Site icon Vistara News

Women’s Asia Cup 2024 : ಏಷ್ಯಾ ಕಪ್​ನ ಮೊದಲ ಪಂದ್ಯದಲ್ಲೇ ಗೆದ್ದು ಇತಿಹಾಸ ಸೃಷ್ಟಿಸಿದ ನೇಪಾಳ ಮಹಿಳಾ ತಂಡ

Women's Asia Cup 2024

ಕೊಲೊಂಬೊ: ನೇಪಾಳ ಮಹಿಳಾ ತಂಡವು ಶುಕ್ರವಾರ (ಜುಲೈ 19) ಮಹಿಳಾ ಏಷ್ಯಾ 2024 ರಲ್ಲಿ (Women’s Asia Cup 2024) ವಿಜಯದೊಂದಿಗೆ ತನ್ನ ಅಭಿಯಾನ ಪ್ರಾರಂಭಿಸಿದೆ. ಅದಕ್ಕಿಂತ ಮಿಗಿಲಾಗಿ ಐತಿಹಾಸಿಕ ಗೆಲುವು ದಾಖಲಿಸಿದೆ. ಹೇಗೆಮದರೆ ಏಷ್ಯಾ ಕಪ್ ಟೂರ್ನಿಗೆ ಪ್ರವೇಶ ಪಡೆದ ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ ನೇಪಾಳವು ಸ್ಪರ್ಧೆಯಲ್ಲಿ ತಮ್ಮ ಮೊದಲ ಗೆಲುವನ್ನು ದಾಖಲಿಸಿದೆ. ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಯುಎಇ ವಿರುದ್ಧ ಆರು ವಿಕೆಟ್ ಗಳ ಆಕರ್ಷಕ ಗೆಲುವಿನೊಂದಿಗೆ ಅವರು ಪಂದ್ಯಾವಳಿಯಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು.

ನೇಪಾಳ ಮಹಿಳಾ ತಂಡ 2012ರಲ್ಲಿ ಏಷ್ಯಾಕಪ್​​ಗೆ ಪದಾರ್ಪಣೆ ಮಾಡಿತ್ತು. ಅವರು ಆ ಆವೃತ್ತಿಯಲ್ಲಿ 3 ಪಂದ್ಯಗಳನ್ನು ಆಡಿ ಎಲ್ಲಾ ಪಂದ್ಯಗಳನ್ನು ಕಳೆದುಕೊಂಡರು. 2016ರ ಏಷ್ಯಾಕಪ್​ಗೆ ನೇಪಾಳ ಅರ್ಹತೆ ಪಡೆದರೂ ಒಂದೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅವರು 5 ಪಂದ್ಯಗಳನ್ನು ಆಡಿ ಎಲ್ಲಾ ಪಂದ್ಯಗಳನ್ನು ಸೋತರು. 2018 ಮತ್ತು 2022ರಲ್ಲಿ ನೇಪಾಳ ತಂಡ ಏಷ್ಯಾಕಪ್​ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಇದೀಗ ಐತಿಹಾಸಿಕ ಗೆಲುವಿನೊಂದಿಗೆ ಏಷ್ಯಾ ಕಪ್ ಗೆ ಮರಳಿದೆ.

ನೇಪಾಳದ ಐತಿಹಾಸಿಕ ಗೆಲುವು

ಟಾಸ್ ಗೆದ್ದು ನೇಪಾಳ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಯುಎಇಯನ್ನು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 115 ರನ್ ಗಳಿಗೆ ನಿಯಂತ್ರಿಸಿತು. ಒಂದು ಹಂತದಲ್ಲಿ ಯುಎಇ 4 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿತ್ತು. ಖುಷಿ ಶರ್ಮಾ (39 ಎಸೆತಗಳಲ್ಲಿ 36 ರನ್) ಮತ್ತು ಕವಿಶಾ ಎಗೊಡಗೆ (26 ಎಸೆತಗಳಲ್ಲಿ 22 ರನ್) ಕುಸಿತವನ್ನು ತಪ್ಪಿಸಿದರು.

ಇದನ್ನೂ ಓದಿ: Suryakumar Yadav : ಮುಂದಿನ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕತ್ವವೂ ನಷ್ಟ

ಆದಾಗ್ಯೂ ಯುಎಇ ಇನ್ನೂ ಸವಾಲಿನ ಮೊತ್ತವನ್ನು ದಾಖಲಿಸಲು ಸಾಧ್ಯವಾಗಲಿಲ್ಲ. 116 ರನ್​ಗಳ ಗುರಿ ಬೆನ್ನತ್ತಿದ ನೇಪಾಳ 17 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕ ಆಟಗಾರ್ತಿ ಸಂಜನಾ ಖಡ್ಕಾ ಅಜೇಯ 72 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು 48 ಎಸೆತಗಳಲ್ಲಿ 11 ಬೌಂಡರಿಗಳನ್ನು ಗಳಿಸಿದರು. ಅವರನ್ನು ಹೊರತುಪಡಿಸಿದರೆ ನೇಪಾಳದ ಯಾವುದೇ ಬ್ಯಾಟರ್​ 10ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಯುಎಇ ಪರ ಎಗೊಡೇಜ್ 12 ರನ್​ಗೆ 3 ವಿಕೆಟ್ ಪಡೆದು ಮಿಂಚಿದರು.

ಹಾಲಿ ಚಾಂಪಿಯನ್ ಭಾರತ ವಿರುದ್ಧ ಸೆಣಸುವ ಮೊದಲು ನೇಪಾಳ ಪಾಕಿಸ್ತಾನವನ್ನು ಎದುರಿಸಲಿದೆ. ಮತ್ತೊಂದೆಡೆ, ಯುಎಇ ಪಾಕಿಸ್ತಾನವನ್ನು ಎದುರಿಸುವ ಮೊದಲು ಮೊದಲು ಭಾರತವನ್ನು ಎದುರಿಸಲಿದೆ.

Exit mobile version