Site icon Vistara News

IPL 2024 : ಆರ್​​ಸಿಬಿ ವಿರುದ್ಧ 287 ರನ್​ ಬಾರಿಸಿ ವಿಶ್ವ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​

IPL 2024

ಬೆಂಗಳೂರು: ಶಾಲಾ ಮಕ್ಕಳ ತಂಡದಂಥ ಆರ್​ಸಿಬಿ ಬೌಲಿಂಗ್ ವಿಭಾಗವನ್ನು ಚಿಂದಿ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​ ಐಪಿಎಲ್​​ನ 2024ರ (IPL 2024 ) 30ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 287 ರನ್​ ಬಾರಿಸಿದೆ. ಕೇವಲ ಮೂರು ವಿಕೆಟ್​ ಕಳೆದುಕೊಂಡು 20 ಓವರ್​ಗಳಲ್ಲಿ ಬಾರಿಸಿದ ಈ ರನ್ ಮೊತ್ತ ಐಪಿಎಲ್​ ಇತಿಹಾಸದಲ್ಲಿ ವಿಶ್ವ ದಾಖಲೆ. ಅಂದ ಹಾಗೆ ಕೆಲವು ದಿನಗಳ ಹಿಂದೆಯಷ್ಟೇ ಮುಂಬೈ ವಿರುದ್ಧ ಹೈದರಾಬಾದ್ ತಂಡ 277 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ಆ ದಾಖಲೆಯನ್ನು ಕೆಲವೇ ದಿನಗಳಲ್ಲಿ ಅದೇ ತಂಡ ಮುರಿದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್​ಗಳು ಸನ್ರೈಸರ್ಸ್​​ ಹೈದರಾಬಾದ್​ನ ಗುಣಮಟ್ಟದ ಬ್ಯಾಟಿಂಗ್ ವಿರುದ್ಧ ಸಂಪೂರ್ಣವಾಗಿ ವಿಫಲಗೊಂಡಿತು. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಬೌಲರ್​ಗಳು ಸರಾಸರಿ 10 ಕ್ಕಿಂತ ಹೆಚ್ಚು ರನ್​ ನೀಡಿದ್ದಾರೆ. 41 ಎಸೆತಗಳಲ್ಲಿ ಟ್ರಾವಿಸ್ ಹೆಡ್ ಬಾರಿಸಿದ ತ್ವರಿತ 102 ರನ್​ ಹಾಗೂ ಹೆನ್ರಿಚ್​ ಕ್ಲಾಸೆನ್ ಮತ್ತು ಏಡೆನ್ ಮಾರ್ಕ್ರಮ್ ಹಾಗೂ ಸಮದ್ ಬಾರಿಸಿದ ಅದ್ಭುತ ಇನಿಂಗ್ಸ್​​ನಿಂದ ಈ ದಾಖಲೆ ಸಾಧ್ಯವಾಯಿತು.

ಸನ್ರೈಸರ್ಸ್ ಬ್ಯಾಟರ್​ಗಳು ಆರಂಭದಿಂದಲೇ ಅಬ್ಬರಿಸಿದರು. ಪವರ್ ಪ್ಲೇ ಓವರ್ ಗಳಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಬೌಲರ್ ಗಳ ಮೇಲೆ ಆಕ್ರಮಣ ಮಾಡಿ 77 ರನ್​ ಗಳಿಸಿದರು. ಹೈದಾರಾಬಾದ್ ತಂಡ ತನ್ನ ಇನಿಂಗ್ಸ್​ನಲ್ಲಿ 22 ಸಿಕ್ಸರ್​ಗಳನ್ನು ಬಾರಿಸಿತು.

ಐಪಿಎಲ್​ನಲ್ಲಿ ಗರಿಷ್ಠ ಸ್ಕೋರ್​ಗಳ ದಾಖಲೆ ವಿವರ ಇಲ್ಲಿದೆ

ಅತಿವೇಗದ ನಾಲ್ಕನೇ ಶತಕ ಬಾರಿಸಿದ ಹೆಡ್​

ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟರ್​ ಟ್ರಾವಿಸ್ ಹೆಡ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೊಚ್ಚಲ ಶತಕ ಬಾರಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಹೆಡ್ 39 ಎಸೆತಗಳಲ್ಲಿ ಶತಕ ಬಾರಿಸಿದರು ಇನ್ನಿಂಗ್ಸ್ ನ ಆರಂಭದಿಂದಲೂ ಬ್ಯಾಟ್ಸ್ ಮನ್ ಗಳು ಶಿಕ್ಷಾರ್ಹ ಮನಸ್ಥಿತಿಯಲ್ಲಿದ್ದರು. ಅಭಿಷೇಕ್ ಶರ್ಮಾ ಅವರೊಂದಿಗೆ ಪವರ್ ಪ್ಲೇನಲ್ಲಿ ಪ್ರಾಬಲ್ಯ ಸಾಧಿಸಿದ ಹೆಡ್, ಶತಕದ ಜೊತೆಯಾಟ ತಂದರು. ಬಳಿಕ ಹೆಡ್​ ಹೆನ್ರಿಚ್​ ಕ್ಲಾಸೆನ್ ಅವರೊಂದಿಗೆ ಅಬ್ಬರ ಮುಂದುವರಿಸಿದರು.

ಇದು ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್, ಯೂಸುಫ್ ಪಠಾಣ್ ಮತ್ತು ಡೇವಿಡ್ ಮಿಲ್ಲರ್ ಬಳಿಕ ಇದು ನಾಲ್ಕನೇ ವೇಗದ ಶತಕವಾಗಿದೆ. ಹೆಡ್ ಆ ದಿನ 9 ಬೌಂಡರಿಗಳು ಮತ್ತು 8 ಸಿಕ್ಸರ್ ಗಳನ್ನು ಹೊಡೆದು ಶತಕ ಬಾರಿಸಿರುದು.. ಪಂದ್ಯದ 13 ನೇ ಓವರ್​ನಲ್ಲಿ ಲಾಕಿ ಫರ್ಗುಸನ್ ಹೆಡ್ ಅವರನ್ನು ಔಟ್ ಮಾಡಿದರು. ಆದರೆ ಆ ಹೊತ್ತಿಗೆ ಬ್ಯಾಟ್ಸ್ಮನ್ ಕೇವಲ 41 ಎಸೆತಗಳಲ್ಲಿ 102 ರನ್ ಗಳಿಸಿದ್ದರು.

ಎಸ್ಆರ್​​ಎಚ್​​ನಲ್ಲಿ ತಮ್ಮ ಚೊಚ್ಚಲ ಋತುವಿನಲ್ಲಿ ಹೆಡ್​ ಉತ್ತಮ ಫಾರ್ಮ್​ನಲ್ಲಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಬಲವಾದ ಜತೆಯಾಟ ರೂಪಿಸಿದ್ದಾರೆ. ಇಬ್ಬರೂ ಬ್ಯಾಟರ್ಗಳು ರೀಸ್ ಟೋಪ್ಲೆ ಮತ್ತು ಯಶ್ ದಯಾಳ್ ಅವರಂತಹ ಬೌಲರ್​ಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದರು.

ಇದನ್ನೂ ಓದಿ: MS Dhoni : ನೋವಿನಲ್ಲೂ ಸಿಕ್ಸರ್ ಬಾರಿಸುತ್ತಿದ್ದಾರೆ ಧೋನಿ; ದಿಗ್ಗಜನ ಬದ್ಧತೆಗೆ ಸಿಎಸ್​​ಕೆ ಕೋಚ್ ಮೆಚ್ಚುಗೆ

ಹೈದರಾಬಾದ್​​ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಎಸ್ಆರ್​ಎಚ್​​ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತ್ಯಧಿಕ ತಂಡದ ಮೊತ್ತವನ್ನು ಗಳಿಸಿದೆ. ಆ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಕೇವಲ 24 ಎಸೆತಗಳಲ್ಲಿ 62 ರನ್ ಗಳಿಸಿ ತಂಡದ ಮೊತ್ತವನ್ನು 277 ರನ್ ಗಳಿಸಲು ನೆರವಾಗಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಕಳುಹಿಸಿದ್ದರು.

ಮುಲ್ಲಾನ್ಪುರದಲ್ಲಿ ನಡೆದ ಪಂಜಾಬ್​ ವಿರುದ್ಧ ಮುಖಾಮುಖಿಯ ಬಳಿಕವು ಎಸ್ಆರ್​ಎಚ್​​ ತನ್ನ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

Exit mobile version