ಸ್ಪಷ್ಟವಾಗುತ್ತದೆ. ಜತೆಗೆ ವಿಡಿಯೊ ಹಲವು ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಆಗಿರುವುದನ್ನು ತೋರಿಸುತ್ತದೆ. ಮಹಿಳೆಗೆ ಕರ್ತವ್ಯ ಪ್ರಜ್ಞೆಗೆ ಹಲವರು ಶಬ್ಬಾಶ್‌ಗಿರಿ ತಿಳಿಸಿದ್ದಾರೆ.
ಆಧುನಿಕ ಯುಗದಲ್ಲಿ ವೈಯಕ್ತಿಕ ಬದುಕು ಮತ್ತು ಉದ್ಯೋಗವನ್ನು ಸಮತೋಲನಗೊಳಿಸಲೇಬೇಕಾದ ಅನಿವಾರ್ಯತೆಯನ್ನು ಇದು ಒತ್ತಿ ಹೇಳುತ್ತದೆ. ಜತೆಗೆ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆಯನ್ನೂ ಇದು ಪ್ರತಿನಿಧಿಸುತ್ತದೆ.