ನವ ದೆಹಲಿ: ದೀಪ್ತಿ ಶರ್ಮಾ ಏಕಾಂಗಿ ಹೋರಾಟದ ನಡುವೆಯೂ ಯುಪಿ ವಾರಿಯರ್ಸ್ ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2024) ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸೋಲು ಕಂಡಿದೆ. ಪ್ಲೇಆಫ್ ಪ್ರವೇಶದ ಸಾಧ್ಯತೆಯ ಕಾರಣಕ್ಕೆ ಮಹತ್ವ ಪಡೆದಿದ್ದ ಈ ಪಂದ್ಯದಲ್ಲಿ ಯುಪಿ ವಿರುದ್ಧ ಗುಜರಾತ್ ಜೈಂಟ್ಸ್ 8 ರನ್ಗಳಿಂದ ಗೆಲುವು ಸಾಧಿಸಿದೆ. ಯುಪಿ ಪ್ಲೇಆಫ್ನಿಂದ ಹೊರಕ್ಕೆ ಬಿದ್ದಿಲ್ಲ. ಇದೇ ವೇಳೆ ಈ ಪಂದ್ಯದ ಫಲಿತಾಂಶದ ಹಿನ್ನೆಲೆಯಲ್ಲಿ ಆರ್ಸಿಬಿಗೆ ನಾಕೌಟ್ ಅವಕಾಶ ಸೃಷ್ಟಿಯಾಗಿದೆ.
A bright spell and a bright future ahead ✨
— Women's Premier League (WPL) (@wplt20) March 11, 2024
Most economical spell by an Indian bowler in #TATAWPL 👏👏
Well done, Shabnam Shakil 🙌
📽️ Match Highlights: https://t.co/yiwvrLlCZI pic.twitter.com/gLnMJ7eIiP
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 152 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಯುಪಿ ತನ್ನ ಓವರ್ಗಳು ಮುಕ್ತಾಯಗೊಂಡಾಗ 5 ವಿಕೆಟ್ಗೆ 144 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
What A Start 👏
— Women's Premier League (WPL) (@wplt20) March 11, 2024
Young Shabnam Shakil shocks #UPW with 2 big wickets in the first over
Live 💻 📱https://t.co/WHTYqs2Bd5#TATAWPL | #GGvUPW pic.twitter.com/KL4N47aofI
ಗುಜರಾತ್ ನಿರೀಕ್ಷೆಯಂತೆ ಉತ್ತಮ ಆರಂಭ ಪಡೆಯಿತು. ಲಾರಾ ವೋಲ್ವಾರ್ಡ್ಟ್ 30 ಬಾಲ್ಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ ಭರ್ಜರಿ 43 ರನ್ ಕಲೆ ಹಾಕಿ ಔಟಾದರು. ಬೆತ್ ಮೂನಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಲಾರಾ ಔಟಾದ ಬೆನ್ನಲ್ಲೇ ಗುಜರಾತ್ ಕುಸಿತ ಕಂಡಿತು. ಹೇಮಲತಾ 0, ಫೀಬಿ ಲಿಚ್ಫೀಲ್ಡ್ 4, ಆ್ಯಶ್ಲೆ ಗಾರ್ಡ್ನರ್ 15, ಭಾರತಿ ಫುಲ್ಮಾಲಿ 1, ಕ್ಯಾಥರಿನ್ ಬ್ರೈಸ್ 11, ತನುಜಾ ಕನ್ವರ್ 1, ಶಬ್ನಮ್ ಶಕೀಲ್ 0 ರನ್ ಗಳಿಸಿ ನಿರಾಸೆ ಮೂಡಿಸಿದರು. ಬೆತ್ ಮೂನಿ 52 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 74 ರನ್ ಗಳಿಸಿದದರು. ಅವರು ಕೊನೆಯ ಓವರ್ನಲ್ಲಿ 5 ಬೌಂಡರಿ ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟಿಸಿದರು. ಯುಪಿ ಪರ ಸೋಫಿ ಎಕ್ಲೆಸ್ಟೊನ್ 3, ದೀಪ್ತಿ 2 ವಿಕೆಟ್ ಪಡೆದರು.
ಗೆಲುವಿಗಾಗಿ ಹೋರಾಡಿದ ದೀಪ್ತಿ ಶರ್ಮಾ
ಗುರಿ ಬೆನ್ನಟ್ಟಿದ ಯುಪಿ ಎಂಬಂತೆ ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಕೇವಲ 35 ರನ್ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ಶಬ್ನಮ್ ಶಕೀಲ್ ದಾಳಿಗೆ ನಡುಗಿದ ಯುಪಿ, ಬೇಗನೇ 5 ವಿಕೆಟ್ಗಳನ್ನು ಕಳೆದುಕೊಂಡಿತು. ಸಂಕಷ್ಟದಲ್ಲಿದ್ದ ತಂಡಕ್ಕೆ ದೀಪ್ತಿ ಶರ್ಮಾ ಮತ್ತು ಪೂನಂ ಖೇಮ್ನಾರ್ ಆಸರೆಯಾದರು. ಈ ಜೋಡಿ ಅಜೇಯ 109 ರನ್ಗಳ ಪಾಲುದಾರಿಕೆ ನೀಡಿತು. ದೀಪ್ತಿ 60 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 88 ರನ್ ಬಾರಿಸಿದರು. ಕೊನೆಯ ಓವರ್ನಲ್ಲಿ ವಾರಿಯರ್ಸ್ ಗೆಲುವಿಗೆ 26 ರನ್ ಬೇಕಿತ್ತು. ದೀಪ್ತಿ 17 ರನ್ ಚಚ್ಚಿದರೂ 8 ರನ್ಗಳಿಂದ ಸೋಲು ಕಾಣಬೇಕಾಯಿತು.
ಈ ಸುದ್ದಿಯನ್ನೂ ಓದಿ : Ranji Trophy Final: ರಹಾನೆ ಶತಕ; ಭಾರೀ ಮುನ್ನಡೆ ಸಾಧಿಸಿದ ಮುಂಬೈ
ಆರ್ಸಿಬಿಗೆ ಪ್ಲೇಆಫ್ ಚಾನ್ಸ್
ಪ್ಲೇಆಫ್ಗೆ ಪ್ರವೇಶಿಸಲು ಮೂರು ತಂಡಗಳ ನಡುವೆ ಪೈಪೋಟಿ ಮುಂದುವರೆದಿದೆ. ಯುಪಿ ತನ್ನ ಪಂದ್ಯಗಳ ಖೋಟಾ ಮುಗಿಸಿದ್ದರೆ, ರೇಸ್ನಲ್ಲಿರುವ ಆರ್ಸಿಬಿ ಮತ್ತು ಗುಜರಾತ್ ಇನ್ನೂ ಒಂದು ಪಂದ್ಯವನ್ನಾಡಲಿವೆ. ಆದರೆ ಆರ್ಸಿಬಿ ಮತ್ತು ಯುಪಿ ತಲಾ 6 ಅಂಕ ಪಡೆದಿದ್ದರೆ, ಗುಜರಾತ್ 4 ಅಂಕ ಪಡೆದಿದೆ. ಆರ್ಸಿಬಿ ಸೋತು, ಗುಜರಾತ್ ಗೆದ್ದರೆ ಆಗ ಮೂರು ತಂಡಗಳು ಸಹ 6 ಅಂಕ ಪಡೆಯಲಿದ್ದು, ಆಗ ಉತ್ತಮ ನೆಟ್ರನ್ ರೇಟ್ ಇರುವ ತಂಡವು ಪ್ಲೇ ಆಫ್ ಪ್ರವೇಶಿಸಲಿದೆ. ಒಂದು ವೇಳೆ ಆರ್ಸಿಬಿ ಗೆದ್ದರೆ ಯಾವುದೇ ಪೈಪೋಟಿ ಇಲ್ಲದೆ 8 ಅಂಕಗಳೊಂದಿಗೆ ನಾಕೌಟ್ ತಲುಪಲಿದೆ.