Site icon Vistara News

WPL 2024 : ಆರ್​ಸಿಬಿ ನಾಯಕಿ ಮಂಧಾನಾಗೆ ವಿಡಿಯೊ ಕಾಲ್ ಮಾಡಿ ಶುಭಾಶಯ ಹೇಳಿದ ವಿರಾಟ್​; ಇಲ್ಲಿದೆ ವಿಡಿಯೊ

Mandhana Virat

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ 2024 (WPL 2024) ರ ಫೈನಲ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು (RCB Womens). ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿಯನ್ನು (WPL Trophy) ಗೆದ್ದುಕೊಂಡಿತು. ಮಾರ್ಚ್ 17 ರ ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು.

ಟ್ರೋಫಿ ಗೆದ್ದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನಾ ಅವರಿಗೆ ಆರ್​ಸಿಬಿ ಪುರುಷರ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿಡಿಯೊ ಕಾಲ್ ಮಾಡಿ ಶುಭಾಶಯ ಹೇಳಿದರು. ಈ ಕ್ಷಣದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಪ್ರಶಸ್ತಿ ಗೆಲುವನ್ನು ಆಚರಿಸುತ್ತಿರುವ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಹಿಳೆಯರ ತಂಡದ ಚಿತ್ರವನ್ನು ಪೋಸ್ಟ್ ಮಾಡಿ ಅದಕ್ಕೆ “ಸೂಪರ್ ವುಮೆನ್” ಎಂದು ಶೀರ್ಷಿಕೆ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ 16 ವರ್ಷವಿರುವ ಕೊಹ್ಲಿಗಎ ಐಪಿಎಲ್ ಟ್ರೋಫಿ ಎತ್ತಲು ಇದುವರೆಗೂ ಸಾಧ್ಯವಾಗಲಿಲ್ಲ ಆದರೆ ಮಹಿಳಾ ತಂಡವು ಗೆದ್ದಿರುವುದನ್ನು ನೋಡಿ ಸ್ಟಾರ್ ಬ್ಯಾಟ್ಸ್ಮನ್ ಭಾವಪರವಶರಾದರು.

ವಿರಾಟ್ ಕೊಹ್ಲಿ-ಸ್ಮೃತಿ ಮಂದಾನ ಮಾತನಾಡುತ್ತಿರುವ ವಿಡಿಯೊ ಇಲ್ಲಿದೆ

ಅಭಿಮಾನಿಗಳಿಗೆ ಫುಲ್ ಖುಷಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳ ಪಾಲಿಗೆ ಭಾನುವಾರ ಅತ್ಯಂತ ಸಂತೋಷದಾಯಕ ದಿನ. 17 ವರ್ಷಗಳ ನಿಯತ್ತಿಗೆ ಸಿಕ್ಕ ಗೌರವ. 2008ರಲ್ಲಿ ಪುರುಷರ ಟೂರ್ನಿ (ಐಪಿಎಲ್​) ಮೂಲಕ ಆರಂಭಗೊಂಡ ಫ್ರಾಂಚೈಸಿ ಮೊಟ್ಟ ಮೊದಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಈ ಫ್ರಾಂಚೈಸಿ ಪಾಲಿಗೆ ಐತಿಹಾಸಿಕ ದಿನವಾಗಿದೆ. ಮಹಿಳೆಯರ ಪ್ರೀಮಿಯರ್ ಲೀಗ್​ನ (WPL 2024) ಎರಡನೇ ಆವೃತ್ತಿಯಲ್ಲಿ ಸ್ಮೃತಿ ಮಂಧಾನಾ ನೇತೃತ್ವದ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಆರ್​ಸಿಬಿ ಅಭಿಮಾನಿಗಳಿಗೆ ಸಮಾಧಾನ ಹೇಳಿದೆ. ಅದಕ್ಕೆ ಪೂರಕವಾಗಿ ವಿಶ್ವದ ಮೂಲೆಮೂಲೆಗಳಲ್ಲಿರುವ ಆರ್​ಸಿಬಿ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಾಚರಣೆ ಮಾಡಿದ್ದಾರೆ.

ಇದನ್ನೂ ಓದಿ: WPL 2024 : ಡಬ್ಲ್ಯುಪಿಎಲ್​ ಟ್ರೋಫಿ ಗೆದ್ದು ಆರ್​ಸಿಬಿ ಮರ್ಯಾದೆ ಉಳಿಸಿದ ಹೆಣ್ಮಕ್ಕಳು!


ಮೊದಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ತಂಡದ ಪ್ಲೇ ಆಫ್​ ಹಂತಕ್ಕೆ ಏರಲು ವಿಫಲಗೊಂಡಿತ್ತು. ಆದರೆ, ಎರಡನೇ ಆವೃತ್ತಿಯಲ್ಲಿ ಚಾಂಪಿಯನ್​ಪಟ್ಟಕ್ಕೇರಿದೆ. ಈ ಮೂಲಕ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎಂಬ ಮಾತನ್ನು ಉಳಿಸಿಕೊಂಡಿದೆ.i

ಆರ್​ಸಿಬಿ ಫ್ರಾಂಚೈಸಿ ಐಪಿಎಲ್​ ಕ್ರಿಕೆಟ್​ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಅದರ ಪುರುಷರ ತಂಡಕ್ಕೆ ಇದುವರೆಗೆ ಒಂದು ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಮಹಿಳೆಯರ ತಂಡ ಗೆಲುವು ತಂದುಕೊಟ್ಟಿದೆ.

Exit mobile version