ವಿಶಾಖಪಟ್ಟಣಂ: ಇಲ್ಲಿ ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ (ind vs eng) ಎರಡನೇ ದಿನದಾಟದಲ್ಲಿ ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ದ್ವಿಶತಕ ಬಾರಿಸಿದ್ದಾರೆ. 22 ವರ್ಷ 77 ದಿನ ವಯಸ್ಸಿನ ಜೈಸ್ವಾಲ್ 277 ಎಸೆತಗಳಲ್ಲಿ ಶತಕ ಬಾರಿಸಿ ಭಾರತ ತಂಡಕ್ಕೆ ಮೊದಲ ಇನಿಂಗ್ಸ್ನಲ್ಲಿ 350+ ಮೊತ್ತಕ್ಕೆ ಮುನ್ನಡೆಸಿದರು. ಅವರು ಈ ವೇಳೆ ಭಾರತ ಪರ ದ್ವಿ ಶತಕ ಬಾರಿಸಿದ ಕಿರಿಯ ಆಟಗಾರರ ಪಟ್ಟಿ ಸೇರಿಕೊಂಡರು.
ಭಾರತದ ಪರ ಮೊದಲ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ ಅತ್ಯುತ್ತಮ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಜೈಸ್ವಾಲ್ ನಂತರ ಭಾರತೀಯ ಬ್ಯಾಟರ್ ಗಳಿಸಿದ ಎರಡನೇ ಗರಿಷ್ಠ ಸ್ಕೋರ್ ಕೇವಲ 32 ರನ್. ಚೊಚ್ಚಲ ಆಟಗಾರ ರಜತ್ ಪಾಟಿದಾರ್ ಆಕರ್ಷಕವಾಗಿ ಕಾಣುತ್ತಿದ್ದರು. ಜೈಸ್ವಾಲ್ ತಮ್ಮ ದ್ವಿಶತಕದ ಹಾದಿಯಲ್ಲಿ 18 ಬೌಂಡರಿ ಮತ್ತು 7 ಸಿಕ್ಸರ್ಗಳನ್ನು ಬಾರಿಸದ್ದಾರೆ. ಇದಕ್ಕೂ ಮುನ್ನ ಜೈಸ್ವಾಲ್ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯದಲ್ಲಿ 171 ರನ್ ಗಳಿಸಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಮೂರನೇ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಜೈಸ್ವಾಲ್ ಪಾತ್ರರಾಗಿದ್ದಾರೆ. ಮಾಜಿ ಬ್ಯಾಟರ್ ವಿನೋದ್ ಕಾಂಬ್ಳಿ 1993 ರಲ್ಲಿ ವಾಂಖೆಡೆಯಲ್ಲಿ ಇಂಗ್ಲೆಂಡ್ ವಿರುದ್ಧ 21 ವರ್ಷ 32 ದಿನಗಳ ವಯಸ್ಸಿನಲ್ಲಿ ದ್ವಿಶತಕ ಬಾರಿಸಿ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುನಿಲ್ ಗವಾಸ್ಕರ್ 21 ವರ್ಷ 277 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಭಾರತದ ಎರಡನೇ ಕಿರಿಯ ಬ್ಯಾಟರ್ ಆಗಿದ್ದಾರೆ.
19 ವರ್ಷ 140 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಸಿಕ್ಸರ್ ಮೂಲಕ ದ್ವಿಶತಕ
. ಇಂಗ್ಲೆಂಡ್ನ ಸ್ಪಿನ್ನರ್ ಶೋಯೆಬ್ ಬಶೀರ್ ವಿರುದ್ಧ ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ ಜೈಸ್ವಾಲ್ ದ್ವಿಶತಕ ಸಾಧನೆ ಮಾಡಿದ್ದಾರೆ. ಪಂದ್ಯದ ೧೦2 ನೇ ಓವರ್ ನಲ್ಲಿ ಎರಡೂ ಶಾಟ್ ಗಳು ಸ್ವೀಪ್ ಆಗಿದ್ದವು. ಜೈಸ್ವಾಲ್ ಸ್ಪಿನ್ನರ್ ಬಶೀರ್ ವಿರುದ್ಧ ಆಕ್ರಮಣಕಾರಿಯಾಗಿ ಆಡಿದರು. ಜೈಸ್ವಾಲ್ ಅವರ ಇನ್ನಿಂಗ್ಸ್ ಭಾರತ ತಂಡಕ್ಕೆ 350 ರನ್ಗಳ ಮೊತ್ತ ದಾಟಲು ಸಹಾಯ ಮಾಡಿತು.
ಇದನ್ನೂ ಓದಿ : Yashasvi Jaiswal : ಧೋನಿ, ಸೆಹ್ವಾಗ್ ಇರುವ ವಿಶೇಷ ಪಟ್ಟಿಗೆ ಸೇರ್ಪಡೆಗೊಂಡ ಯಶಸ್ವಿ ಜೈಸ್ವಾಲ್
ಟೆಸ್ಟ್ ಪಂದ್ಯದ ಮೊದಲ ದಿನವೂ ಜೈಸ್ವಾಲ್ ಕ್ಲಾಸ್ ವಿಭಿನ್ನವಾಗಿದ್ದರು. ಬ್ಯಾಟರ್ ವೇಗ ಮತ್ತು ಸ್ಪಿನ್ ಎರಡರ ವಿರುದ್ಧವೂ ಉತ್ತಮವಾಗಿ ಕಾಣಿಸಿಕೊಂಡರು. ಮೊದಲ ದಿನದುದ್ದಕ್ಕೂ ಶಿಸ್ತುಬದ್ಧವಾಗಿ ಬ್ಯಾಟಿಂಗ್ ಮಾಡಿದ್ದಾರೆ.