Site icon Vistara News

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

IND vs SA:

ಚೆನ್ನೈ: ಬ್ಯಾಟಿಂಗ್​​ನಲ್ಲಿ ಶಫಾಲಿ ವರ್ಮಾ ಅವರ ದಾಖಲೆಯ ದ್ವಿಶತಕ (205), ಸ್ಮೃತಿ ಮಂಧಾನ ಬಾರಿಸಿದ ಅಮೋಘ ಶತಕ (149) ಹಾಗೂ ಸ್ನೆಹ್ ರಾಣಾ ಅವರ ವಿಶ್ವ ದಾಖಲೆಯ 10 ವಿಕೆಟ್​ಗಳ ನೆರವು ಪಡೆದ ಭಾರತ ಮಹಿಳೆಯ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ (IND vs SA) 10 ವಿಕೆಟ್​ಗಳ ಭರ್ಜರಿ ವಿಜಯ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಟೆಸ್ಟ್​ ಪಂದ್ಯದಲ್ಲಿ ಗೆಲುವಿಗೆ 37 ರನ್​​ಗಳ ಗುರಿ ಪಡೆದಿದ್ದ ಭಾರತ 9.2 ಓವರ್​​ಗಳಲ್ಲಿ ವಿಜಯ ದಾಖಲಿಸಿತು. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ರನ್ ​ಗಳಿಸಿ ಅಜೇಯರಾಗಿ ಉಳಿದರು.

ಟಾಸ್ ಗೆದ್ದು ಮೊದಲ ಬ್ಯಾಟ್​ ಮಾಡಿದ ಹರ್ಮನ್​ಪ್ರೀತ್ ಬಳಗ ಬೃಹತ್​ ಮೊತ್ತವನ್ನು ಪೇರಿಸಿತು. 115.1 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ದಾಖಲಿಸಿತು ಇದು ಮಹಿಳಾ ಟೆಸ್ಟ್​ ಕ್ರಿಕೆಟ್​​ನಲ್ಲಿ ವಿಶ್ವದಾಖಲೆಯ ಮೊತ್ತ. ಪ್ರತಿಯಾಗಿ ಆಡಿದ ದಕ್ಷಿಣ ಆಫ್ರಿಕಾ ಮಹಿಳೆಯರ ಬಳಗ ಮೊದಲ ಇನ್ನಿಂಗ್ಸ್​​ನಲ್ಲಿ 84.3 ಓವರ್​ಗಳಿಗೆ 266 ರನ್ ಬಾರಿಸಿ ಆಲ್ಔಟ್ ಆಯಿತು. 337 ರನ್​ಗಳ ಹಿನ್ನಡೆಯೊಂದಿಗೆ ಫಾಲೋ ಆನ್​ಗೆ ಗುರಿಯಾಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ, 373 ಗಳಿಸಿಇತು. ಭಾರತ 37 ರನ್​ಗಳ ಗುರಿ ಪಡೆದು ಸುಲಭ ಜಯ ದಾಖಲಿಸಿತು.

ಮಿಂಚಿದ ಆರಂಭಿಕರು

ಭಾರತದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಪಂದ್ಯದಲ್ಲಿ ಅತಿವೇಗದ ದ್ವಿಶತಕ ಹಾಗೂ ಸ್ಮೃತಿ ಮಂಧಾನ ಶತಕ ಸಿಡಿಸಿದರು. ಹೀಗಾಗಿ ಮೊದಲ ವಿಕೆಟ್​ಗೆ 292 ರನ್​ಗಳ ಜತೆಯಾಟ ಸಿಕ್ಕಿತು. ಸ್ಮೃತಿ ಮಂಧಾನ 161 ಬಾಲ್​ಗಳಲ್ಲಿ 26 ಬೌಂಡರಿ, 1 ಸಿಕ್ಸರ್ ಸಹಿತ 149 ರನ್ ಗಳಿಸಿ ಔಟಾದರು. ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್ ಸಹಿತ ದಾಖಲೆಯ ಹಾಗೂ ದ್ವಿಶತಕ ಸಿಡಿಸಿದರು. ಬಳಿಕ ಜೆಮಿಮಾ ರೋಡ್ರಿಗಸ್ 55, ಹರ್ಮನ್​ಪ್ರೀತ್ ಕೌರ್ 69, ರಿಚಾ ಘೋಷ್ 86 ರನ್ ಸಿಡಿಸಿದರು.

ಸ್ನೇಹ್ ರಾಣಾ ದಾಳಿಗೆ ಕುಸಿದ ಪ್ರವಾಸಿ ತಂತ

ಮೊದಲ ಇನ್ನಿಂಗ್ಸ್​ ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ಸ್ನೇಹ್ ರಾಣಾ ಬೌಲಿಂಗ್ ದಾಳಿಗೆ ತತ್ತರಿಸಿತು. ಇದರ ನಡುವೆಯೂ ಸುನೆ ಲುಸ್ (65) ಮತ್ತು ಮರಿಜಾನ್ನೆ ಕಪ್ (74) ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿದರು. ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಸ್ನೇಹ್​ ರಾಣಾ 8 ವಿಕೆಟ್ ಕಿತ್ತರು. ವೋಲ್ವಾರ್ಡ್ (20), ಅನ್ನೆಕೆ ಬಾಷ್ (39), ನಾಡಿನ್ ಡಿ ಕ್ಲರ್ಕ್ (39) ಸಣ್ಣ ಮೊತ್ತಗಳನ್ನು ಪೇರಿಸಿದರು. ಆದಾಗ್ಯೂ 266 ರನ್​​ಗಳಿಗೆ ಆಲೌಟ್ ಆಯಿತು. 337 ರನ್​ಗಳ ಹಿನ್ನಡೆ ಅನುಭವಿಸಿತು. ಹೀಗಾಗಿ ಭಾರತ ಫಾಲೋಆನ್ ಹೇರಿತು.

ವೋಲ್ವರ್ತ್​​ ಮತ್ತು ಸುನೆ ಲೂಸ್ ಶತಕ

337 ರನ್​ಗಳ ಹಿನ್ನಡೆ ಅನುಭವಿಸಿದ ಪ್ರವಾಸಿ ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿತು. ನಾಯಕಿ ಲಾರಾ ವೋಲ್ವರ್ತ್​​ ಮತ್ತು ಸುನೆ ಲುಸ್​ ಶತಕ ಸಿಡಿಸಿ ಗಮನ ಸೆಳೆದರು. ಲಾರಾ 16 ಬೌಂಡರಿ ಸಹಿತ 122 ರನ್ ಬಾರಿಸಿದರೆ ಲುಸ್​ 203 ಎಸೆತಗಳಲ್ಲಿ 18 ಬೌಂಡರಿ ಸಹಿತ 109 ರನ್ ಗಳಿಸಿದರು. ನಾಡಿನ್ ಡಿ ಕ್ಲರ್ಕ್ (61) ಅರ್ಧಶತಕ ಸಿಡಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ 8 ವಿಕೆಟ್ ಕಿತ್ತಿದ್ದ ಸ್ನೆಹ್ ರಾಣಾ ಎರಡನೇ ಇನ್ನಿಂಗ್ಸ್​​ನಲ್ಲಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್, ಶಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಆಟವನ್ನು ಕೊನೆಗೊಳಿಸಿದರು.

ಭಾರತಕ್ಕೆ 37 ರನ್​​ಗಳ ಗುರಿ ಸಿಕ್ಕಿತು. 4ನೇ ದಿನದಾಟದ ಕೊನೆಯಲ್ಲಿ ಸಾಧಾರಣ ಗುರಿ ಬೆನ್ನಟ್ಟಿದ ಭಾರತ 9.2 ಓವರ್​​​ಗಳಲ್ಲೇ 37 ರನ್ ಗಳಿಸಿತು. ಟೆಸ್ಟ್ ಸರಣಿಗೂ ಮುನ್ನ ಸೌತ್ ಆಫ್ರಿಕಾ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು.

Exit mobile version