Site icon Vistara News

Women’s Asia Cup 2024 : ದಾಖಲೆ ಬರೆದ ರಿಚಾ ಘೋಷ್​, ಇತಿಹಾಸ ಸೃಷ್ಟಿಸಿದ ಭಾರತ ತಂಡ

Women's Asia Cup 2024

ಡಂಬುಲ್ಲಾ: ಮಹಿಳೆಯರ ಏಷ್ಯಾಕಪ್ 2024ರಲ್ಲಿ (Women’s Asia Cup 2024) ಭಾರತ ತಂಡ ವಿನೂತನ ಸಾಧನೆ ಮಾಡಿದೆ. ಯುಎಇ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿ 200 ರನ್ ದಾಖಲಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ದೊಡ್ಡ ಮೊತ್ತವನ್ನು ಪೇರಿಸಿದೆ. ಈ ಹಿಂದೆ ಭಾರತ ಇಂಗ್ಲೆಂಡ್ ವಿರುದ್ಧ 198 ರನ್​ ಬಾರಿಸಿತ್ತು. ಇದೇ ವೇಳೆ ಭಾರತದ ವಿಕೆಟ್​ ಕೀಪರ್ ರಿಚಾ ಘೋಷ್​ ಕೂಡ ವಿನೂತನ ಸಾಧನೆ ಮಾಡಿದ್ದಾರೆ. ಅವರು ಮಹಿಳಾ ಏಷ್ಯಾಕಪ್​​ನಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ರಿಚಾ ಪಾತ್ರರಾಗಿದ್ದಾರೆ.

ಟಾಸ್ ಗೆದ್ದ ಯುಎಇ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತಕ್ಕೆ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಅವರು ಬಲವಾದ ಆರಂಭ ನೀಡಿದ್ದರು. ಆದರೆ ಎಡಗೈ ಆರಂಭಿಕ ಆಟಗಾರ್ತಿ ಮಂಧಾನಾ ಬೇಗನೆ ನಿರ್ಗಮಿಸಿದರು. ಶೆಫಾಲಿ ಕೇವಲ 18 ಎಸೆತಗಳಲ್ಲಿ 37 ರನ್ ಗಳಿಸಿದರು. ಅವರು ಔಟಾಗುವ ಮೊದಲು ಭಾರತ 5 ಓವರ್​ಗಳಲ್ಲಿ 52 ರನ್ ಗಳಿಸಿತು. ಹೇಮಲತಾ 2 ರನ್​ಗೆ ಔಟಾದ ಕಾರಣ ಭಾರತ ತೊಂದರೆಗೆ ಸಿಲುಕಿತು. ಹರ್ಮನ್ ಪ್ರೀತ್ ಮತ್ತು ಜೆಮಿಮಾ ಅವರು ಆಕ್ರಮಣಕಾರಿ ಆಟ ಆಡುವುದರೊಂದಿಗೆ ಇನಿಂಗ್ಸ್​​​ ಸ್ಥಿರಗೊಳಿಸಿದರು.

ಜೆಮಿಮಾ ಮತ್ತು ಕೌರ್​ ತಮ್ಮ ಪಾಲುದಾರಿಕೆಯಲ್ಲಿ 54 ರನ್ ಗಳಿಸಿದರು. ಜೆಮಿಮಾ 8 ಓವರ್​ಗಳು ಬಾಕಿ ಇರುವಾಗಲೇ ನಿರ್ಗಮಿಸಿದರು. ಈ ಸಮಯದಲ್ಲಿ ರಿಚಾ ಎಂಟ್ರಿ ಪಡೆದರು. ಭಾರತೀಯ ವಿಕೆಟ್ ಕೀಪರ್ ಬೌಂಡರಿ ಬಾರಿಸುವ ಮೊದಲು ಒಂದೆರಡು ಸಿಂಗಲ್ಸ್ ತೆಗೆದರು. ಇದರ ನಂತರ 15 ನೇ ಓವರ್​ನಲ್ಲಿ ಸಿಕ್ಸರ್ ಬಾರಿಸಿದರು. ನಂತರದ ಓವರ್​ನಲ್ಲಿ ಅವರು ಯುಎಇ ನಾಯಕಿ ಇಶಾ ಓಜಾ ಅವರಿಗೆ 4 ಫೋರ್ ಬಾರಿಸಿದರು.

ಇವರಿಬ್ಬರು ತಮ್ಮ ೫೦ ರನ್ ಗಳ ಜೊತೆಯಾಟವನ್ನು ತ್ವರಿತವಾಗಿ ದಾಖಲಿಸಿದರು. ರಿಚಾ ತನ್ನ ನಾಯಕಿಯೊಂದಿಗೆ ಸ್ಟ್ರೈಕ್ ಬದಲಾಯಿಸುವ ಯತ್ನ ಮಾಡಿದರು. ಒಂದು ಹಂತದಲ್ಲಿ ಭಾರತ 200 ರನ್​ಗಳ ಗಡಿ ದಾಟುವುದಿಲ್ಲ ಎಂದು ಅನಿಸಿತ್ತು. ಆದಾಗ್ಯೂ, ಭಾರತೀಯ ನಾಯಕಿ ಕೊನೆಯ 3 ಎಸೆತಗಳಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವ ಮೂಲಕ ಮೊದಲ ಬಾರಿ 200 ರನ್ ಬಾರಿಸಿದ ದಾಖಲೆ ಬರೆದರು. ರಿಚಾ 29 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನಿಂಗ್ಸ್​​ 12 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಭಾರತ 20 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.

ಇದನ್ನೂ ಓದಿ: Women’s Asia Cup : ಯುಎಇ ವಿರುದ್ಧ ಭಾರತದ ವನಿತೆಯರಿಗೆ ಭರ್ಜರಿ 78 ರನ್ ವಿಜಯ

2018ರಲ್ಲಿ ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ದ ಪಂದ್ಯದಲ್ಲಿ ಭಾರತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದ್ದೇ ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು.

Exit mobile version