Site icon Vistara News

Doctor Assaulted : ಸುರಕ್ಷತೆಗಾಗಿ ವೈದ್ಯರ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ವೈದ್ಯೆಯ ಮೇಲೆ ಹಲ್ಲೆ!

ಮುಂಬೈ: ಕೋಲ್ಕೊತಾದ ಘಟನೆ ನಡೆದ ಬಳಿಕ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ವೈದ್ಯ ವೃತ್ತಿಯಲ್ಲಿರುವವರು ತಮಗೆ ಸುರಕ್ಷತೆಯ ಭರವಸೆ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವೆಲ್ಲದರ ನಡುವೆ ಮುಂಬೈಯಲ್ಲಿ ಮಹಿಳಾ ವೈದ್ಯರೊಬ್ಬರ ಮೇಲೆ ಕುಡಿದ ಮತ್ತಿನಲ್ಲಿದ್ದ ರೋಗಿ ಮತ್ತು ಅವರ ಸಂಬಂಧಿಕರು ಹಲ್ಲೆ ನಡೆಸಿದ (Doctor Assaulted) ಘಟನೆ ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಮುಂಜಾನೆ 3.30ರ ಸುಮಾರಿಗೆ ಆಸ್ಪತ್ರೆಯಲ್ಲಿ ವೈದ್ಯರು ವಾರ್ಡ್ ನಲ್ಲಿ ಕರ್ತವ್ಯದಲ್ಲಿದ್ದಾಗ ಈ ದಾಳಿ ನಡೆದಿದೆ ಎಂದು ನಿವಾಸಿ ವೈದ್ಯರು ತಿಳಿಸಿದ್ದಾರೆ.

ಆರೋಪಿ ರೋಗಿಯು ಮುಖದ ಮೇಲೆ ಗಾಯಗಳೊಂದಿಗೆ ಆಸ್ಪತ್ರೆಗೆ ಬಂದಿದ್ದ. ಅವನು ಚಿಕಿತ್ಸೆ ಪಡೆಯುತ್ತಿದ್ದಾಗ, ಅವನು ಮತ್ತು ಅವನ ಸಂಬಂಧಿಕರು ವೈದ್ಯೆಯನ್ನು ನಿಂದಿಸಿದ್ದರು ಹಾಗೂ ಬೆದರಿಕೆ ಹಾಕಿದ್ದರು. ಕುಡಿದ ಮತ್ತಿನಲ್ಲಿದ್ದ 5-6 ಜನರ ಗುಂಪು ತಮ್ಮ ಮೇಳೆ ದೈಹಿಕವಾಗಿ ಹಲ್ಲೆ ನಡೆಸಿದೆ, ರಕ್ಷಿಸಿಕೊಳ್ಳಲು ಪ್ರಯತ್ನಿಸುವಾಗ ತಮಗೆ ಗಾಯಗಳಾಗಿವೆ ಎಂದು ವೈದ್ಯೆ ದೂರಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Physical Abuse : 16 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ 69 ವರ್ಷದ ಮುದುಕ

ಇದು ಇಂದು ಮುಂಜಾನೆ 3.30ಕ್ಕೆ ಘಟನೆ ನಡೆದಿದೆ. ರೋಗಿ ಮತ್ತು ಅವರ ಕೆಲವು ಸಂಬಂಧಿಕರು ಕುಡಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ತಲುಪಿ ಮಹಿಳಾ ರೆಸಿಡೆನ್ಸ್​​ ವೈದ್ಯರೊಂದಿಗೆ ಜಗಳವಾಡಿದ್ದಾರೆ. ಇದು ಬಹಳ ಕಳವಳಕಾರಿ ವಿಷಯವಾಗಿದೆ” ಎಂದು ಬಿಎಂಸಿ ಎಂಎಆರ್​ಡಿ ಮುಖ್ಯಸ್ಥ ಡಾ.ಅಕ್ಷಯ್ ಮೋರೆ ತಿಳಿಸಿದ್ದಾರೆ. ಘಟನೆ ಬಳಿಕ ನಂತರ, ರೋಗಿ ಮತ್ತು ಅವರ ಕುಟುಂಬವು ಸ್ಥಳದಿಂದ ಪರಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ವೈದ್ಯರು ಪ್ರಸ್ತುತ ಸಿಯಾನ್ ಪೊಲೀಸ್ ಠಾಣೆಯಲ್ಲಿ ತನ್ನ ಹೇಳಿಕೆ ನೀಡಿದ್ದಾರೆ. ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ. ಪೊಲೀಸ್ ಠಾಣೆಗೆ ತಲುಪಿದ ಸಿಯಾನ್ ಆಸ್ಪತ್ರೆಯ ವೈದ್ಯರನ್ನು ಪ್ರತಿನಿಧಿಸುವ ಸಂಘವಾದ ಬಿಎಂಸಿ ಎಂಎಆರ್​ಡಿಯ ವೈದ್ಯರು, “ಆತಂಕಕಾರಿ ಘಟನೆಯು ಗಮನಾರ್ಹ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ” ಎಂದು ಹೇಳಿದ್ದಾರೆ. “ನಮ್ಮ ವೈದ್ಯರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ. ಈ ಪರಿಸ್ಥಿತಿಗೆ ತಕ್ಷಣದ ಗಮನ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಜಾರಿಗೆ ತರುವ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.

Exit mobile version